ICC T20 Rankings: 6ನೇ ಸ್ಥಾನಕ್ಕೆ ಜಾರಿದ ಕೆ.ಎಲ್. ರಾಹುಲ್‌

By Suvarna NewsFirst Published Nov 18, 2021, 2:20 PM IST
Highlights

* ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪ್ರಕಟ

* ಒಂದು ಸ್ಥಾನ ಕುಸಿತ ಕಂಡ ಕನ್ನಡಿಗ ಕೆ.ಎಲ್ ರಾಹುಲ್

* ಶ್ರೇಯಾಂಕದಲ್ಲಿ ಗಣನೀಯ ಏರಿಕೆ ಕಂಡ ವಾರ್ನರ್

ದುಬೈ(ನ.18): ಐಸಿಸಿ ನೂತನ ಟಿ20 ಶ್ರೇಯಾಂಕ (ICC T20 Rankings) ಪ್ರಕಟಗೊಂಡಿದ್ದು, ಕನ್ನಡಿಗ ಕೆ.ಎಲ್ ರಾಹುಲ್ (KL Rahul) ಒಂದು ಸ್ಥಾನ ಕುಸಿತ ಕಂಡು ಆರನೇ ಸ್ಥಾನಕ್ಕೆ ಜಾರಿದ್ದಾರೆ. ಇನ್ನು ವಿರಾಟ್ ಕೊಹ್ಲಿ (Virat Kohli) ಎಂಟನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯವಾದ ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಟೂರ್ನಿಯಲ್ಲಿ ಕೆ.ಎಲ್. ರಾಹುಲ್ ಹ್ಯಾಟ್ರಿಕ್ ಅರ್ಧಶತಕಗಳನ್ನು ಸಿಡಿಸಿದ್ದರು. 29 ವರ್ಷದ ರಾಹುಲ್, ಆಫ್ಘಾನಿಸ್ತಾನ, ಸ್ಕಾಟ್ಲೆಂಡ್ ಹಾಗೂ ನಮೀಬಿಯಾ ವಿರುದ್ದ ಕ್ರಮವಾಗಿ 69, 50 ಹಾಗೂ 54 ರನ್ ಬಾರಿಸಿದ್ದರು. ಹೀಗಿದ್ದೂ ಟೀಂ ಇಂಡಿಯಾ (Team India) ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್‌ಗೇರುವಲ್ಲಿ ವಿಫಲವಾಗಿತ್ತು. ಸದ್ಯ ರಾಹುಲ್‌ ನ್ಯೂಜಿಲೆಂಡ್ ಎದುರಿನ ಟಿ20 ಸರಣಿಗೆ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಇನ್ನೊಂದೆಡೆ ಟೀಂ ಇಂಡಿಯಾ ಟಿ20 ಮಾಜಿ ನಾಯಕ ವಿರಾಟ್ ಕೊಹ್ಲಿ 8ನೇ ಸ್ಥಾನದಲ್ಲೇ ಮುಂದುವರೆದಿದ್ದಾರೆ. ಬ್ಯಾಟಿಂಗ್‌ ವಿಭಾಗದಲ್ಲಿ ಟಾಪ್ 10 ಪಟ್ಟಿಯಲ್ಲಿ ಸ್ಥಾನಪಡೆದ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಈ ಇಬ್ಬರು ಮಾತ್ರ ಕಾಣಿಸಿಕೊಂಡಿದ್ದಾರೆ.

T20 World Cup: ಅನುಭವಿ ಆಟಗಾರರಿದ್ದರೂ ನ್ಯೂಜಿಲೆಂಡ್‌ಗೆ ಒಲಿಯದ ಅದೃಷ್ಟ !

ಇನ್ನುಳಿದಂತೆ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ನೆರವಾದ ಡೇವಿಡ್ ವಾರ್ನರ್ (David Warner) ಹಾಗೂ ಮಿಚೆಲ್ ಮಾರ್ಶ್‌ (Mitchell Marsh) ಶ್ರೇಯಾಂಕದಲ್ಲಿ ಗಣನೀಯ ಬದಲಾವಣೆಗಳಾಗಿವೆ. ನ್ಯೂಜಿಲೆಂಡ್ (New Zealand Cricket) ಎದುರಿನ ಫೈನಲ್‌ ಪಂದ್ಯದಲ್ಲಿ ಅಜೇಯ 77 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದ್ದ ಮಿಚೆಲ್ ಮಾರ್ಶ್‌ 6 ಸ್ಥಾನ ಜಿಗಿತ ಕಂಡು 13ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಇನ್ನೊಂದೆಡೆ ಡೇವಿಡ್ ವಾರ್ನರ್ ಶ್ರೇಯಾಂಕದಲ್ಲೂ ಮಹತ್ವದ ಬದಲಾವಣೆಗಳಾಗಿದ್ದು, 8 ಸ್ಥಾನ ಜಿಗಿದು ವಾರ್ನರ್ 33ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

India Tour Pakistan ಪಾಕಿಸ್ತಾನಕ್ಕೆ ಹೋಗುವ ಬಗ್ಗೆ ಈಗಲೇ ನಿರ್ಧರಿಸಿಲ್ಲ: ಕ್ರೀಡಾ ಸಚಿವ ಅನುರಾಗ್ ಠಾಕೂರ್‌

ಬ್ಯಾಟರ್‌ಗಳ ಟಿ20 ಟಾಪ್ 10 ರ‍್ಯಾಂಕಿಂಗ್‌ನಲ್ಲಿ ರಾಹುಲ್ ಹೊರತುಪಡಿಸಿ ಹೆಚ್ಚೇನು ಬದಲಾವಣೆಗಳಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ತಂಡದ (Pakistan Cricket Team) ನಾಯಕ ಬಾಬರ್ ಅಜಂ (Babar Azam) ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಡೇವಿಡ್ ಮಲಾನ್ (Dawid Malan) ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಏಯ್ಡನ್ ಮಾರ್ಕ್‌ರಮ್‌, ಡೆವೊನ್ ಕಾನ್‌ವೇ ಹಾಗೂ ಮೊಹಮ್ಮದ್ ರಿಜ್ವಾನ್ () ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. 

Mohammad Rizwan ಆಸ್ಪತ್ರೆಗೆ ತೆರಳುವುದು 20 ನಿಮಿಷ ತಡವಾಗಿದ್ದರೆ ನನ್ನ ಶ್ವಾಸನಾಳ ಒಡೆದು ಹೋಗುತ್ತಿತ್ತು..!

ಇನ್ನು ಬೌಲಿಂಗ್ ವಿಭಾಗದಲ್ಲಿ ಲಂಕಾದ ಸ್ಪಿನ್ನರ್ ವನಿಂದು ಹಸರಂಗ (Wanindu Hasaranga) ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ತಬ್ರೀಬ್ ಶಂಶಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಆಡಂ ಜಂಪಾ, ಆದಿಲ್ ರಶೀದ್ ಹಾಗೂ ರಶೀದ್ ಖಾನ್ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ. ಕಿವೀಸ್ ಎಡಗೈ ವೇಗಿ ಟ್ರೆಂಟ್ ಬೌಲ್ಟ್‌ (Trent Boult) 7 ಸ್ಥಾನ ಮೇಲೇರಿ 14ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. 

ಇನ್ನು ಆಲ್ರೌಂಡರ್ ವಿಭಾಗದಲ್ಲಿ ಮೊಹಮ್ಮದ್ ನಬಿ ಮೊದಲ ಸ್ಥಾನದಲ್ಲೇ ಮುಂದುವರೆದಿದ್ದರೆ, ಶಕೀಬ್ ಅಲ್ ಹಸನ್‌, ಲಿಯಾಮ್ ಲಿವಿಂಗ್‌ಸ್ಟನ್, ಗ್ಲೆನ್ ಮ್ಯಾಕ್ಸ್‌ವೆಲ್ ಹಾಗೂ ವನಿಂದು ಹಸರಂಗ ಟಾಪ್ 5 ಪಟ್ಟಿಯೊಳಗೆ ಸ್ಥಾನ ಪಡೆದಿದ್ದಾರೆ.
 

click me!