ಇಂಡೋ-ಆಂಗ್ಲೋ ಟೆಸ್ಟ್: ಬಾಕ್ಸಿಂಗ್‌ ಪಂದ್ಯಕ್ಕೆ ಹೋಲಿಸಿದ ಐಸಿಸಿ!

By Suvarna NewsFirst Published Mar 4, 2021, 8:49 AM IST
Highlights

ಮೊಟೇರಾದಲ್ಲಿ ನಡೆಯಲಿರುವ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್ ಪಂದ್ಯವನ್ನು ಐಸಿಸಿ ಬಾಕ್ಸಿಂಗ್‌ ಪಂದ್ಯದ ರೀತಿ ಬಿಂಬಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ದುಬೈ(ಮಾ.04): ಭಾರತ ಹಾಗೂ ಇಂಗ್ಲೆಂಡ್‌ ನಡುವಿನ 4ನೇ ಟೆಸ್ಟ್‌ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಬಾಕ್ಸಿಂಗ್‌ ಪಂದ್ಯಕ್ಕೆ ಹೋಲಿಸಿದೆ. 

‘4ನೇ ಸುತ್ತಿನ ಪಂದ್ಯ’ ಎಂದು ಕರೆದಿರುವ ಐಸಿಸಿ, ರಿಂಗ್‌ನ ಒಂದು ಬದಿಯಲ್ಲಿ ವಿರಾಟ್‌ ಕೊಹ್ಲಿಯ ಚಿತ್ರ ಹಾಕಿದೆ. ಮತ್ತೊಂದು ಬದಿಯಲ್ಲಿ ಇಂಗ್ಲೆಂಡ್‌ ನಾಯಕ ಜೋ ರೂಟ್‌ ಚಿತ್ರವನ್ನು ಹಾಕಿದ್ದು, ಅವರ ಹಿಂದೆ ಆಸ್ಪ್ರೇಲಿಯಾ ನಾಯಕ ಟಿಮ್‌ ಪೈನ್‌ ನಿಂತಿದ್ದಾರೆ. ಇಂಗ್ಲೆಂಡ್‌ ಈ ಪಂದ್ಯದಲ್ಲಿ ಗೆದ್ದರೆ ಆಸ್ಪ್ರೇಲಿಯಾ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರುವ ಅದೃಷ್ಟ ಪಡೆಯಲಿದೆ. ನ್ಯೂಜಿಲೆಂಡ್‌ನ ಆಟಗಾರರು ರಿಂಗ್‌ನ ಹೊರಗಿದ್ದು, ಫೈನಲ್‌ನಲ್ಲಿ ತಮ್ಮದೆರು ಆಡುವವರು ಯಾರು ಎನ್ನುವುದನ್ನು ತಿಳಿಯಲು ಕಾಯುತ್ತಿದ್ದಾರೆ ಎಂದು ಚಿತ್ರದಲ್ಲಿ ತೋರಿಸಲಾಗಿದೆ.

ಐಸಿಸಿ ಟೆಸ್ಟ್‌ ವಿಶ್ವಕಪ್‌ ಫೈನಲ್‌ ಮೇಲೆ ಭಾರತ ಕಣ್ಣು!

NOW LOADING ██████████████] 99%

Round 4 🔥 | pic.twitter.com/rYFTjQkpae

— ICC (@ICC)

ಈಗಾಗಲೇ ಕೇನ್‌ ವಿಲಿಯಮ್ಸನ್‌ ನೇತೃತ್ವದ ನ್ಯೂಜಿಲೆಂಡ್‌ ತಂಡ ಐಸಿಸಿ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೇರಿದ್ದು, ತಮ್ಮ ಎದುರಾಳಿ ಯಾರು ಎನ್ನುವುದಕ್ಕೆ ಇನ್ನೂ ಸ್ಪಷ್ಟ ಸುಳಿವು ಸಿಕ್ಕಿಲ್ಲ. ಇಂಗ್ಲೆಂಡ್‌ ವಿರುದ್ದ ಅಹಮದಾಬಾದ್‌ನಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್ ಪಂದ್ಯವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಗೆಲುವು ಇಲ್ಲವೇ ಡ್ರಾ ಸಾಧಿಸಿದರೂ ಸಾಕು, ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಪ್ರವೇಶಿಸಲಿದೆ. ಒಂದು ವೇಳೆ ಕೊನೆಯ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್‌ ನೇತೃತ್ವದ ಇಂಗ್ಲೆಂಡ್‌ ತಂಡ ಗೆಲುವಿನ ನಗೆ ಬೀರಿದರೆ, ಆಸ್ಟ್ರೇಲಿಯಾ ತಂಡ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ಅರ್ಹತೆಗಿಟ್ಟಿಸಿಕೊಳ್ಳಲಿದೆ.
 

click me!