ಗ್ಲೆನ್‌ ಮ್ಯಾಕ್ಸ್‌ವೆಲ್ ಅಬ್ಬರಕ್ಕೆ ಚೇರ್ ಪೀಸ್‌-ಪೀಸ್‌..! ವಿಡಿಯೋ ವೈರಲ್

By Suvarna NewsFirst Published Mar 3, 2021, 4:43 PM IST
Highlights

ನ್ಯೂಜಿಲೆಂಡ್ ವಿರುದ್ದ ವೆಲ್ಲಿಂಗ್ಟನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಗ್ಲೆನ್‌ ಮ್ಯಾಕ್ಸ್‌ವೆಲ್ ಅಕ್ಷರಶಃ ಅಬ್ಬರಿಸಿದ್ದಾರೆ. ಮ್ಯಾಕ್ಸ್‌ವೆಲ್ ಅಬ್ಬರಕ್ಕೆ ಸ್ಟೇಡಿಯಂನಲ್ಲಿದ್ದ ಚೇರ್ ಚೂರಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ವೆಲ್ಲಿಂಗ್ಟನ್‌(ಮಾ.03): ನ್ಯೂಜಿಲೆಂಡ್‌ ವಿರುದ್ದದ ಮೊದಲೆರಡು ಟೆಸ್ಟ್‌ ಪಂದ್ಯದಲ್ಲಿ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸೀಸ್‌ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌, ವೆಸ್ಪಾಕ್‌ ಮೈದಾನದಲ್ಲಿ ಕೊನೆಗೂ ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಮ್ಯಾಕ್ಸಿ ಅಬ್ಬರಕ್ಕೆ ಸ್ಟೇಡಿಯಂನಲ್ಲಿದ್ದ ಚೇರ್‌ ಚೂರುಚೂರಾಗಿದೆ.

ಹೌದು, ಗ್ಲೆನ್‌ ಮ್ಯಾಕ್ಸ್‌ವೆಲ್‌ ನ್ಯೂಜಿಲೆಂಡ್‌ ವಿರುದ್ದದ ಮೂರನೇ ಟಿ20 ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್‌ ನೆರವಿನಿಂದ 70 ರನ್‌ ಬಾರಿಸಿ ಅಬ್ಬರಿಸಿದ್ದಾರೆ. ಜೋಸ್ ಫಿಲಿಫ್ಪಿ ವಿಕೆಟ್‌ ಪತನದ ಬಳಿಕ ಕ್ರೀಸ್‌ಗಿಳಿದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಕಿವೀಸ್‌ ಬೌಲರ್‌ಗಳೆದುರು ಅಕ್ಷರಶಃ ಸವಾರಿ ಮಾಡಿದ್ದಾರೆ.   

ಸ್ಟೇಡಿಯಂನಲ್ಲಿದ್ದ ಚೇರ್‌ ಚೂರು-ಚೂರು: ನ್ಯೂಜಿಲೆಂಡ್‌ ಮಧ್ಯಮ ವೇಗಿ ಜೇಮ್ಸ್‌ ನೀಶಮ್ ಎಸೆದ 17ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್‌ 2 ಬೌಂಡರಿ ಹಾಗೂ 4 ಸಿಕ್ಸರ್‌ ನೆರವಿನಿಂದ 28 ರನ್‌ ಚಚ್ಚಿದ್ದಾರೆ. ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಮ್ಯಾಕ್ಸ್‌ವೆಲ್‌, ಎರಡನೇ ಎಸೆತವನ್ನು ಸ್ಕ್ವೇರ್‌ಲೆಗ್‌ನತ್ತ ಚೆಂಡನ್ನು ಮ್ಯಾಕ್ಸಿ ಸಿಕ್ಸರ್‌ಗಟ್ಟಿದ್ದಾರೆ. ಮ್ಯಾಕ್ಸ್‌ವೆಲ್‌ ಬ್ಯಾಟಿಂದ ರಭಸವಾಗಿ ಹೊರಹೊಮ್ಮಿದ ಚೆಂಡು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಚೇರ್ ಚೂರಾಗಿ ಹೋಗಿದೆ.

ನನಗೆ ದೇಶ ಮೊದಲು, ಐಪಿಎಲ್‌ಗೆ ಕೈ ಕೊಡಲು ಮುಂದಾದ ಮತ್ತೊಬ್ಬ ಸ್ಟಾರ್ ಕ್ರಿಕೆಟಿಗ..!

ಹೀಗಿದೆ ನೋಡಿ ಆ ವಿಡಿಯೋ:

All Maxwell Boundaries ( plus his 1st reverse sweep that didn’t connect) https://t.co/k8tIjP25gi pic.twitter.com/FK0fr4RHMc

— AlreadyGotBanned 😄 (@KirketVideoss)

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಆಸ್ಟ್ರೇಲಿಯಾ ನಾಯಕ ಫಿಂಚ್(69)‌, ಮ್ಯಾಕ್ಸ್‌ವೆಲ್‌(70) ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 208 ರನ್‌ ಕಲೆಹಾಕಿತ್ತು. ಬೃಹತ್ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, ಎಡಗೈ ಸ್ಪಿನ್ನರ್ ಆಸ್ಟನ್ ಅಗರ್(30-6) ಮಾರಕ ದಾಳಿಗೆ ತತ್ತರಿಸಿ ಕೇವಲ 144 ರನ್‌ಗಳಿಗೆ ಸರ್ವಪತನ ಕಂಡಿದೆ. ಇದರೊಂದಿಗೆ ಆಸ್ಟ್ರೇಲಿಯಾ 64 ರನ್‌ಗಳ ಗೆಲುವು ದಾಖಲಿಸಿದೆ. 

click me!