'ಮರೆತುಬಿಟ್ಟೆ ಅನ್ಸುತ್ತೆ ಸರ್' ರೋಹಿತ್ ಶರ್ಮಾನ ಕಾಪಿ ಮಾಡಿದ ವೈಭವ್ ಸೂರ್ಯವಂಶಿ

Published : Nov 14, 2026, 10:39 PM IST
Vaibhav Suryavanshi’s Rohit Sharma Moment Goes Viral

ಸಾರಾಂಶ

15 ವರ್ಷದ ವೈಭವ್ ಸೂರ್ಯವಂಶಿ ಬಿಹಾರ ತಂಡದ ನಾಯಕರಾಗಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅತಿ ಕಿರಿಯ ನಾಯಕ ಎಂಬ ದಾಖಲೆ ಬರೆದಿದ್ದಾರೆ. ಟಾಸ್ ವೇಳೆ ತಂಡದ ಪ್ಲೇಯಿಂಗ್ 11 ಮರೆತು ಅವರು ತಮಾಷೆಯಾಗಿ ನಕ್ಕ ವಿಡಿಯೋ ವೈರಲ್ ಆಗಿದ್ದು, ರೋಹಿತ್ ಶರ್ಮಾ ಅವರ ಮರೆಗುಳಿತನವನ್ನು ನೆನಪಿಸಿದೆ.

ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್‌ನಿಂದಷ್ಟೇ ಅಲ್ಲ. ತಮ್ಮ ಮುದ್ದಾದ ಹಾಗೂ ತಮಾಷೆಯ ನಡೆಯಿಂದಲೂ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದ್ದಾರೆ. ಇವತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT 2026) ಪಂದ್ಯದ ಟಾಸ್ ವೇಳೆ, ಎಲ್ಲರನ್ನೂ ನಗಿಸಿದರು. ನಗುವುದರ ಜೊತೆಗೆ ಹಿಟ್‌ ಮ್ಯಾನ್ ರೋಹಿತ್ ಶರ್ಮಾ ನೆನಪಿಗೆ ಬಂದಿದ್ದಾರೆ.

ಆಗಿದ್ದೇನು?

ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ಶನಿವಾರ ಬಿಹಾರ ಮತ್ತು ಸೌರಾಷ್ಟ್ರ ತಂಡಗಳ ನಡುವೆ ಪಂದ್ಯ ನಡೆಯಿತು. ಕೇವಲ 15 ವರ್ಷ 232 ದಿನಗಳ ವಯಸ್ಸಿನ ಸೂರ್ಯವಂಶಿ ಪಂದ್ಯದಲ್ಲಿ ಬಿಹಾರ ತಂಡದ ನಾಯಕನಾಗಿ ಕಣಕ್ಕಿಳಿದು, ಪುರುಷರ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಕಿರಿಯ ನಾಯಕ ಎಂಬ ವಿಶ್ವದಾಖಲೆ ನಿರ್ಮಿಸಿದರು.

ಪಂದ್ಯಕ್ಕೂ ಮುನ್ನ ಟಾಸ್ ಗೆದ್ದ ಸೂರ್ಯವಂಶಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಪ್ರಕಟಿಸಿದರು. ತಮ್ಮ ತವರು ರಾಜ್ಯದ ತಂಡವನ್ನು ಮುನ್ನಡೆಸುತ್ತಿರುವ ಸಂತಸ ವ್ಯಕ್ತಪಡಿಸಿದರು. ಟಾಸ್ ನಿರೂಪಕರು ತಂಡದ ಪ್ಲೇಯಿಂಗ್-11 ಮತ್ತು ಕಾಂಬಿನೇಷನ್ ಹೇಗಿದೆ? ಎಂದು ಪ್ರಶ್ನಿಸಿದಾಗ ಸೂರ್ಯವಂಶಿ ತಬ್ಬಿಬ್ಬಾದರು.

ಮುಖದಲ್ಲಿ ಮುದ್ದಾದ ನಗು ಚೆಲ್ಲಿ.. ಸರ್, ನಾನು ಮರೆತುಬಿಟ್ಟಿದ್ದೇನೆ ಅನ್ಸುತ್ತೆ ಎಂದು ಉತ್ತರಿಸಿದ್ದಾರೆ. ಇದನ್ನು ಕೇಳಿ ನಿರೂಪಕರೂ ನಕ್ಕು, ಪರವಾಗಿಲ್ಲ ಬಿಡಿ, ನಾವೇ ನೋಡಿಕೊಳ್ಳುತ್ತೇವೆ ಎಂದರು. ಅದಕ್ಕೆ ವೈಭವ್ ಪ್ಲೀಸ್ ಸರ್ ಎಂದು ನಗುತ್ತಾ ಪ್ರತಿಕ್ರಿಯಿಸಿದರು.

ಇಲ್ಲಿ ರೋಹಿತ್ ಯಾಕೆ ಬಂದರು?

ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಮರೆಗುಳಿತನಕ್ಕೆ ತುಂಬಾ ಫೇಮಸ್! ಈ ಹಿಂದೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಬೇಕೋ ಅಥವಾ ಬೌಲಿಂಗ್ ಮಾಡಬೇಕೋ ಎಂಬುದನ್ನೇ ರೋಹಿತ್ ಶರ್ಮಾ ಮೈದಾನದಲ್ಲಿ ಮರೆತುಬಿಟ್ಟಿದ್ದ ಅನೇಕ ತಮಾಷೆಯ ಪ್ರಸಂಗಗಳು ನಡೆದಿವೆ. ಕೇವಲ 15 ವರ್ಷದ ಸೂರ್ಯವಂಶಿ ಕೂಡ ಟಾಸ್ ವೇಳೆ ಪ್ಲೇಯಿಂಗ್-11 ಮರೆತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನು ನೋಡಿದ ಕ್ರಿಕೆಟ್ ಅಭಿಮಾನಿಗಳು ಸೂರ್ಯವಂಶಿಯನ್ನು ರೋಹಿತ್ ಶರ್ಮಾಗೆ ಹೋಲಿಕೆ ಮಾಡಿ ತಮಾಷೆ ಮಾಡುತ್ತಿದ್ದಾರೆ.

ಪಂದ್ಯ ಏನಾಯ್ತು?

ನಾಯಕತ್ವದ ಚೊಚ್ಚಲ ಪಂದ್ಯದಲ್ಲಿ ಸೂರ್ಯವಂಶಿ ಆರ್ಭಟಿಸಲು ಸಾಧ್ಯವಾಗಲಿಲ್ಲ. 12 ಎಸೆತಗಳಲ್ಲಿ 18 ರನ್ ಗಳಿಸಿ ಚೇತನ್ ಸಕಾರಿಯಾ ಬೌಲಿಂಗ್‌ನಲ್ಲಿ ಔಟಾದರು. ಮೊದಲು ಬ್ಯಾಟ್ ಮಾಡಿದ ಬಿಹಾರ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137 ರನ್ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ ಸೌರಾಷ್ಟ್ರ 16.3 ಓವರ್‌ಗಳಲ್ಲಿ 5 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಪಂದ್ಯ ಸೋತರೂ ವೈಭವ್ ಅವರ ವಿಶ್ವದಾಖಲೆ ಮತ್ತು ಟಾಸ್ ವೇಳೆಯ ‘ರೋಹಿತ್ ಶರ್ಮಾ’ ಸ್ಟೈಲ್ ನಗು ಕ್ರಿಕೆಟ್ ಲೋಕದಲ್ಲಿ ಸಖತ್ ಸದ್ದು ಮಾಡುತ್ತಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪಾಕಿಸ್ತಾನ ಬೌಲರ್‍‌ಗಳಿಗೆ ಅಟ್ಟಾಡಿಸಿ ಹೊಡೆದ ಸೆಹ್ವಾಗ್ ಪುತ್ರ, ಫೈನಲ್ ಮ್ಯಾಚ್‌ನಲ್ಲಿ ಆರ್ಯವೀರ್ ಗಳಿಸಿದ ಸ್ಕೋರ್ ಎಷ್ಟು?
ಅ19 ಫೈನಲ್ ಗೆಲುವಿನ ಸಂಭ್ರಮದಲ್ಲಿ ಪಾಕ್ ಜೊತೆ ಕಿರಿಕ್, ನಿಭಾಯಿಸಿದ ಭಾರತದ ಸ್ಟಾಫ್ ನಡೆಗೆ ಮೆಚ್ಚುಗೆ