
U19 ಏಷ್ಯಾ ಕಪ್ ಫೈನಲ್‌ನಲ್ಲಿ ಇವತ್ತು ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿದ್ದವು. ಬದ್ಧವೈರಿ ಪಾಕ್ ವಿರುದ್ಧ ಭಾರತ ತಂಡವು ಒಂದು ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಗೆಲುವಿನ ಹಿಂದೆ ಟೀಂ ಇಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಪಾತ್ರ ಕೂಡ ಮುಖ್ಯವಾಗಿದೆ.
ಫೈನಲ್ ಪಂದ್ಯದಲ್ಲೂ ಆರ್ಯವೀರ್ ತಮ್ಮ ಸ್ಫೋಟಕ ಇನ್ನಿಂಗ್ಸ್ ಮುಂದುವರಿಸಿದರು. ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡವು 50 ಓವರ್‍ನಲ್ಲಿ 9 ವಿಕೆಟ್ ಕಳೆದುಕೊಂಡು 337 ರನ್‌ಗಳಿಸಿತ್ತು. 338 ರನ್‌ಗಳ ಬೃಹತ್ ಟಾರ್ಗೆಟ್ ಮುಂದಿಟ್ಟುಕೊಂಡು ಬ್ಯಾಟಿಂಗ್‌ಗೆ ಬಂದ ಆರ್ಯವೀರ್ ಸೆಹ್ವಾಗ್ ಮತ್ತು ನಾಯಕ ಲಕ್ಷ್ಯ ರಾಯ್‌ಚಂದಾನಿ ಮೊದಲ ವಿಕೆಟ್‌ಗೆ 95 ರನ್‌ಗಳನ್ನು ಸೇರಿಸಿದರು. ಭಾರತ 338 ರನ್‌ಗಳನ್ನು ಬೆನ್ನಟ್ಟುತ್ತಿದ್ದಾಗ ಇದು ಉತ್ತಮ ಆರಂಭವಾಗಿತ್ತು.
ಆರ್ಯವೀರ್ ಸೆಹ್ವಾಗ್ 61 ಎಸೆತಗಳಲ್ಲಿ 9 ಬೌಂಡರಿಗಳ ಸಹಾಯದಿಂದ 58 ರನ್ ಗಳಿಸಿದರು. ಕೊನೆಗೆ ನಿಕಾಬ್ ಶಫೀಕ್‌ಗೆ ವಿಕೆಟ್ ಒಪ್ಪಿಸಿ ಕ್ರೀಸ್‌ನಿಂದ ಹೊರ ನಡೆದರು. ಆರ್ಯವೀರ್ 2026 ಅಂಡರ್-19 ಏಷ್ಯಾ ಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಐದು ಇನ್ನಿಂಗ್ಸ್‌ಗಳಲ್ಲಿ ಅವರು ಕೇವಲ ಒಂದು ಬಾರಿ ಮಾತ್ರ 50 ರನ್‌ಗಳಿಗಿಂತ ಕಡಿಮೆ ಮೊತ್ತಕ್ಕೆ ಔಟಾದರು. ನೇಪಾಳ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಅಜೇಯ 70 ರನ್ ಗಳಿಸಿದರು. ಪಾಕಿಸ್ತಾನ ವಿರುದ್ಧದ ಗುಂಪು ಹಂತದಲ್ಲಿ 22 ರನ್‌ಗಳಿಗೆ ಔಟ್ ಆಗಿದ್ದರು. ಯುಎಇ ವಿರುದ್ಧ ಅದ್ಭುತ 160 ರನ್ ಗಳಿಸಿದ ನಂತರ.. ಆರ್ಯವೀರ್ ಸೆಮಿಫೈನಲ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ 51 ರನ್ ಗಳಿಸಿದರು. ಅವರು ಐದು ಇನ್ನಿಂಗ್ಸ್‌ಗಳಲ್ಲಿ ಒಟ್ಟು 361 ರನ್ ಗಳಿಸಿ ಚಾಂಪಿಯನ್ ಆಗಿದ್ದಾರೆ. 361 ರನ್‌ಗಳೊಂದಿಗೆ ಆರ್ಯವೀರ್ ಸೆಹ್ವಾಗ್ ಅವರು ಮ್ಯಾನ್ ಆಫ್ ದಿ ಸಿರೀಸ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಡಿದ್ದಾರೆ.
ಕೊನೆಯ ಎಸೆತದಲ್ಲಿ ಗೆಲುವಿನ ಬೌಂಡರಿ ಬಾರಿಸುವ ಮೂಲಕ ಮೋಹಿತ್ ಉಲವಾ ಗೆಲುವಿನ ಹೀರೋ ಆದರು. ಮೋಹಿತ್ ಅಜೇಯ 49 ರನ್ ಗಳಿಸಿದರು. 338 ರನ್‌ಗಳ ಗುರಿ ಬೆನ್ನಟ್ಟಿದ ಭಾರತವು ಉತ್ತಮ ಆರಂಭ ಪಡೆಯಿತು. ಮಧ್ಯಮ ಕ್ರಮಾಂಕವು ಕುಸಿದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಸೋಲಿನ ಸುಳಿಗೆ ಸಿಲುಕಿತು.
ಭಾರತ ತಂಡವು 252 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಆಗ ಗೆಲ್ಲಲು ಒಟ್ಟು 86 ರನ್‌ಗಳ ಅಗತ್ಯ ಇತ್ತು. ಆದರೆ ಕೈಯಲ್ಲಿ ಕೇವಲ ಎರಡು ವಿಕೆಟ್‌ಗಳು ಮಾತ್ರ ಇದ್ದವು. ಮೈನಲ್ ಚೌಹಾಣ್ ಮತ್ತು ಮೋಹಿತ್ ಉಲ್ವಾ ಒಂಬತ್ತನೇ ವಿಕೆಟ್‌ಗೆ 57 ರನ್‌ಗಳ ಪಾಲುದಾರಿಕೆ ನೀಡಿದರು. ಇದು ಪಂದ್ಯಕ್ಕೆ ರೋಚಕ ತಿರುವು ನೀಡಿತು. ಕೊನೆಯಲ್ಲಿ ಇವರ ಪಾರ್ಟ್ನರಶಿಪ್‌ಗೆ ಪಾಕ್ ಬ್ರೇಕ್ ಹಾಕಿತ್ತು. ಮತ್ತೆ ಪಂದ್ಯವು ರೋಚಕ ತಿರುವು ಪಡೆದುಕೊಂಡಿತು. ಕೇವಲ ಒಂದು ವಿಕೆಟ್‌ನಲ್ಲಿ ಭಾರತಕ್ಕೆ 29 ರನ್‌ಗಳ ಅಗತ್ಯ ಇತ್ತು. ಆದರೆ ಮೋಹಿತ್ ಉಲ್ವಾ ಮ್ಯಾಚ್ ಕೈಚೆಲ್ಲಲಿಲ್ಲ.
ಭಾರತಕ್ಕೆ ಗೆಲ್ಲಲು 12 ಎಸೆತಗಳಲ್ಲಿ 25 ರನ್‌ಗಳು ಬೇಕಾಗಿದ್ದವು. ಕೇವಲ 1 ವಿಕೆಟ್ ಮಾತ್ರ ಉಳಿದಿತ್ತು. ಆದ್ದರಿಂದ ಟೀಮ್ ಇಂಡಿಯಾದ ಮೇಲೆ ಒತ್ತಡ ಹೆಚ್ಚಿತ್ತು. 49ನೇ ಓವರ್‌ನಲ್ಲಿ ಮೋಹಿತ್ ಉಲ್ವಾ 2 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸಿದರು. ಈ ಓವರ್‌ನಲ್ಲಿ ಒಟ್ಟು 17 ರನ್ ಗಳಿಸಿದರು. ಈಗ 6 ಎಸೆತಗಳಲ್ಲಿ 8 ರನ್‌ಗಳು ಬೇಕಾಗಿದ್ದವು. ಪಾಕಿಸ್ತಾನ ಪರ ಅಹ್ಮದ್ ಹುಸೇನ್ ಕೊನೆಯ ಓವರ್ ಎಸೆದರು. ಮೊದಲ ಎಸೆತ ಡಾಟ್ ಆಯಿತು. ಎರಡನೇ ಎಸೆತ ವೈಡ್ ಬಾಲ್. ಮುಂದಿನ 4 ಎಸೆತಗಳಲ್ಲಿ 4 ಸಿಂಗಲ್ಸ್ ಬಂದವು. ಕೊನೆಯ ಎಸೆತದಲ್ಲಿ ಮೂರು ರನ್‌ಗಳು ಬೇಕಾಗದ್ದವು. ಡ್ರಾಗೆ 2 ರನ್ ಬೇಕಾಗಿತ್ತು. ಮೋಹಿತ್ ಬೌಂಡರಿ ಬಾರಿಸಿ ಚಾಂಪಿಯನ್ ಪಟ್ಟಕ್ಕೆ ಕೊಂಡೊಯ್ದರು.
Take a bow, Mohit Ulva! 🫡🙌
The celebrations begin after a victory for the ages 🥳
Scorecard ▶️ https://t.co/srKsrr1jna
#MensU19AsiaCup https://t.co/jjCB1u8pKQ
— BCCI (@BCCI) November 14, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.