
ಮುಂಬೈ(ಮೇ.31): ಲಾಕ್‌ಡೌನ್ ಸಮಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2012ರ ಏಷ್ಯಾಕಪ್ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಅನಗತ್ಯವಾಗಿ 3 ರನ್ ಬಿಟ್ಟುಕೊಟ್ಟು ನಾಯಕ ಎಂ.ಎಸ್.ಧೋನಿ ಕೈಯಿಂದ ಉಗಿಸಿಕೊಂಡ ಘಟನಯನ್ನು ಕೊಹ್ಲಿ ವಿವರಿಸಿದ್ದಾರೆ.
ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ, ಸಂತಸ ಹಂಚಿಕೊಂಡ ಆಲ್ರೌಂಡರ್!.
2012ರ ಏಷ್ಯಾಕಪ್ ಟೂರ್ನಿ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಎಡವಟ್ಟು ನಡೆದಿತ್ತು. ಪಾಕ್ ಬ್ಯಾಟ್ಸ್‌ಮನ್ ಸಿಡಿಸಿದ ಚೆಂಡು ಡೀಪ್ ಮಿಡ್ ವಿಕೆಟ್‌ನತ್ತ ಹಾರಿತ್ತು. ಚೆಂಡನ್ನು ಹಿಡಿಯಲು ಒಂದೆಡೆಯಿಂದ ವಿರಾಟ್ ಕೊಹ್ಲಿ ಹಾಗೂ ಮತ್ತೊಂದೆಡೆಯಿಂದ ರೋಹಿತ್ ಶರ್ಮಾ ಓಡೋಡಿ ಬಂದು ಮುಖಾಮುಖಿ ಡಿಕ್ಕಿಯಾಗಿದ್ದರು. ಡಿಕ್ಕಿಯಾದ ರಭಸಕ್ಕೆ ಇಬ್ಬರು ನೆಲಕ್ಕುರಳಿದರು. ಒಂದೆರೆಡ ಸೆಕೆಂಡ್ ಇಬ್ಬರು ನೆಲದಲ್ಲಿ ಬಿದ್ದರು.
ವಿರಾಟ್ ಕೊಹ್ಲಿ ದೇಶದ ನಂ.1 ಶ್ರೀಮಂತ ಕ್ರೀಡಾಪಟು..!
ಒಂದು ರನ್ ಇದ್ದಲ್ಲಿ ಪಾಕಿಸ್ತಾನ ಬ್ಯಾಟ್ಸ್‌ಮನ್ 3 ರನ್ ತೆಗೆದುಕೊಂಡರು. ಇತ್ತ ಇರ್ಫಾನ್ ಪಠಾಣ್ ಚೆಂಡನ್ನು ಎಂ.ಎಸ್.ಧೋನಿಗೆ ನೀಡಿದರು. ಈ ವೇಳೆ ಧೋನಿ ಕೇವಲ 1 ರನ್ ಇದ್ದಲ್ಲಿ ಅದು ಹೇಗ 3 ರನ್ ನೀಡುತ್ತೀರಿ ಎಂದು ಗರಂ ಆಗಿದ್ದರು. ಈ ಘಟನೆಯನ್ನು ಕೊಹ್ಲಿ ವಿವರಿಸಿದ್ದಾರೆ. ಆರ್ ಅಶ್ವಿನ್ ಜೊತೆಗಿನ ಇನ್ಸ್‌ಸ್ಟಾಗ್ರಾಂ ವಿಡಿಯೋ ಚಾಟ್‌ನಲ್ಲಿ ಕೊಹ್ಲಿ, ಧೋನಿ ಪ್ರತಿಯೊಂದು ರನ್‌ಗೆ ಲೆಕ್ಕವಿಡುತ್ತಿದ್ದರು ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.