ಸಂಚಲನ ಮೂಡಿಸಿದ್ದ ಜಿಂಬಾಬ್ವೆ ಕ್ರಿಕೆಟ್ ದಿಗ್ಗಜ ಹೀಥ್ ಸ್ಟ್ರೀಕ್ ನಿಧನದ ಸುದ್ದಿ
ಟ್ವೀಟ್ ಮಾಡಿ ಒಂದು ಗಂಟೆಯ ಬಳಿಕ ಹೀಥ್ ಸ್ಟ್ರೀಕ್ ಜೀವಂತವಾಗಿದ್ದಾರೆಂದು ತಿಳಿಸಿದ ಒಲಂಗಾ
ನಾನಿನ್ನೂ ರನೌಟ್ ಆಗಿಲ್ಲ, ಬದುಕಿದ್ದೇನೆ ಎಂದ ಹೀಥ್ ಸ್ಟ್ರೀಕ್
ಹರಾರೆ(ಆ.23): ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀಥ್ ಸ್ಟ್ರೀಕ್ ಕೊನೆಯುಸಿರೆಳೆದಿದ್ಧಾರೆ ಎನ್ನುವ ಸುದ್ದಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿತ್ತು. ಸಹ ಆಟಗಾರ ಹೆನ್ರಿ ಒಲಂಗಾ ಮಾಡಿದ ಒಂದು ಟ್ವೀಟ್, ಸಾವಿನ ಗಾಳಿಸುದ್ದಿಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿತ್ತು. ಇದೀಗ ಆ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಹೀಥ್ ಸ್ಟ್ರೀಕ್, ತಮ್ಮ ಸಾವಿನ ಸುದ್ದಿ ತಿಳಿದು, ನಾನಿನ್ನೂ ರನೌಟ್ ಆಗಿಲ್ಲ, ಜೀವಂತವಾಗಿದ್ದೇನೆ ಎಂದು ಖಚಿತಪಡಿಸಿದ್ದಾರೆ.
ಹೆನ್ರಿ ಒಲಂಗಾ ಇಂದು ಬೆಳಗ್ಗೆ ದುಃಖದ ವಿಚಾರವೇನೆಂದರೆ ನಮ್ಮ ಹೀಥ್ ಸ್ಟ್ರೀಕ್, ಮತ್ತೊಂದು ತುದಿಯನ್ನು ಕ್ರಾಸ್ ಮಾಡಿದ್ದಾರೆ" ಎಂದು ಸೂಚ್ಯವಾಗಿ ಟ್ವೀಟ್ ಮಾಡಿದ್ದರು. ಇದಾದ ಬಳಿಕ ಆ ಸುದ್ದಿ ಹೀಥ್ ಸ್ಟ್ರೀಕ್ ಗಮನಕ್ಕೂ ಬಂದಿದೆ. ಸ್ವತಃ ಈ ಕುರಿತಂತೆ ಹೀಥ್ ಸ್ಟ್ರೀಕ್, ಒಲಂಗಾ ಅವರಿಗೆ ಮೆಸೇಜ್ ಮಾಡಿ ನಾನಿನ್ನೂ ಜೀವಂತವಾಗಿದ್ದೇನೆ ಎಂದು ತಿಳಿಸಿದ್ದಾರೆ. ಹೀಗಾಗಿ ಹೆನ್ರಿ ಒಲಂಗಾ, ಈ ಕುರಿತಂತೆ ಸ್ಪಷ್ಟನೆ ನೀಡಿದ್ದು ಅವರಿನ್ನೂ ಬದುಕಿದ್ದಾರೆ ಎಂದು ತಿಳಿಸಿದ್ದಾರೆ.
ಹೀಥ್ ಸ್ಟ್ರೀಕ್ ಅವರ ಜತೆಗಿನ ಚಾಟ್ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಹೆನ್ರಿ ಒಲಂಗಾ, "ಹೀಥ್ ಸ್ಟ್ರೀಕ್ ಅವರ ನಿಧನದ ವದಂತಿಗಳು ಉತ್ಪ್ರೇಕ್ಷಿತವಾಗಿವೆ ಎಂದು ನಾನೀಗ ಖಚಿತಪಡಿಸುತ್ತಿದ್ದೇನೆ. ನಾನೀಗ ಅವರಿಂದಲೇ ದೃಢಪಡಿಸಿಕೊಂಡೆ, ಮೂರನೇ ಅಂಪೈರ್ ಮರಳಿ ಕರೆದಿದ್ದಾರೆ. ಅವರು ಚೆನ್ನಾಗಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕ್ಯಾನ್ಸರ್ ಎದುರು ಹೋರಾಡಿ ಉಸಿರು ಕೈಚೆಲ್ಲಿದ ಜಿಂಬಾಬ್ವೆ ಕ್ರಿಕೆಟ್ ಲೆಜೆಂಡ್ ಹೀಥ್ ಸ್ಟ್ರೀಕ್..!
ಒಲಂಗಾ ಹಂಚಿಕೊಂಡಿರುವ ಸ್ಕ್ರೀನ್‌ಶಾಟ್‌ನಲ್ಲಿ, ಸ್ವತಃ ಹೀಥ್ ಸ್ಟ್ರೀಕ್, ನಾನಿನ್ನು ಜೀವಂತವಾಗಿದ್ದೇನೆ. ಈ ರನೌಟ್ ವಿಚಾರವನ್ನು ದಯವಿಟ್ಟು ಆದಷ್ಟು ಬೇಗ ವಾಪಾಸ್ ತೆಗೆದುಕೊ ಬಡ್ಡಿ ಎಂದು ವಾಟ್ಸ್‌ಅಪ್‌ನಲ್ಲಿ ಟೆಕ್ಸ್ಟ್ ಮೆಸೇಜ್ ಮಾಡಿ ತಾವಿನ್ನು ರನೌಟ್ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
I can confirm that rumours of the demise of Heath Streak have been greatly exaggerated. I just heard from him. The third umpire has called him back. He is very much alive folks. pic.twitter.com/LQs6bcjWSB
— Henry Olonga (@henryolonga)ಈ ವಿಚಾರ ಕೇಳಿ ತುಂಬಾ ಸಂತೋಷವಾಯಿತು ಎಂದು ಒಲಂಗಾ ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನು ಹೆನ್ರಿ ಒಲಂಗಾ ಅವರು ಹೀಥ್ ಸ್ಟ್ರೀಕ್ ಅವರ ನಿಧನದ ಸುದ್ದಿ ಟ್ವೀಟ್ ಮಾಡುತ್ತಿದ್ದಂತೆಯೇ, ವಿರೇಂದ್ರ ಸೆಹ್ವಾಗ್, ಜಿಂಬಾಬ್ವೆಯ ಸೀನ್ ವಿಲಿಯಮ್ಸ್ ಸೇರಿದಂತೆ ಹಲವು ಕ್ರಿಕೆಟಿಗರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದರು. ಇದೀಗ ಹೀಥ್ ಸ್ಟ್ರೀಕ್ ಅವರಿಗೆ ಮರು ಜನ್ಮ ಸಿಕ್ಕಂತಾಗಿದೆ.
ಏಷ್ಯಾಕಪ್‌ಗೆ ರಾಹುಲ್ ಆಯ್ಕೆಯಾಗಿದ್ದರೂ ಕೆಲ ಪಂದ್ಯ ಆಡೋದು ಡೌಟ್..! ಅಗರ್ಕರ್ ಕೊಟ್ರು ಮಹತ್ವದ ಸುಳಿವು
ಹೀಥ್ ಸ್ಟ್ರೀಕ್ ಅವರ ಬೌಲಿಂಗ್ ಕೌಶಲ ಜಿಂಬಾಬ್ವೆ ತಂಡದ ಪಾಲಿಗೆ ಒಂದು ರೀತಿ ಆಸ್ತಿಯಾಗಿತ್ತು. ಬೌಲಿಂಗ್‌ನಲ್ಲಿ ಮಾತ್ರವಲ್ಲದೇ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಿದ್ದರು. ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಉಪಯುಕ್ತ ರನ್ ಕಾಣಿಕೆ ನೀಡುತ್ತಿದ್ದ ಹೀಥ್ ಸ್ಟ್ರೀಕ್, ಟೆಸ್ಟ್ ಕ್ರಿಕೆಟ್‌ನಲ್ಲಿ 1990 ರನ್ ಬಾರಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 2943 ರನ್ ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ಹರಾರೆಯಲ್ಲಿ ಅಜೇಯ 127 ರನ್ ಬಾರಿಸಿದ್ದು, ಹೀಥ್ ಸ್ಟ್ರೀಕ್ ಬಾರಿಸಿದ ಏಕೈಕ ಟೆಸ್ಟ್ ಶತಕ ಎನಿಸಿತ್ತು.