'4 ವರ್ಷದಿಂದ ಮಗನ ಜೊತೆ ಮಾತಾಡಿಲ್ಲ' 2ನೇ ಬಾರಿ ತಂದೆ ಆಗುತ್ತಿರುವ ಧವನ್ ಕಣ್ಣೀರು

Published : Nov 16, 2026, 09:41 PM IST
Shikhar Dhawan expecting second child

ಸಾರಾಂಶ

ಮಾಜಿ ಕ್ರಿಕೆಟಿಗ ಶಿಖರ್ ಧವನ್ ಎರಡನೇ ಬಾರಿಗೆ ತಂದೆಯಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ತಮ್ಮ ಮೊದಲ ಮಗನಿಂದ ದೂರವಿರುವ ಧವನ್, ಬದುಕಿನಲ್ಲಿ ಹೊಸ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಬೆಂಗಳೂರು: ಮಾಜಿ ಕ್ರಿಕೆಟಿಗ ಶಿಖರ್ ಧವನ್ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ. ಕಳೆದ ಫೆಬ್ರವರಿಯಲ್ಲಿ ಬದುಕಿನ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ್ದ ಧವನ್‌ಗೆ ಕೆಟ್ಟ ದಿನಗಳು ದೂರವಾಗಿದ್ದು, ಬದುಕಿಗೆ ಹೊಸ ಭರವಸೆ ಸಿಗುತ್ತಿದೆ. ತಾವು ಎರಡನೇ ಬಾರಿಗೆ ಅಪ್ಪನಾಗುತ್ತಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ.

ಧವನ್ ಮತ್ತು ಸೋಫಿ ಶೈನ್ ಅವರು 2026ರಲ್ಲಿ ಮದುವೆ ಆಗಿದ್ದಾರೆ. ತಮ್ಮ ಪತ್ನಿಯನ್ನ ತುಂಬಾ ಪ್ರೀತಿಸುವ ಅವರು ಆಗಾಗ ಇಬ್ಬರು ಒಟ್ಟಿಗೆ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಅಭಿಮಾನಿಗಳನ್ನ ರಂಜಿಸುತ್ತಾರೆ. ಕರ್ಲಿ ಟೇಲ್ಸ್‌ ಜೊತೆಗಿನ ಸಂಭಾಷಣೆಯಲ್ಲಿ ತಾವು ಅಪ್ಪ ಆಗುತ್ತಿರುವ ಬಗ್ಗೆ ಹಂಚಕೊಂಡಿದ್ದಾರೆ.

ಮಗನ ಮಿಸ್ ಮಾಡಿಕೊಳ್ತಿರುವ ಧವನ್

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ಧವನ್, ಗಾಲ್ಫ್ ಆಡುತ್ತಿದ್ದಾರೆ. ಇದೇ ವಿಚಾರದ ಬಗ್ಗೆ ಮಾತುಕತೆಯಲ್ಲಿ ಪ್ರಶ್ನಿಸಾಗ.. ನಾನು ಗಾಲ್ಫ್ ಆಡಬಹುದು. ಆದರೆ ನಾನು ಗಾಲ್ಫ್ ಅಭಿಮಾನಿ ಎಲ್ಲ. ಮತ್ತೆ ಮಾತು ಮುಂದುವರಿಸಿ ಈಗ ಅದನ್ನು ಮಕ್ಕಳು ಮಾಡುತ್ತಾರೆ ಎಂದು ತಮಾಷೆಯಾಗಿ ಹೇಳಿದರು. ಇದನ್ನು ಕೇಳಿದ ಧವನ್ ಪತ್ನಿ ಚಿಕ್ಕದಾಗಿ ಕೋಪಿಸಿಕೊಂಡಿದ್ದಾರೆ. ಆದರೆ ಧವನ್ ಅವರು, ತಮಾಷೆಯ ಭರದಲ್ಲಿ ಹೇಳಿದ್ದಾರೆ. ಶೀಘ್ರದಲ್ಲೇ ಈ ಜೋಡಿ ತಮ್ಮ ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಶಿಖರ್ ಧವನ್‌ಗೆ ಈಗ 40 ವರ್ಷ. ಮೊದಲ ಪತ್ನಿಯಿಂದ ಜೊರಾವರ್ ಎಂಬ ಮಗನಿದ್ದಾನೆ. ಪತ್ನಿಯಿಂದ ದೂರ ಆದ ನಂತರ ಮಗನೂ ಅಪ್ಪನಿಂದ ದೂರ ಇದ್ದಾನೆ. ಆಗಾಗ ಅಪ್ಪನನ್ನು ಭೇಟಿಯಾಗುತ್ತಾನೆ. ಈ ವೇಳೆ ಧವನ್ ತುಂಬಾ ಭಾವುಕರಾಗುತ್ತಾರೆ. ಇದೇ ಸಂದರ್ಶನದಲ್ಲಿ ತಮ್ಮ ಮಗನ ಬಗ್ಗೆ ಮಾತನ್ನಾಡಿದ ಧವನ್, ಕಳೆದ ನಾಲ್ಕು ವರ್ಷಗಳಿಂದ ಮಗನೊಂದಿಗೆ ಮಾತನ್ನಾಡಲು ಅವಕಾಶ ಸಿಕ್ಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಜೊರಾವಾರ್ ದೂರವಾದ ನಂತರ ಧವನ್ ಬದುಕಿಗೆ ಶೂನ್ಯ ಆವರಿಸಿರಬಹುದು. ಇದೀಗ ಮತ್ತೊಂದು ಮಗು ಆಗಮಿಸಿದ್ರೆ ಆ ಶೂನ್ಯವನ್ನು ತಂಬಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಇನ್ನು ಧವನ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಸಾಧನೆ ನೋಡೋದಾದರೆ.. ಟೀಂ ಇಂಡಿಯಾ ಪರ 34 ಟೆಸ್ಟ್ ಪಂದ್ಯಗಳನ್ನ ಆಡಿರುವ ಅವರು 2315 ರನ್‌ಗಳಿಸಿದ್ದಾರೆ. ಇದರಲ್ಲಿ 5 ಅರ್ಧ ಶತಕ, 7 ಶತಕಗಳು ಸೇರಿವೆ. 40ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

167 ಏಕದಿನ ಪಂದ್ಯಗಳನ್ನ ಆಡಿರುವ ಧವನ್, 6793 ರನ್‌ಗಳಿಸಿದ್ದಾರೆ. 17 ಶತಕ ಹಾಗೂ 39 ಅರ್ಧಶತಕ ಬಾರಿಸಿದ್ದಾರೆ. ಇನ್ನು ಟೀಂ ಇಂಡಿಯಾ ಪರ 68 ಟಿ-20 ಪಂದ್ಯಗಳನ್ನ ಆಡಿರುವ ಧವನ್ 1759 ರನ್‌ಗಳನ್ನ ಚಚ್ಚಿದ್ದಾರೆ. ಟಿ20ಯಲ್ಲಿ 11 ಅರ್ಧ ಶತಕಗಳು ಸೇರಿವೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 'ಸಂತೋಷದಿಂದಿಲ್ಲ', ಅದು ಈ ತಂಡಕ್ಕೆ ಬಂಪರ್ ಆಗಬಹುದು: ಇರ್ಫಾನ್ ಪಠಾಣ್ ಅಚ್ಚರಿ ಭವಿಷ್ಯ
ಇಕ್ಕಟ್ಟಿಗೆ ಸಿಲುಕಿದ ಓಜಾ! ಸ್ನೇಹಿತನ ಮೇಲೆ ಕಠಿಣ ನಿರ್ಧಾರ ಕೈಗೊಳ್ಳೋದು ಅನಿವಾರ್ಯ; ರೋಹಿತ್ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ