ಇಕ್ಕಟ್ಟಿಗೆ ಸಿಲುಕಿದ ಓಜಾ! ಸ್ನೇಹಿತನ ಮೇಲೆ ಕಠಿಣ ನಿರ್ಧಾರ ಕೈಗೊಳ್ಳೋದು ಅನಿವಾರ್ಯ; ರೋಹಿತ್ ಫ್ಯಾನ್ಸ್‌ಗೆ ಕೆಟ್ಟ ಸುದ್ದಿ

Published : Nov 16, 2026, 05:10 PM IST
Rohit Sharma

ಸಾರಾಂಶ

ಟೀಂ ಇಂಡಿಯಾದ ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಾರ್ನಿಂಗ್ ಬಂದಿದ್ದು, ಆಯ್ಕೆ ಸಮಿತಿ ಕಠಿಣ ಕ್ರಮ ತೆಗೆದುಕೊಳ್ಳಬಹುದು. ಮುಂದಿನ ಏಕದಿನ ವಿಶ್ವಕಪ್‌ಗೆ ಮುನ್ನ ಕಳಪೆ ಫಾರ್ಮ್ ಆತಂಕ ತಂದಿದೆ.

ಮುಂಬೈ: ಟೀಂ ಇಂಡಿಯಾದ ಹಿಟ್‌ ಮ್ಯಾನ್ ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಾರ್ನಿಂಗ್ ಮೆಸೇಜ್ ಬಂದಿದೆ. ಖುದ್ಧು ಆಯ್ಕೆ ಸಮಿತಿ ಮುಖ್ಯಸ್ಥ ಪ್ರಗ್ಯಾನ್ ಓಜಾ ಅವರು ರೋಹಿತ್ ವಿಚಾರದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬಹುದು ಎಂದು ವರದಿ ಆಗಿದೆ.

ಏನಾಯ್ತು?

ರೋಹಿತ್ ಶರ್ಮಾ ಇತ್ತೀಚೆಗೆ ವೆಸ್ಟ್ ವಿಂಡೀಸ್ ವಿರುದ್ಧದ ಏಕದಿನ ಸರಣಿ ಆಡಿದ್ದರು. ಈ ವೇಳೆ ಮೊದಲ ಪಂದ್ಯದಲ್ಲಿ 101, ಎರಡನೇ ಪಂದ್ಯದಲ್ಲಿ 92 ರನ್‌ಗಳಿಸಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಯ ನಾಲ್ಕು ಪಂದ್ಯಗಳಲ್ಲಿ ಕೇವಲ 30 ರನ್‌ಗಳಿಸಿ ನಿರಾಸೆ ಮೂಡಿಸಿದ್ದಾರೆ.

ಪಿಟಿಐ ವರದಿ ಪ್ರಕಾರ.. ಪ್ರಗ್ಯಾನ್ ಓಜಾ ಅವರು ರೋಹಿತ್ ಶರ್ಮಾಗೆ ಸಂಬಂಧಿಸಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಓಜಾ ಮತ್ತು ರೋಹಿತ್ ಇಬ್ಬರೂ ಆತ್ಮೀಯರಾಗಿದ್ದಾರೆ. ಹಾಗಿದ್ದೂ ಅವರ ನಿರ್ಧಾರ ರೋಹಿತ್ ಅಭಿಮಾನಿಗಳಿಗೆ ಕೆಟ್ಟ ಸುದ್ದಿ ಆಗಬಹುದು ಎಂದು ವರದಿ ಆಗಿದೆ.

ಇತ್ತೀಚೆಗೆ ಬಿಸಿಸಿಐ, ಅಜಿತ್ ಅಗರ್ಕರ್‍‌ಗೆ ಒಂದು ಜವಾಬ್ದಾರಿ ನೀಡಿತ್ತು. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಅವರ ನಿವೃತ್ತಿ ಬಗ್ಗೆ ತಿಳಿದುಕೊಳ್ಳುವಂತೆ ತಿಳಿಸಿತ್ತು. ಬಿಸಿಸಿಐ ಅಪ್ಪಣೆಯಂತೆ ಅರ್ಗಕರ್ ಇಟ್ಟಿದ್ದ ಪ್ರಸ್ತಾಪಕ್ಕೆ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದರಂತೆ. ಪಿಟಿಐ ವರದಿ ಪ್ರಕಾರ.. ರೋಹಿತ್ ಈ ಪ್ರಸ್ತಾಪವನ್ನು ಇಷ್ಟಪಡಲಿಲ್ಲ. ಜೊತೆಗೆ ಬಿಸಿಸಿಐ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಇದೇ ವಿಚಾರದಲ್ಲಿ ಅಗರ್ಕರ್ ಕಠಿಣ ಪರಿಸ್ಥಿತಿ ಎದುರಿಸಿದ್ದರು. ಇದೀಗ ಓಜಾ ಕೂಡ ಅಂತಹುದೇ ಸಮಸ್ಯೆಗೆ ಸಿಲುಕಿದ್ದಾರೆ ಎಂದು ವರದಿಯಾಗಿದೆ.

ಆತಂಕದಲ್ಲಿ ಗಂಭೀರ್

ಮುಂದಿನ ದಿನಗಳಲ್ಲಿ ಏಕದಿನ ವಿಶ್ವಕಪ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‍‌ಗಳ ಕಳಪೆ ಪ್ರದರ್ಶನವು ಕೋಚ್ ಗಂಭೀರ್ ಅವರ ಚಿಂತೆಗೂ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ 4ನೇ ಏಕದಿನ ಪಂದ್ಯದಲ್ಲಿ ಭಾರತ ಕೇವಲ 89 ರನ್‌ಗೆ ಆಲೌಟ್ ಆಗಿ, 244 ರನ್‌ಗಳಿಂದ ಹೀನಾಯ ಸೋಲು ಕಂಡಿತ್ತು. ಈ ಸೋಲಿನ ಬಳಿಕ ಮಾತನಾಡಿದ ಗಂಭೀರ್.. 2027ರ ವಿಶ್ವಕಪ್‌ಗೆ ಮುನ್ನ ಅಗ್ರ ಕ್ರಮಾಂಕ ಪದೇ ಪದೇ ಕುಸಿಯುತ್ತಿರುವುದು ಆತಂಕಕಾರಿ ಎಂದು ಹೇಳಿದ್ದಾರೆ.

ನ್ಯೂಜಿಲೆಂಡ್ ಸರಣಿಯಲ್ಲಿ ಭಾರತದ ಬ್ಯಾಟಿಂಗ್ ಸಂಪೂರ್ಣ ವಿಫಲವಾಯಿತು. ಇಡೀ ಸರಣಿಯಲ್ಲಿ ಭಾರತದ ಗರಿಷ್ಠ ಮೊತ್ತ ಕೇವಲ 209 ರನ್ ಆಗಿತ್ತು. ವಿರಾಟ್ ಕೊಹ್ಲಿ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದರು. ಅವರು 2 ಪಂದ್ಯಗಳಲ್ಲಿ ಒಟ್ಟು 86 ರನ್ ಗಳಿಸಿದರು. ಮೊದಲ ಪಂದ್ಯದಲ್ಲಿ 74 ರನ್ ಗಳಿಸಿದ್ದರು. ಮುಂದಿನ ವರ್ಷ ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧ ಇನ್ನೂ 6 ಏಕದಿನ ಪಂದ್ಯಗಳಿವೆ. ಈ ಪಂದ್ಯಗಳಲ್ಲಿ ಸರಿಯಾದ ತಂಡವನ್ನು ಆಯ್ಕೆ ಮಾಡುವುದು ನಾಯಕ ಶುಭಮನ್ ಗಿಲ್, ಕೋಚ್ ಗಂಭೀರ್ ಮತ್ತು ಆಯ್ಕೆದಾರ ಪ್ರಗ್ಯಾನ್ ಓಜಾ ಅವರಿಗೆ ದೊಡ್ಡ ಸವಾಲಾಗಿದೆ.

ಇತ್ತ ರೋಹಿತ್ ಶರ್ಮಾ ತಮ್ಮ ಫಾರ್ಮ್ ಸಾಬೀತುಪಡಿಸಬೇಕಿದೆ. ಮುಂದಿನ ವರ್ಷ ನಡೆಯುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಮುಂಬೈ ಪರ ಆಡಿ ಫಾರ್ಮ್ ತೋರಿಸಬೇಕಾಗುತ್ತದೆ. ರೋಹಿತ್ ಇದುವರೆಗೆ 296 ಏಕದಿನ ಪಂದ್ಯಗಳಲ್ಲಿ 12,150 ರನ್ ಗಳಿಸಿದ್ದಾರೆ. ಇದರಲ್ಲಿ 35 ಶತಕ ಮತ್ತು 63 ಅರ್ಧಶತಕಗಳಿವೆ. ಸರಾಸರಿ 48.6. ರೋಹಿತ್ ಫಾರ್ಮ್‌ಗೆ ಮರಳದಿದ್ದರೆ, ಮುಂಬೈನ ವಾಂಖೆಡೆ ಮೈದಾನದಲ್ಲಿ ಜಿಂಬಾಬ್ವೆ ವಿರುದ್ಧದ 3ನೇ ಏಕದಿನ ಪಂದ್ಯವೇ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಬಹುದು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಯಶಸ್ವಿ ಜೈಸ್ವಾಲ್ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ 'ಸಂತೋಷದಿಂದಿಲ್ಲ', ಅದು ಈ ತಂಡಕ್ಕೆ ಬಂಪರ್ ಆಗಬಹುದು: ಇರ್ಫಾನ್ ಪಠಾಣ್ ಅಚ್ಚರಿ ಭವಿಷ್ಯ
‘RCB ಒಂದು ಪಂದ್ಯ ಸೋತರೂ ಕೊಹ್ಲಿಯೇ ಕ್ಯಾಪ್ಟನ್‌ ಆಗಬೇಕೆಂದು ಬೆಂಗಳೂರು ಮಾತ್ರವಲ್ಲ, ಇಡೀ ಭಾರತ ಬಯಸುತ್ತಿತ್ತು’: ಮಾಜಿ ನಾಯಕ ಫಾಫ್‌ ಹೀಗಂದಿದ್ದೇಕೆ?