ಕೊಹ್ಲಿ ಫ್ಯಾನ್ಸ್ ತಿರುಗಿಬೀಳುತ್ತಿದ್ದಂತೆ ಹರ್ಷ, ಉಲ್ಟಾ ಹೊಡೆದಿದ್ದಾರೆ. ನಾನು ಆ ಅರ್ಥದಲ್ಲಿ ಹೇಳಿಲ್ಲ. ನಾನು ಮಾತನಾಡಿರೋದನ್ನ ಎಡಿಟ್ ಮಾಡಲಾಗಿದೆ ಅಂತ ಸಮಜಾಯಿಷಿ ನೀಡಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು(ಫೆ.20): ಅದೇನೋ ಹೇಳ್ತಾರಲ್ಲ, ಸುಮ್ಮನೆ ಇರಲಾರದೇ ಇರುವೆ ಬಿಟ್ಟುಕೊಂಡ್ರು ಅಂತ ಹಂಗಾಗಿದೆ, ಈ ಕ್ರಿಕೆಟ್ ವಿಶ್ಲೇಷಕನ ಕಥೆ. ಇಂಡಿಯನ್ ಕ್ರಿಕೆಟ್ ಕಿಂಗ್ ಬಗ್ಗೆ ಮಾತನಾಡಿ, ವಿವಾದವನ್ನೇ ಮೈಮೇಲೆ ಹಾಕಿಕೊಂಡಿದ್ದಾರೆ. ಆಮೇಲೆ ಅದು ಹಂಗಲ್ಲ. ಹಿಂಗೆ ಅಂತ ಸಮಜಾಯಿಷಿ ನೀಡಿದ್ದಾರೆ. ಅಷ್ಟಕ್ಕೂ ನಾವ್ಯಾರ ಬಗ್ಗೆ ಹೇಳ್ತದ್ದೀವಿ..? ಏನ್ ಸ್ಟೋರಿ ಅಂತೀರಾ..? ಇಲ್ಲಿದೆ ನೋಡಿ ಡಿಟೇಲ್ಸ್..!
ಹರ್ಷ ವಿರುದ್ಧ ತಿರುಗಿಬಿದ್ದ ವಿರಾಟ್ ಅಭಿಮಾನಿಗಳು..!
undefined
ಹರ್ಷ ಬೋಗ್ಲೆ..! ಕ್ರಿಕೆಟ್ ಜಗತ್ತಿನ ಫೇಮಸ್ ಕಾಮೆಂಟೇಟರ್ಗಳಲ್ಲಿ ಒಬ್ರು. ಒಂದೇ ಒಂದು ಕ್ರಿಕೆಟ್ ಮ್ಯಾಚ್ ಆಡದ ಹರ್ಷ, ಕಾಮೆಂಟೇಟರ್ ಆಗಿ ಬೆಳೆದ ಕಥೆಯೇ ರೋಚಕ. ಅದು ಎಂತವರಿಗೂ ಇನ್ಸಿಪಿರೇಷನ್. ಅದ್ರಲ್ಲಿ ಯಾವುದೇ ಡೌಟಿಲ್ಲ. ಆದ್ರೆ, ಇತ್ತೀಚೆಗೆ ಹರ್ಷ ಬೋಗ್ಲೆ ತಮ್ಮ ಕಾಮೆಂಟರಿಗಿಂತ ಹೆಚ್ಚು, ವಿವಾದಗಳಿಂದಲೇ ಸೌಂಡ್ ಮಾಡ್ತಿದ್ದಾರೆ. ಅದರಂತೆ ಈ ಬಾರಿ ಕೊಹ್ಲಿಯ ಬಗ್ಗೆ ಹಿಂದೆ-ಮುಂದೆ ಯೋಚಿಸದೇ, ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಸಂದರ್ಶವೊಂದರಲ್ಲಿ ಹರ್ಷ ಬೋಗ್ಲೆ, ಕೊಹ್ಲಿ ಟಿ20ಯಲ್ಲಿ ಆರ್‌ಸಿಬಿ ಮತ್ತು ಟೀಂ ಇಂಡಿಯಾ ಪರ ಹಿಂಗೆ ಆಡ್ತಿದ್ರೆ, ಮುಂದೊಂದಿನ ಕೊಹ್ಲಿಯನ್ನ ಔಟ್ ಮಾಡೋದು ಎದುರಾಳಿ ತಂಡಕ್ಕಿಂತ ಅವ್ರ ತಂಡಕ್ಕೆ ಲಾಭವಾಗಲಿದೆ ಅಂತ ಹೇಳಿದ್ದಾರೆ. ಆ ಮೂಲಕ ಟಿ20ಯಲ್ಲಿ ಕೊಹ್ಲಿ ಸ್ಲೋ ಬ್ಯಾಟಿಂಗ್ ಮಾಡ್ತಾರೆ. ಅವ್ರಿಂದ ತಂಡಕ್ಕೆ ಯಾವುದೇ ಉಪಯೋಗವಿಲ್ಲ ಅನ್ನೋ ಅರ್ಥದಲ್ಲಿ ಮಾತನಾಡಿದ್ದಾರೆ. ಬೋಗ್ಲೆಯ ಈ ಸ್ಟೇಟ್ಮೆಂಟ್ ಕೊಹ್ಲಿ ಅಭಿಮಾನಿಗಳನ್ನ ಕೆರಳಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಹರ್ಷ ವಿರುದ್ಧ ರನ್ಮಷಿನ್ ಫ್ಯಾನ್ಸ್ ಮುಗಿಬಿದ್ದಿದಾರೆ.
ಕೊಹ್ಲಿ ಫ್ಯಾನ್ಸ್ ತಿರುಗಿಬೀಳುತ್ತಿದ್ದಂತೆ ಹರ್ಷ, ಉಲ್ಟಾ ಹೊಡೆದಿದ್ದಾರೆ. ನಾನು ಆ ಅರ್ಥದಲ್ಲಿ ಹೇಳಿಲ್ಲ. ನಾನು ಮಾತನಾಡಿರೋದನ್ನ ಎಡಿಟ್ ಮಾಡಲಾಗಿದೆ ಅಂತ ಸಮಜಾಯಿಷಿ ನೀಡಿದ್ದಾರೆ. ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಹರ್ಷ ಕೊಹ್ಲಿಯನ್ನ ಟಾರ್ಗೆಟ್ ಮಾಡಿ ಮಾತನಾಡಿದ್ದು, ಇದೇ ಮೊದಲೇನಲ್ಲ. ಹಿಂದೆ ಹಲವು ಬಾರಿ ಕೊಹ್ಲಿಯನ್ನ ಟೀಕಿಸಿದ್ದಾರೆ. ಆಗಲೂ ವಿರಾಟ್ ಫ್ಯಾನ್ಸ್ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ದರು. ಆದ್ರೆ, ಈ ಬಾರಿ ಕೊಟ್ಟಿರೋ ಏಟಿಗೆ ಬೋಗ್ಲೇ ಸೈಲೆಂಟಾಗಿದ್ದಾರೆ.
ಮ್ಯಾಚ್ ವಿನ್ನರ್ ಬೇಕಾ..? ಅಟ್ಯಾಕಿಂಗ್ ಪ್ಲೇಯರ್ ಬೇಕಾ..?
ವಿರಾಟ್ ಕೊಹ್ಲಿ ಆರಂಭದಿಂದಲೇ ಅಟ್ಯಾಕಿಂಗ್ ಗೇಮ್ ಆಡಲ್ಲ ಅನ್ನೋ ನಿಜ. ಆದ್ರೆ, ಸಂದರ್ಭಕ್ಕೆ ತಕ್ಕಂತೆ ಕೊಹ್ಲಿ ಆಡೋದ್ರಲ್ಲಿ ಪಂಟರ್. ESPECIALLY ಚೇಸಿಂಗ್ ವೇಳೆ, ತಂಡವನ್ನ ಗೆಲುವಿನ ದಡ ಸೇರಿಸಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವೇ ಇದಕ್ಕೆ ಸಾಕ್ಷಿ.
160 ರನ್ ಟಾಗೆರ್ಟ್ ಚೇಸ್ ಮಾಡ್ತಿದ್ದ ಟೀಮ್ ಇಂಡಿಯಾ, 31 ರನ್‌ಗೆ 4 ವಿಕೆಟ್ ಕಳ್ಕೊಂಡಿತ್ತು. ಭಾರತೀಯರು ಗೆಲುವಿನ ಆಸೆಯನ್ನ ಬಿಟ್ಟಿದ್ದರು. ಆದ್ರೆ, ಕೊಹ್ಲಿ ಕೊನೆಯವರೆಗೂ ಹೋರಾಡಿ, ಭಾರತದ ಬಾವುಟ ಗರ್ವದಿಂದ ಹಾರಾಡುವಂತೆ ಮಾಡಿದ್ರು. ಆಗ ಇದೇ ಹರ್ಷಬೋಗ್ಲೆ ಕಾಮೆಂಟರಿ ಮಾಡ್ತಿದ್ರು. ಇದೊಂದೆ ಅಲ್ಲ, ಹಲವು ಪಂದ್ಯಗಳಲ್ಲಿ ಕೊಹ್ಲಿ ಆ್ಯಂಕರ್ + ಅಗ್ರೆಸ್ಸಿವ್ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಇನ್ನು IPLನ ಒಂದೇ ಸೀಸನ್ನಲ್ಲಿ 4 ಶತಕ ಬಾರಿಸಿದ ಒನ್ ಆ್ಯಂಡ್ ಓನ್ಲಿ ಬ್ಯಾಟ್ಸ್ಮನ್ ಅಂದ್ರೆ ಅದು ಕೊಹ್ಲಿ.
ಟಿ20ಯಲ್ಲಿ ಕೊಹ್ಲಿ ಎಂತಹ ಗ್ರೇಟ್ ಬ್ಯಾಟರ್ ಅನ್ನೋದನ್ನ ಅವ್ರ ಅಂಕಿಅಂಶಗಳೇ ಹೇಳುತ್ವೆ. ಸೋ ಮಿಸ್ಟರ್ ಹರ್ಷಬೋಗ್ಲೆ ಇನ್ನೊಮ್ಮೆ ಕೊಹ್ಲಿ ಬಗ್ಗೆ ಮಾತನಾಡೋವಾಗ ಹುಷಾರಾಗಿರಿ.
- ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್