ಕಳೆದ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಆಡಿರಲಿಲ್ಲ, ಈ ಸಲ ಇವರೇ ಸ್ಟಾರ್ ಪ್ಲೇಯರ್ಸ್​..!

Published : Jul 21, 2022, 11:24 AM IST
ಕಳೆದ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಆಡಿರಲಿಲ್ಲ, ಈ ಸಲ ಇವರೇ ಸ್ಟಾರ್ ಪ್ಲೇಯರ್ಸ್​..!

ಸಾರಾಂಶ

ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭರ್ಜರಿ ಸಿದ್ದತೆ ನಡೆಸುತ್ತಿರುವ ಟೀಂ ಇಂಡಿಯಾ ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಕಳೆದ ಬಾರಿಯಲ್ಲಿ ಆಡಿರದ ಆಟಗಾರರು ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಕೀ ಆಟಗಾರರು..!

ಬೆಂಗಳೂರು(ಜು.21): 2021ರ ಅಕ್ಟೋಬರ್​-ನವೆಂಬರ್​ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಯುಎಒನಲ್ಲಿ ನಡೆದಿತ್ತು. 2022ರ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್​-ನವೆಂಬರ್​ನಲ್ಲಿ ನಡೆಯುತ್ತಿದೆ. ಜಸ್ಟ್ 12 ತಿಂಗಳ ಅಂತರದಲ್ಲಿ ಎರಡು ಮಹಾ ಟೂರ್ನಿಗಳು ನಡೆಯುತ್ತಿದ್ದರೂ ಭಾರತ ತಂಡದಲ್ಲಿ ಅರ್ಧಡಜನ್​ಗೂ ಹೆಚ್ಚು ಬದಲಾವಣೆಗಳು ಆಗಲಿವೆ. ನಿಮಗೆ ಆಶ್ಚರ್ಯವಾದ್ರೂ ಇದು ನಿಜ. ಆದ್ರೆ ಕಳೆದ ವರ್ಷ ಯಾರು ಬೇಡವಾಗಿದ್ದರೋ ಅವರು ಈ ಸಲ ಬೇಕಾಗಿದ್ದಾರೆ. ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದವನೂ ಈ ಸಲ ಟ್ರಂಪ್​ಕಾರ್ಡ್​ ಪ್ಲೇಯರ್ ಆಗಿದ್ದಾನೆ.

ಅನ್‌ಫಿಟ್​ & ಕಳಪೆ ಫಾರ್ಮ್​ ಟೀಂ ಇಂಡಿಯಾದಿಂದ ಡ್ರಾಪ್​: 

2021ರ ಟಿ20 ವಿಶ್ವಕಪ್​ನಲ್ಲಿ ಕಳಪೆ ಫಾರ್ಮ್​ ಜೊತೆ ಫಿಟ್ನೆಸ್ ಸಮಸ್ಯೆ ಎದುರಿಸಿ ಕಾಂಟ್ರವರ್ಸಿ ಮಾಡಿಕೊಂಡಿದ್ದ ಆಲ್​ರೌಂಡರ್ ಹಾರ್ದಿಕ್ ಪಾಂಡ್ಯ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದರು. ಆದ್ರೆ ಫಿನಿಕ್ಸ್​ನಂತೆ ಮೇಲೆದ್ದು ಬಂದ ಹಾರ್ದಿಕ್, ಅದ್ಭುತ ಪ್ರದರ್ಶನ ನೀಡ್ತಿದ್ದಾರೆ. ಗುಜರಾತ್ ಟೈಟಾನ್ಸ್ ಲೀಡ್ ಮಾಡಿ ಐಪಿಎಲ್ ಟ್ರೋಫಿ ಗೆಲ್ಲಿಸಿಕೊಟ್ಟ ಪಾಂಡ್ಯ, ಸೌತ್ ಆಫ್ರಿಕಾ ಟಿ20 ಸಿರೀಸ್​ನಲ್ಲಿ ಆಲ್​ರೌಂಡ್ ಆಟವಾಡಿ ಮಿಂಚಿದ್ದರು. ಟೀಂ ಇಂಡಿಯಾ ನಾಯಕನಾಗಿ ಐರ್ಲೆಂಡ್​ನಲ್ಲಿ ಟಿ20 ಸರಣಿ ಗೆಲ್ಲಿಸಿಕೊಟ್ಟ ಹಾರ್ದಿಕ್, ಇಂಗ್ಲೆಂಡ್ ಒನ್​ಡೇ ಸಿರೀಸ್​ನಲ್ಲಿ ಮ್ಯಾನ್ ಆಫ್​ ದ ಸಿರೀಸ್ ಪಡೆದಿದ್ದಾರೆ. ಈಗ ಪಾಂಡ್ಯನೇ ಟಿ20 ವರ್ಲ್ಡ್​ಕಪ್​ಗೆ ಟ್ರಂಪ್​ಕಾರ್ಡ್​ ಪ್ಲೇಯರ್.

ಕಾಮೆಂಟ್ರಿ ಬಾಕ್ಸ್​ನಿಂದ ಮೈದಾನಕ್ಕೆ ಬಂದ ಡಿಕೆ: 

2019 ಒನ್​ಡೇ ವರ್ಲ್ಡ್​ಕಪ್​ ಬಳಿಕ ಟೀಂ ಇಂಡಿಯಾದಿಂದ ಡ್ರಾಪ್ ಆಗಿದ್ದ ದಿನೇಶ್ ಕಾರ್ತಿಕ್, ಕಾಮೆಂಟ್ರಿ ಬಾಕ್ಸ್ ಸೇರಿಕೊಂಡಿದ್ದರು. ಆದ್ರೆ ಈ ಸಲದ ಐಪಿಎಲ್​ನಲ್ಲಿ ಆರ್​ಸಿಬಿ ಪರ ಮ್ಯಾಚ್ ಫಿನಿಶ್ ಮಾಡಿದ್ದರಿಂದ ಮತ್ತೆ ತಂಡಕ್ಕೆ ವಾಪಾಸ್ ಆದ್ರು. ಈ ವಿಶ್ವಕಪ್ ಟೀಮ್​ನಲ್ಲಿ ಪಾಂಡ್ಯ ಜೊತೆ ಡಿಕೆನೇ ಫಿನಿಶರ್. ವರ್ಷದ ಹಿಂದೆ ಬೇಡವಾಗಿದ್ದವನು ಈಗ ಬೇಕಾಗಿದ್ದಾನೆ.

ಟಿ20 ವಿಶ್ವಕಪ್​ನಲ್ಲಿ ಅದ್ಭುತ ಟ್ರ್ಯಾಕ್ ರೆಕಾರ್ಡ್:​ ಬಿಸಿಸಿಐಗೆ ತಲೆನೋವಾದ ವಿರಾಟ್ ಕೊಹ್ಲಿ ಫಾರ್ಮ್..!​

ಕಳೆದ ವಿಶ್ವಕಪ್​ನಿಂದ ಡ್ರಾಪ್, ಈ ವಿಶ್ವಕಪ್​ಗೆ ಈತನೇ ಮೇನ್ ಸ್ಪಿನ್ನರ್​: 

ರಿಸ್ಟ್ ಸ್ಪಿನ್ನರ್ ಯುಜವೇಂದ್ರ ಚಹಲ್, ಮೂರ್ನಾಲ್ಕು ವರ್ಷದಿಂದ ಟೀಂ ಇಂಡಿಯಾದ ಮೇನ್ ಸ್ಪಿನ್ನರ್ ಆಗಿದ್ದರೂ ಕಳಪೆ ಫಾರ್ಮ್​ನಲ್ಲಿದ್ದಾರೆ ಅಂತ ಕಳೆದ ಟಿ20 ವಿಶ್ವಕಪ್ ಟೀಮ್​ನಿಂದ ಡ್ರಾಪ್ ಆದ್ರು. ಆದ್ರೆ ಫಿನಿಕ್ಸ್​ನಂತೆ ಮೇಲೆದ್ದು ಬಂದ ಚಹಲ್, ಮತ್ತೆ ಟೀಂ ಇಂಡಿಯಾಗೆ ಎಂಟ್ರಿಕೊಟ್ಟಿದ್ದಾರೆ. ಶಾರ್ಟ್​ ಫಾಮ್ಯಾಟ್​ನಲ್ಲಿ ಈಗ ಅವರೇ ಟ್ರಂಪ್​ಕಾರ್ಡ್​ ಬೌಲರ್​. ಕಳೆದ ವಿಶ್ವಕಪ್​ಗೆ ಬೇಡವಾಗಿದ್ದ ಚಹಲ್, ಈ ವಿಶ್ವಕಪ್​​​ನಲ್ಲಿ ಮೇನ್ ಸ್ಪಿನ್ನರ್.

ಆರೆಂಜ್ ಕ್ಯಾಪ್ ಗೆದ್ದರು ವಿಶ್ವಕಪ್ ಆಡಲಿಲ್ಲ..!: 

ಹರ್ಷಲ್ ಪಟೇಲ್ 2021ರ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ವಿನ್ನರ್. ಆದ್ರೂ ಟಿ20 ವರ್ಲ್ಡ್​ಕಪ್​ಗೆ ಸೆಲೆಕ್ಟ್ ಆಗಲಿಲ್ಲ. ಆದರೆ ಈಗ ಟಿ20 ಟೀಮ್​ನಲ್ಲಿ ಪರ್ಮನೆಂಟ್ ಪ್ಲೇಸ್ ಇದ್ದು, ಈ ಸಲ ವಿಶ್ವಕಪ್ ಆಡೋದು ಕನ್ಫರ್ಮ್​. ಕಳೆದ ವರ್ಷ ಬೇಡವಾಗಿದ್ದ ಹರ್ಷಲ್ ಪಟೇಲ್‌, ಈ ಸಲ ತಂಡಕ್ಕೆ ಬೇಕಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಮೋಸ ಮಾಡಿಲ್ಲ, ಗಾಸಿಪ್‌ ನಂಬಬೇಡಿ ಎಂದ Palash Muchhal; ಮದುವೆ ಕ್ಯಾನ್ಸಲ್‌ ಎಂದ Smriti Mandhana
ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana