
ಬೆಂಗಳೂರು (ನ.19): ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಟೂರ್ನಿಯ ಫೈನಲ್ ಪಂದ್ಯದ ಒಂದು ವಿಡಿಯೋ ಕೆಟ್ಟ ಕಾರಣಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಕೆಟ್ಟ ಕಾರಣಕ್ಕಾಗಿ ವೈರಲ್ ಆಗಿದೆ. ಹಿಂದಿ ವಾಹಿನಿಯ ಕಾಮೆಂಟ್ರಿಯಲ್ಲಿ ಪಂದ್ಯದ ವಿಶ್ಲೇಷಣೆ ಮಾಡುವಾಗ, ಕ್ಯಾಮೆರಾ ಗ್ಯಾಲರಿಯಲ್ಲಿ ಕುಳಿತಿದ್ದ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ಹಾಗೂ ಕೆಎಲ್ ರಾಹುಲ್ ಪತ್ನಿ ಆಥಿಯಾ ಶೆಟ್ಟಿ ಅವರನ್ನು ತೋರಿಸುತ್ತದೆ. ಈ ಹಂತದಲ್ಲಿ ಹಿಂದಿ ಕಾಮೆಂಟ್ರಿ ಬಾಕ್ಸ್‌ನಲ್ಲಿರುವ ಹರ್ಭಜನ್ ಸಿಂಗ್ ಸ್ತೀವಿರೋಧಿ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ನೇರಪ್ರಸಾರದ ಸಮಯದಲ್ಲಿಯೇ ಇವರಿಬ್ಬರ ಕ್ರಿಕೆಟ್ ಜ್ಞಾನದ ಕುರಿತಾಗಿ ಭಜ್ಜಿ ಪ್ರಶ್ನೆ ಮಾಡಿದ್ದಾರೆ.
ಪಂದ್ಯದ ಕಾಮೆಂಟ್ರಿ ವೇಳೆ ಹರ್ಭಜನ್ ಸಿಂಗ್, 'ಔರ್ ಯೇ ಮೇ ಸೋಚ್ ರಹಾ ಥಾ ಕೀ ಬಾತ್ ಕ್ರಿಕೆಟ್ ಕಿ ಹೋ ರಹಿ ಹೇ ಯಾ ಫಿಲ್ಮೋನ್ ಕಿ. ಕ್ಯುಂಕೀ ಕ್ರಿಕೆಟ್ ಕೆ ಬಾರೇ ಮೇ ತೋ ಜಾನ್ತಾ ನಹೀ ಕಿತ್ನಿ ಸಮಜ್ ಹೋಗಿ (ಮತ್ತಿಲ್ಲಿ ಚರ್ಚೆ ನಡೆಯುತ್ತಿರುವುದು ಕ್ರಿಕೆಟ್ ಬಗ್ಗೆಯೋ ಸಿನಿಮಾ ಬಗ್ಗೆಯೋ ಎಂದು ನಾನು ಯೋಚಿಸುತ್ತಿದ್ದೆ. ಏಕೆಂದರೆ, ಅವರಿಗೆ ಕ್ರಿಕೆಟ್ ಬಗ್ಗೆ ಎಷ್ಟು ಜ್ಞಾನವಿದೆ ಎನ್ನುವುದರ ಬಗ್ಗೆ ನನಗೆ ಗೊತ್ತಿಲ್ಲ)' ಎಂದು ಹೇಳಿದ್ದಾರೆ. ಫೈನಲ್ ಪಂದ್ಯದಲ್ಲಿ ಆಡುತ್ತಿದ್ದ ತಮ್ಮ ಸಂಗಾತಿಗಳಾದ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಇವರಿಬ್ಬರೂ ನರೇಂದ್ರ ಮೋದಿ ಸ್ಟೇಡಿಯಂಗೆ ಆಗಮಿಸಿದ್ದರು.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಆದ ಬೆನ್ನಲ್ಲಿಯೇ ಹಿಂದಿ ವಾಹಿನಿಯ ವಿಶ್ಲೇಷಕರು ತಮ್ಮ 'ಸೆಕ್ಸಿಸ್ಟ್' ಕಾಮೆಂಟ್‌ಗಳಿಗೆ ಭಾರಿ ಟೀಕೆಯನ್ನು ಎದುರಿಸಿದ್ದಾರೆ. ಎಕ್ಸ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿರುವ ಬಳಕೆದಾರರು, ಇವರಿಬ್ಬರ ಕ್ರಿಕೆಟ್ ಜ್ಞಾನವನ್ನು ಪ್ರಶ್ನೆ ಮಾಡಿದ ಹರ್ಭಜನ್ ಅವರ ಮಾತುಗಳಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿ ಕಾಮೆಂಟೇಟರ್‌ಗಳು ಮುಕ್ತವಾಗಿ ಅನುಷ್ಕಾ ಶರ್ಮ ಅವರ ಕ್ರಿಕೆಟ್ ಜ್ಞಾನದ ಬಗ್ಗೆ ಅಪಹಾಸ್ಯ ಮಾಡದ್ದಾರೆ. ನಾವು ಯಾವಾಗ ಇದನ್ನೆಲ್ಲಾ ಕಲಿಯುತ್ತೇವೆಯೋ ಗೊತ್ತಿಲ್ಲ. ಅವರು ಕೇವಲ ಅನುಷ್ಕಾ ಮಾತ್ರವೇ ಅಲ್ಲ ಇತ್ತೀಚೆಗೆ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ ವಿರಾಟ್ ಕೊಹ್ಲಿ ಅವರ ಪತ್ನಿ. ಕೋಟಿಗಟ್ಟಲೆ ಜನ ನೋಡುವಾಗ ಯಾರೋ ಒಬ್ಬರನ್ನು ಅಪಹಾಸ್ಯ ಮಾಡುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಒಬ್ಬರು ಬರೆದಿದ್ದಾರೆ.
ಕೊಹ್ಲಿ ಗುರಿಯಾಗಿಸಿ ಬಾಲ್ ಎಸೆದ್ರಾ ಮ್ಯಾಕ್ಸ್‌ವೆಲ್? ಫೈನಲ್ ಪಂದ್ಯದ ಘಟನೆ ವೈರಲ್!
"ಭಾರತ ಮತ್ತು ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ಸ್ ಸಮಯದಲ್ಲಿ ಅನುಷ್ಕಾ ಮತ್ತು ಅಥಿಯಾ ಅವರು ಚಲನಚಿತ್ರಗಳ ಬಗ್ಗೆ ಮಾತನಾಡುತ್ತಿರಬೇಕು ಏಕೆಂದರೆ "ಕ್ರಿಕೆಟ್ ಕಿ ಜ್ಯಾದಾ ಸಮಾಜ್ ತೋ ಹೋಗಿ ನಹೀ" ಎಂದಿರುವುದನ್ನು ಒಪ್ಪಲು ಸಾಧ್ಯವಿಲ್ಲ. ವಿಷಯ ಯಾವುದೇ ಇರಲಿ ಸ್ವೀದ್ವೇಷ ಎನ್ನುವುದು ಸರ್ವವ್ಯಾಪಿಯಾಗಿದೆ' ಎಂದು ಇನ್ನೊಬ್ಬ ವ್ಯಕ್ತಿ ಬರೆದಿದ್ದಾರೆ.
INDvAUS ಫೈನಲ್‌ನಲ್ಲಿ ಭಾರತದ ಬ್ಯಾಟಿಂಗ್‌ಗೆ ಜಯ್ ಶಾ, ಸೂರ್ಯಕುಮಾರ್ ಟ್ರೋಲ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.