CSK ತಂಡಕ್ಕೆ ಧೋನಿಯೇ ಓನರ್, ಆತನ ಅನುಮತಿಯಿಲ್ಲದೇ ಒಂದು ಎಲೆಯೂ ಅಲ್ಲಾಡಲ್ಲ: ಭಜ್ಜಿ

Published : May 14, 2024, 01:11 PM IST
CSK ತಂಡಕ್ಕೆ ಧೋನಿಯೇ ಓನರ್, ಆತನ ಅನುಮತಿಯಿಲ್ಲದೇ ಒಂದು ಎಲೆಯೂ ಅಲ್ಲಾಡಲ್ಲ: ಭಜ್ಜಿ

ಸಾರಾಂಶ

ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಆಡಿತು. ಈ ಪಂದ್ಯ ಮುಕ್ತಾಯದ ಬಳಿಕ ಫ್ರಾಂಚೈಸಿಯು ತನ್ನ ತಂಡದ ಎಲ್ಲಾ ಆಟಗಾರರಿಗೆ ಸನ್ಮಾನಿಸುವುದರ ಜತೆಗೆ ಪದಕಗಳನ್ನು ಹಾಕಿ ಗೌರವಿಸಿತು. ಇನ್ನು ಧೋನಿ ಕೂಡಾ ಮೈದಾನದಲ್ಲಿದ್ದ ಸಿಎಸ್‌ಕೆ ಅಭಿಮಾನಿಗಳಿಗೆ ತಮ್ಮ ಸಹಿ ಇರುವ ಟೆನಿಸ್ ಬಾಲ್‌ಗಳನ್ನು ನೀಡುವ ಮೂಲಕ ಸ್ಮರಣೀಯ ಗಿಫ್ಟ್ ನೀಡಿದರು. ಇದೆಲ್ಲ ಗಮನಿಸಿದ ಬಳಿಕ ಇದು ಧೋನಿ ಪಾಲಿನ ಕೊನೆಯ ಐಪಿಎಲ್ ಎಂದೇ ಕ್ರಿಕೆಟ್‌ ಪಂಡಿತರು ಊಹಿಸಿಕೊಳ್ಳುತ್ತಿದ್ದಾರೆ.

ಚೆನ್ನೈ: ಮತ್ತೊಂದು ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ ನಿರ್ಣಾಯಕ ಘಟದತ್ತ ಬಂದು ನಿಂತಿದೆ. ಹೀಗಾಗಿ ಮತ್ತೊಮ್ಮೆ ಐಪಿಎಲ್‌ನ ಯಶಸ್ವಿ ನಾಯಕ ಎನಿಸಿಕೊಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿಯ ಭವಿಷ್ಯದ ಕುರಿತಂತೆ ಮತ್ತೆ ಚರ್ಚೆಗಳು ಆರಂಭವಾಗಿವೆ. ಎಂ ಎಸ್ ಧೋನಿ 2020ರ ಆಗಸ್ಟ್ 15ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್ ಬೈ ಹೇಳಿದಾಗಿನಿಂದ ಅವರ ಐಪಿಎಲ್ ನಿವೃತ್ತಿಯ ಕುರಿತಾಗಿ ಪ್ರತಿ ವರ್ಷ ಚರ್ಚೆಯಾಗುತ್ತಲೇ ಬಂದಿದೆ.

ಧೋನಿಯ ಐಪಿಎಲ್ ನಿವೃತ್ತಿಯ ಕುರಿತಾಗಿ ಪ್ರಶ್ನೆ ಕೇಳಿದಾಗಲೆಲ್ಲ ಮಹಿ, ಡೆಫಿನೇಟ್ಲಿ ನಾಟ್(ಖಂಡಿತವಾಗಿಯೂ ಇಲ್ಲ) ಎಂದು ಒಗಟಾಗಿ ಹೇಳುತ್ತಲೇ ಬಂದಿದ್ದಾರೆ. ಇನ್ನು ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸಿದ ಧೋನಿ ನೇತೃತ್ವದ  ಚೆನ್ನೈ ಸೂಪರ್ ಕಿಂಗ್ಸ್ 5ನೇ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆಗಲೇ ಧೋನಿ ನಿವೃತ್ತಿ ಹೇಳಲಿದ್ದಾರೆ ಎನ್ನಲಾಗಿತ್ತು. ಆದರೆ ಧೋನಿ ಹಾಗೆ ಮಾಡದೇ ಮತ್ತೊಂದು ಆವೃತ್ತಿಯಲ್ಲಿ ಕಣಕ್ಕಿಳಿದಿದ್ದಾರೆ. ಈ ಬಾರಿ ನಾಯಕನಾಗಿರದೇ, ಕೇವಲ ವಿಕೆಟ್ ಕೀಪರ್ ಬ್ಯಾಟರ್ ಆಗಿ ಧೋನಿ ಕಾಣಿಸಿಕೊಂಡಿದ್ದಾರೆ. ಈಗ ಮತ್ತೆ ಧೋನಿ ಭವಿಷ್ಯದ ಕುರಿತು ಚರ್ಚೆ ಶುರುವಾಗಿದೆ. 

IPL 2024 ಭೇಟಿಗೆ ಬಂದು ಬೇಟೆ ಆದ್ರು: ಡೆಲ್ಲಿ ಕ್ಯಾಪಿಟಲ್ಸ್ ಕಾಲೆಳೆದ ಆರ್‌ಸಿಬಿ!

ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡವು ತವರಿನಲ್ಲಿ ಲೀಗ್ ಹಂತದ ಕೊನೆಯ ಪಂದ್ಯವನ್ನು ರಾಜಸ್ಥಾನ ರಾಯಲ್ಸ್ ಎದುರು ಆಡಿತು. ಈ ಪಂದ್ಯ ಮುಕ್ತಾಯದ ಬಳಿಕ ಫ್ರಾಂಚೈಸಿಯು ತನ್ನ ತಂಡದ ಎಲ್ಲಾ ಆಟಗಾರರಿಗೆ ಸನ್ಮಾನಿಸುವುದರ ಜತೆಗೆ ಪದಕಗಳನ್ನು ಹಾಕಿ ಗೌರವಿಸಿತು. ಇನ್ನು ಧೋನಿ ಕೂಡಾ ಮೈದಾನದಲ್ಲಿದ್ದ ಸಿಎಸ್‌ಕೆ ಅಭಿಮಾನಿಗಳಿಗೆ ತಮ್ಮ ಸಹಿ ಇರುವ ಟೆನಿಸ್ ಬಾಲ್‌ಗಳನ್ನು ನೀಡುವ ಮೂಲಕ ಸ್ಮರಣೀಯ ಗಿಫ್ಟ್ ನೀಡಿದರು. ಇದೆಲ್ಲ ಗಮನಿಸಿದ ಬಳಿಕ ಇದು ಧೋನಿ ಪಾಲಿನ ಕೊನೆಯ ಐಪಿಎಲ್ ಎಂದೇ ಕ್ರಿಕೆಟ್‌ ಪಂಡಿತರು ಊಹಿಸಿಕೊಳ್ಳುತ್ತಿದ್ದಾರೆ.

ಇನ್ನು ಈ ಕುರಿತಂತೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಕ್ರಿಕೆಟ್ ವಿಶ್ಲೇಷಕರಾಗಿರುವ ಹರ್ಭಜನ್ ಸಿಂಗ್, ಧೋನಿ ಕುರಿತಾಗಿ ಅಚ್ಚರಿಯ ಮಾತುಗಳನ್ನಾಡಿದ್ದಾರೆ. "ಅವರೇ ಆ ತಂಡದ ಮಾಲೀಕ. ಅವರ ಅಪ್ಪಣೆಯಿಲ್ಲದೇ ಅಲ್ಲಿ ಒಂದು ಎಲೆಯೂ ಅಲ್ಲಾಡುವುದಿಲ್ಲ. ಅದು ಅವರದ್ದೇ ತಂಡ. ಅವರು ತಂಡಕ್ಕಾಗಿ ರಕ್ತ, ಬೆವರು ಹರಿಸಿದ್ದಾರೆ. ಅವರು ಭವಿಷ್ಯದಲ್ಲೂ ಖಂಡಿತವಾಗಿ ಚೆನ್ನೈನ ಭಾಗವಾಗಿಯೇ ಇರುತ್ತಾರೆ. ಅದು ಮೆಂಟರ್ ಆಗಿ ಇರಬಹುದು ಅಥವಾ ಕೋಚ್ ಆಗಿ ಇರಬಹುದು. ಯಾಕೆಂದರೆ ಅಲ್ಲಿ ಧೋನಿ ಎಲ್ಲವೂ ಆಗಿದ್ದಾರೆ" ಎಂದು ಭಜ್ಜಿ ಹೇಳಿದ್ದಾರೆ

"ಮುಂಬರುವ ಸೀಸನ್‌ಗಳಲ್ಲಿ ಖಂಡಿತವಾಗಿಯೂ ನೀವು ಧೋನಿಯನ್ನು ಚೆನ್ನೈ ಸೂಪರ್ ಕಿಂಗ್ಸ್‌ ಡಗೌಟ್‌ನಲ್ಲಿ ನೋಡುತ್ತೀರ. ಓರ್ವ ಆಟಗಾರನಾಗಿ ಅಲ್ಲದಿದ್ದರೂ, ಬೇರೆ ರೂಪದಲ್ಲಿ ಧೋನಿ ನಿಮಗೆ ನೋಡಲು ಸಿಗುತ್ತಾರೆ. ಅವರು ಆಟಗಾರರ ಜತೆಗೆ ಖಂಡಿತ ಇರುತ್ತಾರೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿಯಲ್ಲ, ಈ ಆಟಗಾರ ಹೆಚ್ಚು ಹಾರ್ಡ್‌ ವರ್ಕ್ ಮಾಡುವ ಆಟಗಾರ ಎಂದ ಯಶಸ್ವಿ ಜೈಸ್ವಾಲ್!
14 ವರ್ಷದ ವೈಭವ್ ಸೂರ್ಯವಂಶಿ 95 ಎಸೆತಕ್ಕೆ 171; ಯುವ ಭಾರತಕ್ಕೆ 234 ರನ್ ಜಯ!