IPL 2024 ಪ್ಲೇಆಫ್‌ ಸ್ಥಾನಕ್ಕಾಗಿ ಇಂದು ಲಖನೌ vs ಡೆಲ್ಲಿ ಸೆಣಸಾಟ

By Naveen Kodase  |  First Published May 14, 2024, 11:13 AM IST

ಡೆಲ್ಲಿ 13 ಪಂದ್ಯಗಳನ್ನಾಡಿದ್ದು. 12 ಅಂಕ ಸಂಪಾದಿಸಿದೆ. ತಂಡಕ್ಕಿದು ಕೊನೆ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದು, ಚೆನ್ನೈ, ಹೈದರಾಬಾದ್‌ ಹಾಗೂ ಆರ್‌ಸಿಬಿ ತಂಡಗಳನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಲು ಸಾಧ್ಯವಾದರೆ ಮಾತ್ರ ಪ್ಲೇ-ಆಫ್‌ರೇಸ್‌ನಲ್ಲಿ ಜೀವಂತವಾಗಿ ಉಳಿಯಲಿದೆ.


ನವದೆಹಲಿ: 17ನೇ ಆವೃತ್ತಿ ಐಪಿಎಲ್‌ನ ಪ್ಲೇ-ಆಫ್‌ ರೇಸ್‌ನಲ್ಲಿ ಸಾಕಷ್ಟು ಪೈಪೋಟಿ ನೀಡುತ್ತಿರುವ 2 ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಲಖನೌ ಸೂಪರ್‌ ಜೈಂಟ್ಸ್ ಮಂಗಳವಾರ ಪರಸ್ಪರ ಸೆಣಸಾಡಲಿವೆ. 2 ತಂಡಕ್ಕೂ ಈ ಪಂದ್ಯ ನಿರ್ಣಾಯಕವೆನಿಸಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

ಡೆಲ್ಲಿ 13 ಪಂದ್ಯಗಳನ್ನಾಡಿದ್ದು. 12 ಅಂಕ ಸಂಪಾದಿಸಿದೆ. ತಂಡಕ್ಕಿದು ಕೊನೆ ಪಂದ್ಯ. ದೊಡ್ಡ ಅಂತರದಲ್ಲಿ ಗೆದ್ದು, ಚೆನ್ನೈ, ಹೈದರಾಬಾದ್‌ ಹಾಗೂ ಆರ್‌ಸಿಬಿ ತಂಡಗಳನ್ನು ನೆಟ್‌ ರನ್‌ರೇಟ್‌ನಲ್ಲಿ ಹಿಂದಿಕ್ಕಲು ಸಾಧ್ಯವಾದರೆ ಮಾತ್ರ ಪ್ಲೇ-ಆಫ್‌ರೇಸ್‌ನಲ್ಲಿ ಜೀವಂತವಾಗಿ ಉಳಿಯಲಿದೆ. ಸೋತರೆ ಅಧಿಕೃತವಾಗಿ ಹೊರಬೀಳಲಿದೆ.

Tap to resize

Latest Videos

ಅತ್ತ ಲಖನೌ 12ರಲ್ಲಿ 6 ಗೆದ್ದು 12 ಅಂಕ ಸಂಪಾದಿಸಿದೆ. ಉಳಿದಿರುವ 2 ಪಂದ್ಯ ಗೆದ್ದರೆ ನಾಕೌಟ್‌ ರೇಸ್‌ನಲ್ಲಿ ಉಳಿದುಕೊಳ್ಳಲಿದೆ. 1 ಪಂದ್ಯ ಸೋತರೂ ತಂಡಕ್ಕೆ ಹಿನ್ನಡೆಯಾಗಲಿದ್ದು, ಆಗ ಚೆನ್ನೈ ಹಾಗೂ ಆರ್‌ಸಿಬಿಯ ಪ್ಲೇ-ಆಫ್‌ ಹಾದಿ ಸುಗಮವಾಗಲಿದೆ. ಸದ್ಯ ಎಲ್ಲರ ಚಿತ್ತ ಕೆ.ಎಲ್‌.ರಾಹುಲ್‌ ಮೇಲಿದ್ದು, ಡೆಲ್ಲಿ ವಿರುದ್ಧ ಲಖನೌ ತಂಡವನ್ನು ಮುನ್ನಡೆಸುತ್ತಾರೊ ಅಥವಾ ಕೇವಲ ಬ್ಯಾಟರ್‌ ಆಗಿ ಕಣಕ್ಕಿಳಿಯುತ್ತಾರೊ ಎಂಬ ಕುತೂಹಲವಿದೆ.

ಒಟ್ಟು ಮುಖಾಮುಖಿ: 04

ಡೆಲ್ಲಿ: 01

ಲಖನೌ: 03

ಸಂಭವನೀಯ ಆಟಗಾರರ ಪಟ್ಟಿ

ಡೆಲ್ಲಿ: ಜೇಕ್ ಫ್ರೇಸರ್‌, ಅಭಿಷೇಕ್ ಪೊರೆಲ್‌, ಶಾಯ್ ಹೋಪ್‌, ರಿಷಭ್‌ ಪಂತ್(ನಾಯಕ), ಟ್ರಿಸ್ಟಿನ್ ಸ್ಟಬ್ಸ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರಾಸಿಕ್‌ ಸಲಾಂ, ಮುಕೇಶ್‌ ಕುಮಾರ್, ಇಶಾಂತ್‌ ಶರ್ಮಾ, ಖಲೀಲ್‌ ಅಹಮದ್.

ಲಖನೌ: ಕ್ವಿಂಟನ್ ಡಿ ಕಾಕ್‌, ಕೆ ಎಲ್ ರಾಹುಲ್‌(ನಾಯಕ), ಮಾರ್ಕಸ್‌ ಸ್ಟೋಯ್ನಿಸ್‌, ನಿಕೋಲಸ್ ಪೂರನ್‌, ದೀಪಕ್ ಹೂಡಾ, ಆಯುಷ್ ಬದೋನಿ, ಕೃನಾಲ್‌ ಪಾಂಡ್ಯ, ಕೃಷ್ಣಪ್ಪ ಗೌತಮ್‌, ಯಶ್‌ ಠಾಕೂರ್, ರವಿ ಬಿಷ್ಣೋಯಿ, ನವೀನ್‌ ಉಲ್ ಹಕ್.

ಪಂದ್ಯ: ಸಂಜೆ 7.30ಕ್ಕೆ
ನೇರ ಪ್ರಸಾರ: ಜಿಯೋ ಸಿನಿಮಾ, ಸ್ಟಾರ್ ಸ್ಪೋರ್ಟ್ಸ್
 

click me!