ಮಲೆಯಾಳಂನಲ್ಲೇ ಓಣಂ ಹಬ್ಬಕ್ಕೆ ಶುಭಕೋರಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು..!

Suvarna News   | Asianet News
Published : Aug 21, 2021, 05:29 PM IST
ಮಲೆಯಾಳಂನಲ್ಲೇ ಓಣಂ ಹಬ್ಬಕ್ಕೆ ಶುಭಕೋರಿದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು..!

ಸಾರಾಂಶ

* ಅತ್ಯಂತ ಸಡಗರದಿಂದ ಓಣಂ ಹಬ್ಬ ಆಚರಣೆ * ಓಣಂ ಹಬ್ಬಕ್ಕೆ ಶುಭಕೋರಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು * ಹಲವು ಕ್ರಿಕೆಟಿಗರಿಂದ ಓಣಂ ಹಬ್ಬಕ್ಕೆ ಶುಭ ಹಾರೈಕೆ

ಬೆಂಗಳೂರು(ಆ.21): ಕೇರಳದ ಮಲೆಯಾಳಿಗಳ ಅತ್ಯಂತ ವಿಶೇಷವಾದ ಹಬ್ಬವೆಂದರೆ ಅದು ಓಣಂ. 10 ದಿನಗಳ ಕಾಲ ಮಲೆಯಾಳಿ ಸಮುದಾಯದವರು ಅತ್ಯಂತ ಸಂತೋಷ ಹಾಗೂ ಸಡಗರದಿಂದ ಓಣಂ ಹಬ್ಬವನ್ನು ಆಚರಿಸುತ್ತಾರೆ. ಒಳ್ಳೆಯ ಫಸಲು ಹಾಗೂ ಇಳುವರಿಗಾಗಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ನಮ್ಮಲ್ಲಿ ಸಂಕ್ರಾಂತಿ ಹಬ್ಬದಂತೆ ಕೇರಳದಲ್ಲಿ ಓಣಂ ಹಬ್ಬವನ್ನು ಆಚರಿಸುತ್ತಾರೆ.

ಓಣಂ ಹಬ್ಬಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಸೇರಿದಂತೆ ಹಲವು ಐಪಿಎಲ್‌ ಕ್ರಿಕೆಟ್‌ ಫ್ರಾಂಚೈಸಿಗಳು ಹಾಗೂ ಕ್ರಿಕೆಟಿಗರು ವಿನೂತನವಾಗಿ ಶುಭಕೋರಿದ್ದಾರೆ. ಬೆಂಗಳೂರು ಮೂಲದ ಫ್ರಾಂಚೈಸಿಯಾದ ಆರ್‌ಸಿಬಿಯ ಆಟಗಾರರಾದ ದೇವದತ್ ಪಡಿಕ್ಕಲ್‌, ಮೊಹಮ್ಮದ್ ಅಜರುದ್ದೀನ್ ಸೇರಿದಂತೆ ಕೆಲವು ಕ್ರಿಕೆಟಿಗರು ಮಲೆಯಾಳಿಯಲ್ಲಿಯೇ ಅಭಿಮಾನಿಗಳಿಗೆ ಓಣಂ ಹಬ್ಬದ ಶುಭ ಕೋರಿದ್ದಾರೆ.

ಇನ್ನು ಚೊಚ್ಚಲ ಆವೃತ್ತಿಯ ಐಪಿಎಲ್ ಚಾಂಪಿಯನ್‌ ರಾಜಸ್ಥಾನ ರಾಯಲ್ಸ್‌, ಮೂರು ಬಾರಿಯ ಐಪಿಎಲ್ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ ಫ್ರಾಂಚೈಸಿ ಕೂಡಾ ಟ್ವೀಟ್‌ ಮೂಲಕ ಶುಭ ಕೋರಿದೆ.

ಕನ್ನಡಿಗ ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ, ಸಂಜು ಸ್ಯಾಮ್ಸನ್‌ ಸೇರಿದಂತೆ ಹಲವು ಕ್ರಿಕೆಟಿಗರು ಓಣಂ ಹಬ್ಬಕ್ಕೆ ಶುಭ ಕೋರಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!