ಐಪಿಎಲ್‌ಗೆ ಆಸ್ಪ್ರೇಲಿಯಾದ ನಾಲ್ವರು ವೇಗಿಗಳು ಗೈರು?

By Suvarna NewsFirst Published Aug 21, 2021, 1:44 PM IST
Highlights

* 14ನೇ ಆವೃತ್ತಿಯ ಐಪಿಎಲ್ ಭಾಗ-2 ಆರಂಭಕ್ಕೆ ದಿನಗಣನೆ ಆರಂಭ

* ಸೆಪ್ಟೆಂಬರ್ 19ರಿಂದ ಇನ್ನುಳಿದ ಐಪಿಎಲ್ ಪಂದ್ಯಗಳು ಆರಂಭ

* ಯುಎಇ ಚರಣದ ಐಪಿಎಲ್‌ಗೆ ಆಸ್ಟ್ರೇಲಿಯಾದ ಪ್ರಮುಖ ವೇಗಿಗಳು ಗೈರು ಸಾಧ್ಯತೆ

ನವದೆಹಲಿ(ಆ.21): ಐಪಿಎಲ್‌ 14ನೇ ಆವೃತ್ತಿಯ ಭಾಗ-2ಕ್ಕೆ ಆಸ್ಪ್ರೇಲಿಯಾದ ನಾಲ್ವರು ವೇಗಿಗಳು ಗೈರಾಗುವ ಸಾಧ್ಯತೆ ಇದೆ. ಕೆಕೆಆರ್‌ನ ಪ್ಯಾಟ್‌ ಕಮಿನ್ಸ್‌, ಆರ್‌ಸಿಬಿಯ ಕೇನ್‌ ರಿಚರ್ಡ್‌ಸನ್‌, ಪಂಜಾಬ್‌ ಕಿಂಗ್ಸ್‌ನ ಜಾಯ್‌ ರಿಚರ್ಡ್‌ಸನ್‌ ಹಾಗೂ ರೀಲೆ ಮೆರ್ಡಿತ್‌ ಯುಎಇಗೆ ತೆರಳುವುದು ಅನುಮಾನ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಈ ಮಧ್ಯೆ, ಆಸ್ಪ್ರೇಲಿಯಾದ ಯುವ ಮಧ್ಯಮ ವೇಗಿ ನೇಥಮ್‌ ಎಲಿಸ್‌ ಪಂಜಾಬ್‌ ಕಿಂಗ್ಸ್‌ ತಂಡದ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಎಲಿಸ್‌ ಈ ಹಿಂದೆ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದರು. ಇತ್ತೀಚೆಗಷ್ಟೇ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಚೊಚ್ಚಲ ಪಂದ್ಯದಲ್ಲೇ ಹ್ಯಾಟ್ರಿಕ್‌ ವಿಕೆಟ್‌ ಪಡೆದು ದಾಖಲೆ ಬರೆದಿದ್ದರು.

ಆಸ್ಟ್ರೇಲಿಯಾದ ಈ ಇಬ್ಬರು ಆರ್‌ಸಿಬಿ ಕ್ರಿಕೆಟಿಗರು ಐಪಿಎಲ್ ಭಾಗ-2 ಟೂರ್ನಿಯಲ್ಲಿ ಪಾಲ್ಗೊಳ್ಳುವುದು ಅನುಮಾನ..!

ಭಾರತದಲ್ಲಿ ಆಯೋಜನೆಗೊಂಡಿದ್ದ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಮೇಲೆ ಕೋವಿಡ್ ತನ್ನ ವಕ್ರದೃಷ್ಟಿಯನ್ನು ಬೀರಿತ್ತು. ಬಯೋಬಬಲ್‌ನೊಳಗಿದ್ದ ಆಟಗಾರರಿಗೆ ಹಾಗೂ ಸಿಬ್ಬಂದಿಗಳಿಗೆ ಕೋವಿಡ್ ದೃಢಪಟ್ಟ ಬೆನ್ನಲ್ಲೇ ಮೇ 04ರಂದು ಬಿಸಿಸಿಐ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿತ್ತು. ಇದೀಗ ಐಪಿಎಲ್‌ ಭಾಗ 2 ಟೂರ್ನಿಯು ಯುಎಇನಲ್ಲಿ ಆಯೋಜನೆಗೊಂಡಿದ್ದು, ಸೆಪ್ಟೆಂಬರ್ 19ರಿಂದ ಮಿಲಿಯನ್‌ ಡಾಲರ್ ಕ್ರಿಕೆಟ್ ಟೂರ್ನಿಯು ಆರಂಭವಾಗಲಿದೆ.
 

click me!