HBD Devdutt Padikkal: ಕನ್ನಡಿಗ ಪಡಿಕ್ಕಲ್ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳಿವು..!

By Naveen KodaseFirst Published Jul 7, 2022, 4:09 PM IST
Highlights

* 22ನೇ ವಸಂತಕ್ಕೆ ಕಾಲಿರಿಸಿದ ದೇವದತ್ ಪಡಿಕ್ಕಲ್
* ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಟೀಂ ಇಂಡಿಯಾದ ಭವಿಷ್ಯದ ಆಶಾಕಿರಣ
* ಈಗಾಗಲೇ ಭಾರತ ತಂಡದ ಪರ ಪಾದಾರ್ಪಣೆ ಮಾಡಿರುವ ಪಡಿಕ್ಕಲ್

ಬೆಂಗಳೂರು(ಜು.07): ಕರ್ನಾಟಕದ ಪ್ರತಿಭಾನ್ವಿತ ಎಡಗೈ ಬ್ಯಾಟರ್‌ ದೇವದತ್ ಪಡಿಕ್ಕಲ್‌ (Devdutt Padikkal), ಗುರುವಾರ(ಜು.07)ವಾದ ಇಂದು ತಮ್ಮ 22ನೇ ವಸಂತಕ್ಕೆ ಕಾಲಿರಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಕರ್ನಾಟಕ ತಂಡದ ಪರ ಹಾಗೂ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್‌ ಎದುರು ಅಬ್ಬರದ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದರು. ದೇವದತ್ ಪಡಿಕ್ಕಲ್ ಹುಟ್ಟುಹಬ್ಬದ ಸಂದರ್ಭದಲ್ಲಿ ಎಡಗೈ ಬ್ಯಾಟರ್‌ ಕುರಿತಾದ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಯನ್ನು ನಿಮ್ಮ ಮುಂದಿಡುತ್ತಿದ್ದೇವೆ ನೋಡಿ.

ದೇವದತ್ ಪಡಿಕ್ಕಲ್‌ ಮೂಲತಃ ಎಲ್ಲಿಯವರು..?

Latest Videos

ದೇವದತ್ ಪಡಿಕ್ಕಲ್ ಜುಲೈ 07, 2000ನೇ ಇಸವಿಯಲ್ಲಿ ಕೇರಳದ ಎಡಪ್ಪಾಲ್ ಎಂಬಲ್ಲಿ ಜನಿಸಿದರು. ಪಡಿಕ್ಕಲ್ ಚಿಕ್ಕವರಿದ್ದಾಗಲೇ ಅವರ ಕುಟುಂಬ ಹೈದರಾಬಾದ್‌ಗೆ ವಲಸೆ ಹೋಯಿತು. 2011ರಲ್ಲಿ ಪಡಿಕ್ಕಲ್ ಕುಟುಂಬದವರು ಬೆಂಗಳೂರಿಗೆ ಬಂದು ನೆಲೆ ನಿಂತಿದ್ದಾರೆ

ದೇವದತ್ ಪಡಿಕ್ಕಲ್ ಏನು ಓದುತ್ತಿದ್ದಾರೆ?

ಕ್ರಿಕೆಟ್‌ನಲ್ಲಷ್ಟೇ ಅಲ್ಲದೇ ಓದಿನಲ್ಲೂ ದೇವದತ್ ಪಡಿಕ್ಕಲ್ ಪ್ರತಿಭಾವಂತ. 10ನೇ ತರಗತಿಯಲ್ಲಿ ಪಡಿಕ್ಕಲ್ 96% ಪಡೆದಿದ್ದರು. ಸದ್ಯ ಪಡಿಕ್ಕಲ್ ಡಿಗ್ರಿ ನಾಲ್ಕನೇ ಸೆಮಿಸ್ಟರ್‌ನಲ್ಲಿ ಬ್ಯುಸಿನೆಸ್ ಮ್ಯಾನೇಜ್‌ಮೆಂಟ್ ಓದುತ್ತಿದ್ದಾರೆ.

ದೇವದತ್ ಪಡಿಕ್ಕಲ್‌ ಮಲೆಯಾಳಿಯೇ..?

ಹೌದು, ದೇವದತ್ ಪಡಿಕ್ಕಲ್ ಮಾತೃ ಭಾಷೆ ಮಲೆಯಾಳಿ. ಆದರೆ ಆಗಾಗ ಕನ್ನಡವನ್ನು ಮಾತನಾಡುವ ಮೂಲಕ ಪಡಿಕ್ಕಲ್‌ ಹಲವಾರು ಬಾರಿ ಕನ್ನಡಾಭಿಮಾನವನ್ನು ಮೆರೆದಿದ್ದಾರೆ.

ಐಪಿಎಲ್‌ನಲ್ಲಿ ದೇವದತ್ ಪಡಿಕ್ಕಲ್ ಹೆಸರಿನಲ್ಲಿರುವ ಅಪರೂಪದ ದಾಖಲೆ ಯಾವುದು?

ಕನ್ನಡಿಗ ದೇವದತ್ ಪಡಿಕ್ಕಲ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ ಮೊದಲ 4 ಪಂದ್ಯಗಳಲ್ಲಿ 3 ಅರ್ಧಶತಕ ಬಾರಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

MS Dhoni turns 41: ಕ್ಯಾಪ್ಟನ್ ಕೂಲ್ ಧೋನಿ ಕುರಿತಾದ 5 ಇಂಟ್ರೆಸ್ಟಿಂಗ್ ಸಂಗತಿಗಳು..!

ಆರ್‌ಸಿಬಿ ಪರ ಚೊಚ್ಚಲ ಐಪಿಎಲ್‌ನಲ್ಲಿ ದೇವದತ್ ಪಡಿಕ್ಕಲ್ ಬಾರಿಸಿದ ರನ್‌ಗಳೆಷ್ಟು?

2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಪಾದಾರ್ಪಣೆ ಮಾಡಿದ್ದ ಪಡಿಕ್ಕಲ್‌ 15 ಪಂದ್ಯಗಳಿಂದ 473 ರನ್ ಬಾರಿಸಿದ್ದರು. ಚೊಚ್ಚಲ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ತೋರಿದ್ದರಿಂದ 2020ನೇ ಸಾಲಿನ ಟೂರ್ನಿಯಲ್ಲಿ ಉದಯೋನ್ಮುಖ ಆಟಗಾರನಾಗಿ ಹೊರಹೊಮ್ಮಿದ್ದರು.

ದೇವದತ್ ಪಡಿಕ್ಕಲ್ ಐಪಿಎಲ್‌ನಲ್ಲಿ ಯಾವ ತಂಡದ ವಿರುದ್ದ ಶತಕ ಬಾರಿಸಿದ್ದರು?

2020ರ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡದ ದೇವದತ್ ಪಡಿಕ್ಕಲ್ ರಾಜಸ್ಥಾನ ರಾಯಲ್ಸ್ ಎದುರು ಅಜೇಯ 101 ರನ್ ಬಾರಿಸಿದ್ದರು. ಆ ಪಂದ್ಯವನ್ನು ಆರ್‌ಸಿಬಿ 10 ವಿಕೆಟ್‌ಗಳಿಂದ ಜಯಿಸಿತ್ತು. 

ದೇವದತ್ ಪಡಿಕ್ಕಲ್ ಇದುವರೆಗೂ ಯಾವೆಲ್ಲಾ ತಂಡಗಳನ್ನು ಪ್ರತಿನಿಧಿಸಿದ್ದಾರೆ?

2014ರಿಂದೀಚೆಗೆ ದೇವದತ್ ಪಡಿಕ್ಕಲ್, ಕರ್ನಾಟಕ ಅಂಡರ್ 16, ಕರ್ನಾಟಕ ಅಂಡರ್ 19, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್‌, ಕರ್ನಾಟಕ ಸೀನಿಯರ್ಸ್ ತಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು, ಭಾರತ ಕ್ರಿಕೆಟ್ ತಂಡ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.  

ದೇವದತ್ ಪಡಿಕ್ಕಲ್ ಅವರ ಒಟ್ಟು ಆದಾಯದ ಮೌಲ್ಯವೆಷ್ಟು..?

ಕಳೆದ ಐಪಿಎಲ್ ಹರಾಜಿನಲ್ಲಿ ಪಡಿಕ್ಕಲ್ ಅವರನ್ನು ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು 7.75 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ದೇವದತ್ ಪಡಿಕ್ಕಲ್ ಅವರ ನೆಟ್ ವರ್ಥ್ ಬರೋಬ್ಬರಿ 9.56 ಕೋಟಿ ರುಪಾಯಿ. 

ದೇವದತ್ ಪಡಿಕ್ಕಲ್ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದು ಯಾವಾಗ?

2021ರ ಜೂನ್‌ನಲ್ಲಿ ಭಾರತ ತಂಡವು ಶ್ರೀಲಂಕಾ ಪ್ರವಾಸ ಕೈಗೊಂಡಾಗ ದೇವದತ್ ಪಡಿಕ್ಕಲ್ ಅವರನ್ನು ಏಕದಿನ ಹಾಗೂ ಟಿ20 ತಂಡಗಳಿಗೆ ಆಯ್ಕೆ ಮಾಡಲಾಗಿತ್ತು. ಪಡಿಕ್ಕಲ್ ಜುಲೈ 28, 2021ರಲ್ಲಿ ಶ್ರೀಲಂಕಾ ಎದುರು ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

click me!