ಪುಲ್‌ಶಾಟ್‌ ಸಮೀಕ್ಷೆ: ರೋಹಿತ್ ಶರ್ಮಾ ಅವರನ್ನೇ ಕೈಬಿಟ್ಟ ಐಸಿಸಿ

By Suvarna NewsFirst Published Mar 23, 2020, 1:42 PM IST
Highlights

ಆಧುನಿಕ ಕ್ರಿಕೆಟ್‌ನಲ್ಲಿ ಫುಲ್ ಶಾಟ್ ಮಾಡುವ ಆಟಗಾರರ ಪೈಕಿ ಪ್ರಮುಖ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಐಸಿಸಿ ಕಾಲೆಳೆದಿದ್ದಾರೆ. ಅಷ್ಟಕ್ಕೂ ರೋಹಿತ್ ಏನಂದ್ರು ನೀವೇ ನೋಡಿ... 

ನವದೆಹಲಿ(ಮಾ.23): ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಭಾನುವಾರ ಅತ್ಯಂತ ಆಕರ್ಷಕ ಪುಲ್‌ ಶಾಟ್‌ ಬಾರಿಸುವ ಬ್ಯಾಟ್ಸ್‌ಮನ್‌ ಯಾರು ಎನ್ನುವ ಸಮೀಕ್ಷೆಯನ್ನು ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ನಡೆಸಿತು. 

Which batsman, past or present, has the best pull shot, in your opinion? 👀 pic.twitter.com/TAXf8rr3el

— ICC (@ICC)

ವಿಂಡೀಸ್‌ ದಿಗ್ಗಜ ವಿವ್‌ ರಿಚರ್ಡ್ಸ್, ಆಸ್ಪ್ರೇಲಿಯಾದ ರಿಕಿ ಪಾಂಟಿಂಗ್‌, ದಕ್ಷಿಣ ಆಫ್ರಿಕಾದ ಹರ್ಷಲ್‌ ಗಿಬ್ಸ್‌ ಹಾಗೂ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಪೈಕಿ ಒಬ್ಬರನ್ನು ಆಯ್ಕೆ ಮಾಡುವಂತೆ ಅಭಿಮಾನಿಗಳಿಗೆ ಸೂಚಿಸಲಾಗಿತ್ತು. 

ಟಿ20 ವಿಶ್ವಕಪ್ ಆಡದೆಯೇ ನಿವೃತ್ತಿಯಾಗ್ತಾರಾ ಧೋನಿ..?

ಇದಕ್ಕೆ ಪ್ರತಿಕ್ರಿಯಿಸಿರುವ ರೋಹಿತ್‌ ಶರ್ಮಾ, ‘ಒಬ್ಬರು ಹೆಸರನ್ನು ಕೈಬಿಡಲಾಗಿದೆ’ ಎಂದಿದ್ದಾರೆ. ರೋಹಿತ್‌ ಪ್ರತಿಕ್ರಿಯೆಗೆ ಭಾರೀ ಬೆಂಬಲ ಸಿಕ್ಕಿದ್ದು, ಅವರನ್ನು ಸಮೀಕ್ಷೆಗೆ ಪರಿಗಣಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

Someone’s missing here ?? Not easy to work from home I guess https://t.co/sbonEva7AM

— Rohit Sharma (@ImRo45)

ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಐಸಿಸಿ ಸಮೀಕ್ಷೆಗೆ ರಿಕಿ ಪಾಂಟಿಂಗ್ ಹಾಗೂ ರೋಹಿತ್ ಶರ್ಮಾ ಅವರನ್ನು ಆಯ್ಕೆ ಮಾಡಿದ್ದಾರೆ. ಇನ್ನು ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್‌ಸನ್ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಆಂಡ್ರ್ಯೂ ಹಡ್ಸನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. 

https://t.co/lJ9YakEAFl

— Harbhajan Turbanator (@harbhajan_singh)

Andrew Hudson

— Kevin Pietersen🦏 (@KP24)

 

 

click me!