ICC ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸೂಕ್ತ ಎಂದ ಕುಮಾರ ಸಂಗಕ್ಕಾರ

By Suvarna NewsFirst Published Jul 26, 2020, 6:08 PM IST
Highlights

ಕ್ರಿಕೆಟಿಗನಾಗಿ, ಕ್ರಿಕೆಟ್‌ನಿಂದ ವಿದಾಯ ಹೇಳಿದ ಬಳಿಕವೂ ಸೌರವ್ ಗಂಗೂಲಿ ಅಭಿಮಾನಿಗಳ ಬಳಗವೇನು ಕಡಿಮೆಯಾಗಿಲ್ಲ. ಅದರಲ್ಲೂ ವಿದೇಶಿ ಕ್ರಿಕೆಟಿಗರಿಗೂ ಗಂಗೂಲಿ ನೆಚ್ಚಿನ ಕ್ರಿಕೆಟಿಗ. ಇದೀಗ ಬಿಸಿಸಿಐ ಅಧ್ಯಕ್ಷನಾಗಿರುವ ಸೌರವ್ ಗಂಗೂಲಿಗೆ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅಗತ್ಯವಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಶ್ರೀಲಂಕಾ ಕ್ರಿಕೆಟಿಗ ಕುಮಾರ ಸಂಗಕ್ಕಾರ ಧನಿಗೂಡಿಸಿದ್ದಾರೆ.

ಕೊಲೊಂಬೊ(ಜು.26): ಸೌರವ್ ಗಂಗೂಲಿ ಅಭಿಮಾನಿಗಳಿಗೆ, ತಂಡದ ಸಹ ಆಟಾಗರರಿಗೆ ಕೇವಲ ಕ್ರಿಕೆಟಿಗ ಮಾತ್ರವಲ್ಲ, ಅತ್ಯುತ್ತಮ ನಾಯಕ. ಕ್ರಿಕೆಟ್ ಬಳಿಕ ಬಿಸಿಸಿಐ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಗಂಗೂಲಿ ಅತ್ಯುತ್ತಮ ಆಡಳಿತ  ನೀಡುತ್ತಿದೆ. ನಾಯಕತ್ವದ ಗುಣಗಳಿರುವ ಗಂಗೂಲಿಗೆ ಇದೀಗ ಐಸಿಸಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುವ ಅಗತ್ಯವಿದೆ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಶ್ರೀಲಂಕಾ ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಕೂಡ ದಾದಾ, ಐಸಿಸಿ ಅಧ್ಯಕ್ಷರಾಗಲು ಸೂಕ್ತ ಎಂದಿದ್ದಾರೆ. 

3 ತಿಂಗಳಲ್ಲಿ ಟೈಂ ಸಿಕ್ಕರೆ ಸಾಕು ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡ್ತೇನೆ: ದಾದಾ.

ದಾದಾ ಅತೀ ದೊಡ್ಡ ಅಭಿಮಾನಿಯಾಗಿರುವ ನಾನು ಅವರನ್ನು ಐಸಿಸಿ ಅಧ್ಯಕ್ಷರಾಗಿ ನೋಡಬಯಸುತ್ತೇನೆ. ಟೀಂ ಇಂಡಿಯಾದ ನಾಯಕನಾಗಿ ಮಹತ್ತರ ಬದಲಾವಣೆ ತಂಡ ಸೌರವ್ ಗಂಗೂಲಿ, ಇದೀಗ ಬಿಸಿಸಿಐ ಅಧ್ಯಕ್ಷರಾಗಿ ಅಷ್ಟೇ ಉತ್ತಮ ಆಡಳಿತ ನೀಡುತ್ತಿದ್ದಾರೆ. ಗಂಗೂಲಿ ಐಸಿಸಿ ಅಧ್ಯಕ್ಷರಾದರೆ ಮಹತ್ತರ ಬದಲಾವಣೆ ಸಾಧ್ಯ ಎಂದು ಸಂಗಕ್ಕಾರ ಹೇಳಿದ್ದಾರೆ.

ಸೌರವ್ ಗಂಗೂಲಿ ಕೆಲಸ ಕಾರ್ಯಗಳನ್ನು ಹತ್ತಿರದಿಂದ ನೋಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬದಲಾವಣೆ ಇದ್ದರೆ ಅದು ಗಂಗೂಲಿಯಿಂದ ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಐಸಿಸಿಗೆ ಸೌರವ್ ಗಂಗೂಲಿಯೇ ಸೂಕ್ತ ಎಂದು ಸಂಗಕ್ಕಾರ ಹೇಳಿದ್ದಾರೆ.

click me!