* ಕ್ರಿಕೆಟ್ ಜಗತ್ತಿಗೆ ಸ್ಟ್ರಾಂಗ್ ಮೆಸೇಜ್ ನೀಡಿದ ಇಬ್ಬರು ಕ್ರಿಕೆಟ್ ದಿಗ್ಗಜರು
* ಐಪಿಎಲ್‌ನಲ್ಲಿ ಮುಂದುವರೆಯುವುದಾಗಿ ತಿಳಿಸಿದ ಕ್ಯಾಪ್ಟನ್ ಕೂಲ್
* ಇಷ್ಟಕ್ಕೆ ಆಟ ಮುಗಿದಿಲ್ಲ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದ ವಿರಾಟ್ ಕೊಹ್ಲಿ
ಬೆಂಗಳೂರು(ಮೇ.21): ಎಂ.ಎಸ್ ಧೋನಿ ಹಾಗೂ ವಿರಾಟ್ ಕೊಹ್ಲಿ (MS Dhoni and Virat Kohli) ಓರ್ವ ಕ್ಯಾಪ್ಟನ್ ಅಫ್ ಕ್ಯಾಪ್ಟನ್ ಆದ್ರೆ ಮತ್ತೋರ್ವ ಕಿಂಗ್ ಆಫ್ ಸೆಂಚುರೀಸ್. ಅಂತರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಮಹಿ ಐಪಿಎಲ್ನಷ್ಟೇ ಕಾಣಿಸಿಕೊಳ್ತಿದ್ದಾರೆ. ಇನ್ನು ಕಿಂಗ್ ಕೊಹ್ಲಿ ರನ್ ಅಬ್ಬರ ಕಮ್ಮಿಯಾಗಿದ್ರು ಮಾಡ್ರನ್ ಕ್ರಿಕೆಟ್ ದೊರೆ ಪಟ್ಟ ಉಳಿಸಿಕೊಂಡಿದ್ದಾರೆ. ಈ ಇಬ್ಬರೂ ಲೆಜೆಂಡ್ಸ್ ಏನೇ ಮಾಡಿದ್ರು ಸದಾ ಸುದ್ದಿಯಲ್ಲಿರ್ತಾರೆ. ಸದ್ಯ ಕೊಹ್ಲಿ ಹಾಗೂ ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಗೇಮ್ ಇಸ್ ನಾಟ್ ಓವರ್, ಫಿಕ್ಚರ್ ಅಭಿ ಬಾಕಿ ಹೈ ಎಂದಿದ್ದಾರೆ.
ಕಿಂಗ್ ಕೊಹ್ಲಿ ಈಸ್ ಬ್ಯಾಕ್ ವಿತ್ ಬ್ಯಾಂಗ್:
ಇದೇ ನೋಡಿ ಕೊಹ್ಲಿ ಅಭಿಮಾನಿಗಳಿಗೆ ಸಿಕ್ಕ ಸಿಹಿ ಸುದ್ದಿ. ವಿರಾಟ್ ಕೊಹ್ಲಿ ಟೀಂ ಇಂಡಿಯಾ ಸೇರಿದಂತೆ ಪ್ರಸಕ್ತ ಐಪಿಎಲ್‌ನಲ್ಲಿ ವರ್ಸ್ಟ್ ಪರ್ಫಾಮೆನ್ಸ್ ನೀಡಿದ್ರು. ಆರಂಭದಿಂದ ಹಿಡಿದು 13ನೇ ಪಂದ್ಯದವರೆಗೆ ರನ್ ಗಳಿಸಲು ಹೆಣಗಾಡ್ತಿದ್ರು. ಇವರ ಸಂಕಷ್ಟವನ್ನ ಅಭಿಮಾನಿಗಳಿಗೆ ನೋಡಲು ಸಾಧ್ಯವಾಗ್ತಿರ್ಲಿಲ್ಲ. ಇಂತಹ ಬ್ಯಾಡ್ ಪರ್ಫಾಮರ್ ಕೊನೆಗೂ ಲಯಕ್ಕೆ ಮರಳಿದ್ದಾರೆ. ಈ ಸೀಸನ್ನ ಗುಜರಾತ್ ವಿರುದ್ಧ ಕೊಹ್ಲಿ ಅಕ್ಷರಶಃ ಕೆರಳಿ ಕೆಂಡವಾಗಿದ್ರು. 53 ಎಸೆತಗಳಲ್ಲಿ ಸ್ಪೋಟಕ 74 ರನ್ ಚಚ್ಚಿದ್ರು. ಆ ಮೂಲಕ ಒಂಟಿಸಲಗ ಆರ್ಸಿಬಿ ಮ್ಯಾಚ್ ಗೆಲ್ಲಿಸಿ ಕೊಟ್ಟಿದ್ದಲ್ಲದೇ ಬ್ಯಾಕ್ ವಿತ್ ಬ್ಯಾಂಗ್ ಮಾಡಿದ್ರು. ಕೊಹ್ಲಿಯ ಈ ವಿರಾಟರೂಪ ಅವರ ಫ್ಯಾನ್ಸ್ಗೆ ಇನ್ನಿಲ್ಲದ ಖುಷಿ ತರಿಸಿದೆ.
ಆರ್ಸಿಬಿ ಫ್ರಾಂಚೈಸಿ ಪರ 7000 ರನ್: ಇನ್ನು ಗುಜರಾತ್ ವಿರುದ್ಧ ಪಂದ್ಯದಲ್ಲಿ ಕೊಹ್ಲಿ ಹೊಸ ಮೈಲುಗಲ್ಲಿಗೆ ಸಾಕ್ಷಿಯಾದ್ರು. ಐಪಿಎಲ್ ಹಿಸ್ಟರಿಯಲ್ಲಿ 7 ಸಾವಿರ ರನ್ ಕ್ಲಬ್ಗೆ ಸೇರಿದ್ರು. ಇನ್ನು ವಿಶೇಷ ಏನಂದ್ರೆ ವಿರಾಟ್ ಇಷ್ಟು ರನ್ನಅನ್ನ ಆರ್ಸಿಬಿ ಫ್ರಾಂಚೈಸಿ ಪರವೇ ಬಾರಿಸಿದ್ದಾರೆ.
90 ನಿಮಿಷ ನೆಟ್ಸ್‌ನಲ್ಲಿ ಅಭ್ಯಾಸ ಮಾಡಿದ್ದೆ: ಯಶಸ್ಸಿನ ಸೀಕ್ರೇಟ್ ಬಿಚ್ಚಿಟ್ಟ ಕಿಂಗ್ ಕೊಹ್ಲಿ
ಮುಂದಿನ ವರ್ಷವೂ IPL ಆಡ್ತಾರೆ ಮಾಸ್ಟರ್ ಧೋನಿ:
ಮಾಸ್ಟರ್ ಮೈಂಡ್ ಧೋನಿ ಪ್ರಸಕ್ತ ಐಪಿಎಲ್‌ನಲ್ಲಿ ಅದ್ಭುತ ಫಾರ್ಮ್ನಲ್ಲಿದ್ರು ಅವರ ಐಪಿಎಲ್ ಕೆರಿಯರ್ ಬಗ್ಗೆ ಗಾಸಿಪ್ ಎದ್ದಿತ್ತು. ಮುಂದಿನ ಸೀಸನ್ಗೆ ಮಹಿ ನಿವೃತ್ತಿ ಘೋಷಿಸ್ತಾರೆ ಎಂದು ಎಲ್ಲರೂ ಭಾವಿಸಿದ್ರು. ಆದ್ರೆ ಆ ಸುದ್ದಿಯನ್ನ ಧೋನಿ ಸುಳ್ಳಾಗಿಸಿದ್ದು, ಮುಂದಿನ ಆವೃತ್ತಿಯಲ್ಲೂ ಆಡುವುದಾಗಿ ಹೇಳಿದ್ದಾರೆ. ಇವರ ಟಾಕ್ಸ್ ಕೇಳಿ ಅವರ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಇನ್ನು 2023ನೇ ಐಪಿಎಲ್ ಆಡುವುದಾಗಿ ಹೇಳಿರೋ ತಲಾ ಧೋನಿ ಚೆನ್ನೈ ತಂಡವನ್ನ ಮುನ್ನಡೆಸೋದು ಬಹುತೇಕ ಪಕ್ಕಾ. ವಿ ವಿಲ್ ಕಮ್ಬ್ಯಾಕ್ ಸ್ಟ್ರಾಂಗ್ ಅನ್ನೋ ಮೂಲಕ ಆ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿದ್ದಾರೆ.