ಟೀಂ ಮೇಟ್‌ ಭಾಮೈದ ಆದಾಗ: ಗವಾಸ್ಕರ್ ತಂಗಿಯ ಪ್ರೀತಿಸಿ ಮದ್ವೆಯಾಗಿದ್ದ ಕನ್ನಡಿಗ ಕ್ರಿಕೆಟರ್‌

By Anusha Kb  |  First Published Sep 20, 2024, 2:20 PM IST

ಸುನೀಲ್ ಗವಾಸ್ಕರ್‌ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರು. ಆದರೆ ಅವರ ಕಿರಿಯ ಸೋದರಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ  ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ವೊಬ್ಬರು ನಂತರ ಕೆಲ ದಿನಗಳಲ್ಲಿ ಅವರನ್ನು ಪ್ರೀತಿಸಿ ಮದುವೆಯಾದವರು.  ಇವರ ಪ್ರೇಮ ಕತೆ ಆರಂಭವಾಗಿದ್ದು ಹೇಗೆ ಇಲ್ಲಿದೆ ಡಿಟೇಲ್‌ ಸ್ಟೋರಿ..


ಸುನೀಲ್ ಗವಾಸ್ಕರ್‌ ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಲ್ಲಿ ಒಬ್ಬರು. ಆದರೆ ಅವರ ಕಿರಿಯ ಸೋದರಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದ  ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್‌ವೊಬ್ಬರು ನಂತರ ಕೆಲ ದಿನಗಳಲ್ಲಿ ಅವರನ್ನು ಪ್ರೀತಿಸಿ ಮದುವೆಯಾದವರು. ಸುನೀಲ್‌ ಗವಾಸ್ಕರ್‌ ಅವರ ಸೋದರಿಯನ್ನು ಹೀಗೆ ಪ್ರೀತಿಸಿ ಮದುವೆಯಾದ ಕ್ರಿಕೆಟಿಗ ಬೇರೆ ಯಾರು ಅಲ್ಲ ನಮ್ಮ ಕರ್ನಾಟಕದವರೇ ಆದ ಗುಂಡಪ್ಪ ರಂಗನಾಥ್ ವಿಶ್ವನಾಥ್ ಅಲಿಯಾಸ್ ಜಿಆರ್ ವಿಶ್ವನಾಥ್. ಇವರ ಪ್ರೇಮ ಕತೆ ಆರಂಭವಾಗಿದ್ದು ಹೇಗೆ ಇಲ್ಲಿದೆ ಡಿಟೇಲ್‌ ಸ್ಟೋರಿ..

ಸುನೀಲ್ ಗವಾಸ್ಕರ್ ಮನೆಗೆ ಭೇಟಿ ನೀಡಿದ್ದ ಜಿ.ಆರ್. ವಿಶ್ವನಾಥ್ ಮೊದಲ ಭೇಟಿಯಲ್ಲೇ ಅವರ ಸೋದರಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯವರಾದ ಜಿ.ಆರ್‌ ವಿಶ್ವನಾಥ್‌ ಅವರು ಕಲಾತ್ಮಕ ಕ್ರಿಕೆಟ್ ಆಟಕ್ಕೆ ಹೆಸರು ವಾಸಿ. 1971ರಲ್ಲಿ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್‌ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸಾಗುತ್ತಿತ್ತು. ಈ ವೇಳೆ ಸುನೀಲ್ ಗವಾಸ್ಕರ್ ಹಾಗೂ ಜಿ.ಆರ್ ವಿಶ್ವನಾಥ್‌ ಒಂದೇ ಟೀಂನಲ್ಲಿದ್ದರು. ವೆಸ್ಟ್‌ ಇಂಡೀಸ್‌ನಿಂದ ಬಂದವರೆ ಸುನೀಲ್ ಗವಾಸ್ಕರ್ ಅವರು ಜಿ.ಆರ್ ವಿಶ್ವನಾಥ್ ಅವರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿದ್ದರು. 

Latest Videos

undefined

ಈ ಕ್ರಿಕೆಟಿಗನೊಂದಿಗೆ ಲವ್ವಲ್ಲಿ ಬಿದ್ದಿದ್ದ ಮಾಧುರಿ ದೀಕ್ಷಿತ್, ಆದ್ರೆ ಮದುವೆಯಾಗದಿರಲು ನಿರ್ಧರಿಸಿದ್ದೇಕೆ?

ಅಲ್ಲಿಗೆ ಹೋದ ವಿಶ್ವನಾಥ್ ಅವರಿಗೆ ಸುನೀಲ್ ಗವಾಸ್ಕರ್ ತಂಗಿ ಕವಿತಾ ಮೇಲೆ ಮೊದಲ ನೋಟದಲ್ಲೇ ಪ್ರೀತಿಯಾಗಿತ್ತು. ಇತ್ತ ಕವಿತಾ ಗವಾಸ್ಕರ್ ಅವರಿಗೂ ಕ್ರಿಕೆಟಿಗ ವಿಶ್ವನಾಥ್ ಮೇಲೆ ಪ್ರೇಮಾಂಕುರವಾಗಿತ್ತು. ಇದಾಗಿ ಕೆಲ ವರ್ಷಗಳ ನಂತರ ಅವರಿಬ್ಬರು ಮದುವೆ ಆದರು. 

ಭಾಮೈದ ಆದ ವಿಶ್ವನಾಥ್‌ ಅವರನ್ನ ಡೇಂಜರಸ್ ಎಂದ ಗವಾಸ್ಕರ್‌
ಇದಾದ ನಂತರ ಸುನೀಲ್ ಗವಾಸ್ಕರ್ ಅವರು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ವಿಶ್ವನಾಥ್ ಅವರನ್ನು ಅಪಾಯಕಾರಿ ಎಂದು ಕರೆದಿದ್ದರು.  ಒಮ್ಮೆ ನಾನು ಅವರನ್ನು ಮನೆಗೆ ಕರೆದು ತಪ್ಪು ಮಾಡಿದ್ದೆ. ಇದರ ಪ್ರತಿಫಲವೂ ಅದೇ ಆಗಿತ್ತು ಎಂದಿದ್ದರು. 1978ರಲ್ಲಿ ಗವಾಸ್ಕರ್ ಸೋದರಿ ಕವಿತಾ ಕ್ರಿಕೆಟ್‌ನ ಗುಂಡಪ್ಪ ಅಲಿಯಾಸ್ ಜಿಆರ್ ವಿಶ್ವನಾಥ್ ಅವರನ್ನು ಮದುವೆಯಾದರು. ಗುಂಡಪ್ಪ ಅವರಿಗೆ 1977-78ರಲ್ಲಿ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಇಂಟ್ರೆಸ್ಟಿಂಗ್ ಆಗಿದೆ ಶಿವಂ ದುಬೆ ಲವ್ ಸ್ಟೋರಿ..! ಅಂಜುಂ ಖಾನ್ ಕೈ ಹಿಡಿದ ಭಾರತೀಯ ಕ್ರಿಕೆಟಿಗನ ಪ್ರೇಮ್ ಕಹಾನಿ ಇದು

ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಆದ ಗುಂಡಪ್ಪ ವಿಶ್ವನಾಥ್ ಅವರು ಭಾರತ ಪರ 21 ಟೆಸ್ಟ್‌ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಅವರು 6080 ರನ್‌ ಗಳಿಸಿದ್ದಾರೆ. ಇದರಲ್ಲಿ ಒಟ್ಟು 14 ಸೆಂಚುರಿ ಹೊಡೆದರೆ 35 ಅರ್ಧ ಶತಕ ಬಾರಿಸಿದ್ದರು. ಅವರ ಬೆಸ್ಟ್ ಸ್ಕೋರ್ ಬಗ್ಗೆ ಮಾತನಾಡುವುದಾದರೆ ಅದು 222 ರನ್‌, ಹಾಗೆಯೇ ಅವರ ಏಕದಿನ ಕ್ರಿಕೆಟ್ ಸಾಧನೆ ಬಗ್ಗೆ ಮಾತನಾಡುವುದಾದರೆ, ಅವರು 25 ಏಕದಿನ ಮ್ಯಾಚ್‌ಗಳನ್ನು ಆಡಿದ್ದು, ಒಟ್ಟು 439 ರನ್‌ ಗಳಿಸಿದ್ದಾರೆ. ಅದರಲ್ಲಿ ಎರಡು ಹಾಫ್ ಸೆಂಚುರಿ. ಹಾಗೆಯೇ ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಅವರು 17000 ರನ್ ಮಾಡಿದ್ದು, ಅದರಲ್ಲಿ 44 ಸೆಂಚುರಿ ಬಾರಿಸಿದ್ದಾರೆ.

ಗುಂಡಪ್ಪ ವಿಶ್ವನಾಥ್ ಹಾಗೂ ಗವಾಸ್ಕರ್ ಸೋದರಿ ಕವಿತಾ

click me!