ಎಂಥಾ ಬೌಲಿಂಗ್.. T20 ಯಲ್ಲಿ 7 ವಿಕೆಟ್ ಕಿತ್ತು ವಿಶ್ವದಾಖಲೆ.. ವಿಡಿಯೋ!

By Suvarna NewsFirst Published Aug 30, 2021, 12:05 AM IST
Highlights

* ಟಿ20 ಯಲ್ಲಿ ಮಾರಕ ಬೌಲಿಂಗ್ ನಡೆಸಿದ ಆಟಗಾರ್ತಿ 
* 4 ಓವರ್‌ಗಳಲ್ಲಿ ಎರಡು ಮೇಡನ್‌  
* ನೆದರ್‌ ಲ್ಯಾಂಡ್ಸ್ ಆಟಗಾರ್ತಿಯ ವಿಶ್ವದಾಖಲೆ

ಸ್ಪೇನ್(ಆ. 29)  ಈ ಆಟಗಾರ್ತಿ ಅತಿದೊಡ್ಡ ದಾಖಲೆಯೊಂದನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಟಿ20 ಯಲ್ಲಿ ಸದ್ಯಕ್ಕೆ ಮುರಿಯುವುದು ಕಷ್ಟ. ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ನೆದರ್‌ಲ್ಯಾಂಡ್ಸ್‌ ನ ಫ್ರೆಡೆರಿಕ್‌  ದಾಖಲೆ ನಿರ್ಮಿಸಿದ್ದಾರೆ.

ಟಿ20 ಯಲ್ಲಿ ಮಾರಕ ಬೌಲಿಂಗ್ ನಡೆಸಿದ ಆಟಗಾರ್ತಿ 7 ವಿಕೆಟ್ ಪಡೆದಿದ್ದಾರೆ. ನೆದರ್‌ಲ್ಯಾಂಡ್ಸ್‌ ನ ಫ್ರೆಡೆರಿಕ್‌   4 ಓವರ್‌ಗಳಲ್ಲಿ ಎರಡು ಮೇಡನ್‌  ಎಸೆದಿದ್ದಾರೆ. ಈ ನಾಲ್ಕು ಓವರ್ ಗಳಲ್ಲಿ ಫ್ರೆಡೆರಿಕ್‌ ನೀಡಿದ್ದು ಕೇವಲ 3 ರನ್ ! ಕಿತ್ತಿದ್ದು ಏಳು ವಿಕೆಟ್.

ಭಾರತದ ಇನಿಂಗ್ಸ್ ಸೋಲಿಗೆ ಕಾರಣವೇನು?

ಸ್ಪೇನ್ ನಲ್ಲಿ ನಡೆದ ಫ್ರಾನ್ಸ್ ವಿರುದ್ಧದ ಮಹಿಳಾ ಟಿ 20 ವಿಶ್ವಕಪ್ ಯುರೋಪ್ ಅರ್ಹತಾ ಪಂದ್ಯದಲ್ಲಿ ಫ್ರೆಡೆರಿಕ್ ವಿಶ್ವ ದಾಖಲೆ ಸೃಷ್ಟಿಸಿದ್ದಾರೆ. ಆರು ಮಂದಿಯನ್ನು ಬೌಲ್ಡ್‌ ಮಾಡಿದ ಫ್ರೆಡೆರಿಕ್‌ ಮತ್ತೊಬ್ಬರನ್ನು  ಲೆಗ್ ಬಿಫೋರ್ ಬಲೆಗೆ ಕೆಡವಿದ್ದಾರೆ.

ದಾಳಿಗೆ ಸಿಲುಕಿದ ಫ್ರಾನ್ಸ್ 17.5 ಓವರ್ ಗಳಲ್ಲಿ ಕೇವಲ 33 ರನ್ ಗಳಿಗೆ ಆಲೌಟ್ ಆಯಿತು. ನೆದರ್‌ ಲ್ಯಾಂಡ್ಸ್, 3.4 ಓವರ್ ಗಳಲ್ಲಿ ಗುರಿ ಮುಟ್ಟಿತು. ಸೋಶಿಯಲ್ ಮೀಡಿಯಾದಲ್ಲಿ ಆಟಗಾರ್ತಿಯನ್ನು ಕೊಂಡಾಡಲಾಗುತ್ತಿದೆ .

Relive Netherlands bowler Frederique Overdijk's record T20I spell 🔥

Follow the ICC Women’s Europe Qualifier LIVE on https://t.co/CPDKNx77KV and (in the sub-continent) 📺 pic.twitter.com/wfs1bqODnk

— ICC (@ICC)

 

click me!