Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ

Published : Dec 08, 2021, 08:10 PM ISTUpdated : Dec 09, 2021, 11:46 AM IST
Vijay Hazare Trophy: ಪುದುಚೇರಿ ವಿರುದ್ಧ ಬೃಹತ್ ಗೆಲುವು ಸಾಧಿಸಿದ ಕರ್ನಾಟಕ

ಸಾರಾಂಶ

5 ರನ್ ಗಳಿಂದ ಶತಕ ತಪ್ಪಿಸಿಕೊಂಡ ಸಮರ್ಥ್ ರಾಜ್ಯ ತಂಡದ ಪರವಾಗಿ ನಾಲ್ವರ ಅರ್ಧಶತಕ ಕೇವಲ 53 ರನ್ ಗೆ ಪುದುಚೇರಿ ಆಲೌಟ್

ತಿರುವನಂತಪುರ (ಡಿ.08): ನಾಲ್ಕು ಬಾರಿಯ ಚಾಂಪಿಯನ್ ಕರ್ನಾಟಕ ತಂಡ ಭರ್ಜರಿ ಗೆಲುವಿನ ಮೂಲಕ ವಿಜಯ್ ಹಜಾರೆ ಟ್ರೋಫಿ 2021-22 ಅಲ್ಲಿ (Vijay Hazare Trophy) ಶುಭಾರಂಭ ಮಾಡಿದೆ. ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ (95) ಶತಕವಂಚಿತ ಬ್ಯಾಟಿಂಗ್ (Ravikumar Samarth) ಹಾಗೂ ಇತರ ಮೂವರು ಬ್ಯಾಟ್ಸ್ ಮನ್ ಗಳ ಆಕರ್ಷಕ ಅರ್ಧಶತಕದ ಕಾಣಿಕೆಯಿಂದ ಪುದುಚೇರಿ ತಂಡದ ವಿರುದ್ಧ 236 ರನ್ ಗಳ ಬೃಹತ್ ಅಂತರದ ಗೆಲುವು ದಾಖಲಿಸಿದೆ.  ಮಂಗಳಾಪುರಂನ ಕೆಸಿಎ ಕ್ರಿಕೆಟ್ ಗ್ರೌಂಡ್ ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ (Karnataka) ತಂಡ 6 ವಿಕೆಟ್ ಗೆ 289 ರನ್ ಬಾರಿಸಿದರೆ, ಪ್ರತಿಯಾಗಿ ಜೆ.ಸುಚಿತ್ (3ಕ್ಕೆ 4) ಮಾರಕ (J Suchith) ದಾಳಿಗೆ ನಲುಗಿದ ಪುದುಚೇರಿ (Pondicherry) ತಂಡ ಕೇವಲ 53 ರನ್ ಗೆ ಆಲೌಟ್ ಆಗಿ ಸೋಲು ಕಂಡಿತು. ರಾಜ್ಯ ತಂಡದ ಗೆಲುವಿನಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಕೆವಿ ಸಿದ್ಧಾರ್ಥ್ (61ರನ್), ನಾಯಕ ಮನೀಷ್ ಪಾಂಡೆ (64 ರನ್) ಹಾಗೂ ಶರತ್ ಎಸ್ (55) ಅರ್ಧಶತಕ ಬಾರಿಸುವ ಮೂಲಕ ಗಮನಸೆಳೆದರು.

ಸವಾಲಿನ ಮೊತ್ತದ ಚೇಸಿಂಗ್ ಆರಂಭಿಸಿದ ಪುದುಚೇರಿ ತಂಡದ ಪರವಾಗಿ ಕೇವಲ ಮೂವರು ಬ್ಯಾಟ್ಸ್ ಮನ್ ಗಳು ಮಾತ್ರವೇ ಎರಡಂಕಿ ಮೊತ್ತ ದಾಖಲಿಸಿದರು. ನಾಯಕ ರೋಹಿತ್ (11), ಕರ್ನಾಟಕದಿಂದ ವಲಸೆ ಹೋಗಿರುವ ಪವನ್ ದೇಶಪಾಂಡೆ (Pavan Deshpande)(16) ಹಾಗೂ ಪಿಕೆ ದೋಗ್ರಾ (12) ಹೊರತಾಗಿ ಮತ್ತುಳಿದ ಯಾವುದೇ ಬ್ಯಾಟ್ಸ್ ಮನ್ ಕೂಡ 8ಕ್ಕಿಂತ ಅಧಿಕ ರನ್ ಬಾರಿಸಲಿಲ್ಲ. ರಾಜ್ಯ ತಂಡದ ಪರವಾಗಿ ಸುಚಿತ್ ಅಲ್ಲದೇ, ವೈಶಾಕ್ ವಿಜಯ್ ಕುಮಾರ್ (19ಕ್ಕೆ 3) ರಾಯಚೂರಿನ ವೇಗಿ ವಿದ್ಯಾಧರ್ ಪಾಟೀಲ್ (22ಕ್ಕೆ 1) ಹಾಗೂ ಅನುಭವಿ ಸ್ಪಿನ್ನರ್ ಕೆಸಿ ಕಾರ್ಯಪ್ಪ (6ಕ್ಕೆ 1) ವಿಕೆಟ್ ಉರುಳಿಸಿದರು.

Syed Mushtaq Ali Trophy Final: ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಮಿಳುನಾಡಿಗೆ ಟ್ರೋಫಿ ಗೆಲ್ಲಿಸಿದ ಶಾರುಖ್ ಖಾನ್..!
ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ (Syed Mushtaq Ali Trophy) ಫೈನಲ್ ನಲ್ಲಿ ನಿರಾಸೆ ಕಂಡ ಬಳಿಕ ಮೊದಲ ಬಾರಿಗೆ ಮೈದಾನಕ್ಕಿಳಿದ ರಾಜ್ಯ ತಂಡದ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಆಟಗಾರ ರೋಹನ್ ಕದಂ (0) ಅವರನ್ನು ಮೊದಲ ಓವರ್ ನಲ್ಲಿಯೇ ಕಳೆದುಕೊಂಡ ತಂಡಕ್ಕೆ ಕೆವಿ ಸಿದ್ಧಾರ್ಥ್ ( KV Siddharth) ಹಾಗೂ ಆರ್.ಸಮರ್ಥ್ 2ನೇ ವಿಕೆಟ್ ಗೆ 153 ರನ್ ಗಳ ದೊಡ್ಡ ಜೊತೆಯಾಟವಾಡುವ ಮೂಲಕ ಆಧರಿಸಿದರು. 5 ಬೌಂಡರಿಯೊಂದಿಗೆ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಿದ್ಧಾರ್ಥ್, ಫಬೀದ್ ಅಹ್ಮದ್ ಗೆ ಬೌಲ್ಡ್ ಆದರು. ಈ ಮೊತ್ತಕ್ಕೆ ಕೆಲ ರನ್ ಸೇರಿಸುವ ವೇಳೆಗೆ ಶತಕದಿಂದ ಕೇವಲ 5 ರನ್ ಗಳ ದೂರವಿದ್ದ ರವಿಕುಮಾರ್ ಸಮರ್ಥ್ ಔಟಾಗಿ ನಿರಾಸೆ ಅನುಭವಿಸಿದರು.

Vijay Hazare Trophy: ಕರ್ನಾಟಕ ತಂಡ ಪ್ರಕಟ, ಮನೀಶ್ ಪಾಂಡೆಗೆ ನಾಯಕ ಪಟ್ಟ
ಅನುಭವಿ ಆಟಗಾರ ಕರುಣ್ ನಾಯರ್ (6) ಅಲ್ಪ (Karun Nair) ಮೊತ್ತಕ್ಕೆ ಔಟಾದಾಗ ರಾಜ್ಯ ತಂಡಕ್ಕೆ ಸಣ್ಣ ಹಿನ್ನಡೆ ಕಂಡಿತ್ತು. 187 ರನ್ ಗೆ 4 ವಿಕೆಟ್ ಕಳೆದುಕೊಂಡಿದ್ದ ವೇಳೆ ನಾಯಕ ಮನೀಷ್ ಪಾಂಡೆಗೆ (Manish Pandey)ಜೊತೆಯಾದ ಶರತ್. ಎಸ್ (Sharath S) ಬಿರುಸಿನ ಬ್ಯಾಟಿಂಗ್ ಮೂಲಕ ಗಮನಸೆಳೆದರು. ಶರತ್ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರೆ, ನಾಯಕ ಮನೀಷ್ ಪಾಂಡೆ 43 ಎಸೆತಗಳಲ್ಲಿ 50 ರನ್ ಗಳ ಗಡಿ ದಾಟಿದರು. ಈ ಜೋಡಿ 5ನೇ ವಿಕೆಟ್ ಗೆ ಆಡಿದ 95 ರನ್ ಗಳ ಜೊತೆಯಾಟ ರಾಜ್ಯ ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು.

ನಾಳೆ ರಾಜ್ಯ ತಂಡಕ್ಕೆ ತಮಿಳುನಾಡು ಎದುರಾಳಿ
ಕರ್ನಾಟಕ ತಂಡ ತನ್ನ 2ನೇ ಪಂದ್ಯದಲ್ಲಿ ಗುರುವಾರ (ಡಿ.9) ಸಾಂಪ್ರದಾಯಿಕ ಎದುರಾಳಿ ತಮಿಳುನಾಡು (Tamilunadu) ತಂಡವನ್ನು ಎದುರಿಸಲಿದೆ. ಮುಷ್ತಾಕ್ ಅಲಿ ಟಿ20 ಟ್ರೋಫಿಯ ಫೈನಲ್ ನಲ್ಲಿ ಎದುರಾದ ಸೋಲಿಗೆ ರಾಜ್ಯ ತಂಡ ಸೇಡು ತೀರಿಸಿಕೊಳ್ಳುವ ಗುರಿಯಲ್ಲಿದ್ದು, ಗ್ರೀನ್ ಫೀಲ್ಡ್ ಇಂಟ್ ನ್ಯಾಷನಲ್ ಸ್ಟೇಡಿಯಂನಲ್ಲಿ (Greenfield International Stadium) ಎದುರಿಸಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿನ್ನಸ್ವಾಮಿಯಲ್ಲಿ ಮತ್ತೆ ಐಪಿಎಲ್ : ಇಂದು ನಿರ್ಧಾರ
ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ