ದೆಹಲಿ ಆಯ್ಕೆ ಸಮಿತಿ ಸದಸ್ಯತ್ವದ ಮೇಲೆ ಕಣ್ಣಿಟ್ಟ ಕೀರ್ತಿ ಆಜಾದ್..!

By Suvarna NewsFirst Published Dec 15, 2020, 1:11 PM IST
Highlights

ಡೆಲ್ಲಿ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಸದಸ್ಯತ್ವದ ಮೇಲೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್ ಕಣ್ಣಿಟ್ಟಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಡಿ.15): 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ, ದೆಹಲಿ ತಂಡದ ಮಾಜಿ ನಾಯಕ ಕೀರ್ತಿ ಆಜಾದ್ ದೆಹಲಿ ಹಿರಿಯರ ತಂಡದ ಆಯ್ಕೆ ಸಮಿತಿಗೆ ಅರ್ಜಿ ಸಲ್ಲಿಸಿದ್ದಾರೆ. 

ಡೆಲ್ಲಿ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ರೋಹನ್ ಜೇಟ್ಲಿ ಮೂರು ಮಂದಿ ಸದಸ್ಯರ ಆಯ್ಕೆಗೆ ಹಾಗೂ ಕೋಚ್‌ಗಳ ಆಯ್ಕೆಗೆ ಅರ್ಜಿ ಆಹ್ವಾನಿಸಿದ್ದಾರೆ. ನಾನು ಆಯ್ಕೆಗಾರನಾಗಿ ಕಾರ್ಯ ನಿರ್ವಹಿಸಲು ಸಿದ್ಧನಿದ್ದೇನೆ. ಡೆಲ್ಲಿ ಕ್ರಿಕೆಟ್‌ ಮಂಡಳಿಯಲ್ಲಿನ ಎಲ್ಲಾ ವಯೋಮಾನದವರ ಆಯ್ಕೆ ವಿಚಾರದಲ್ಲಿ ಕೆಲವೊಂದು ಗೊಂದಲಗಳಿವೆ. ಈ ಬಗ್ಗೆ ಆಧ್ಯತೆಯ ಮೇರೆಗೆ ಗಮನ ಹರಿಸಬೇಕಿದೆ ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.

ಸಲಹೆಗಾರ ಬಿಷನ್ ಸಿಂಗ್ ಬೇಡಿ, ಆಜಾದ್‌ರಲ್ಲಿ ಮನವಿ ಮಾಡಿದ್ದರು. ಈ ಸಲುವಾಗಿ ಆಜಾದ್ ಅರ್ಜಿ ಸಲ್ಲಿಸಿದ್ದಾರೆ. ಮೂವರು ಸದಸ್ಯರ ಸಲಹಾ ಸಮಿತಿ (ಸಿಎಸಿ) ಮುಖ್ಯಸ್ಥ ಮಾಜಿ ಕ್ರಿಕೆಟಿಗ ಅತುಲ್ ವಾಸನ್‌ಗೆ ಕೀರ್ತಿ ಆಜಾದ್ ಅರ್ಜಿ ಕಳುಹಿಸಿದ್ದಾರೆ.

ಡೇ ಅಂಡ್ ಟೆಸ್ಟ್: ಪಂತ್ ಇಲ್ಲವೇ ಸಾಹ ಯಾರಿಗೆ ಸಿಗುತ್ತೆ ಸ್ಥಾನ?

ಕ್ರಿಕೆಟ್ ಸಲಹಾ ಸಮಿತಿಯ ಮೂವರು ಸದಸ್ಯರಾದ ಅತುಲ್ ವಾಸನ್, ರಾಬಿನ್ ಸಿಂಗ್ ಹಾಗೂ ಪರ್ವಿಂದರ್ ಅವಾನ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಇನ್ನು ಕೀರ್ತಿ ಆಜಾದ್ ಮಾತ್ರವಲ್ಲದೇ ಮಾಜಿ ಕೋಚ್ ಕೆ. ಪಿ. ಬಾಸ್ಕರ್, ಬಂಟೂ ಸಿಂಗ್, ಗುರುಶರಣ್‌ ಸಿಂಗ್, ಅಶು ಧಾನಿ ಹಾಗೂ ಕರುಣ್ ದುಬೆ ಹಿರಿಯರ ತಂಡದ ಆಯ್ಕೆ ಸಮಿತಿಯ ಸದಸ್ಯತ್ವಕ್ಕೆ ಕಟ್ಟಿಟ್ಟ ಇತರರಾಗಿದ್ದಾರೆ.

ಕೋಚ್‌ ಹುದ್ದೆ ಮೇಲೆ ಕಣ್ಣಿಟ್ಟ ಪ್ರಭಾಕರ್: ಇನ್ನು ಟೀಂ ಇಂಡಿಯಾ ಮಾಜಿ ಆಲ್ರೌಂಡರ್ ಮನೋಜ್ ಪ್ರಭಾಕರ್ ಡೆಲ್ಲಿ ತಂಡದ ಕೋಚ್‌ ಹುದ್ದೆಯ ಮೇಲೆ ಕಣ್ಣಿಟ್ಟಿದ್ದು, ಈಗಾಗಲೇ ಅರ್ಜಿ ಗುಜರಾಯಿಸಿದ್ದಾರೆ. ಈ ಹಿಂದೆ ಡೆಲ್ಲಿ ಹಾಗೂ ಉತ್ತರ ಪ್ರದೇಶ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಮನೋಜ್‌ ಪ್ರಭಾಕರ್‌ಗಿದೆ.
 

click me!