
ಢಾಕಾ(ಡಿ.15): ಇಲ್ಲಿ ನಡೆಯುತ್ತಿರುವ ಬಂಗಬಂಧು ಟಿ20 ಕಪ್ ಕ್ರಿಕೆಟ್ ಟೂರ್ನಿಯ ಪಂದ್ಯವೊಂದರಲ್ಲಿ ಬಾಂಗ್ಲಾದೇಶ ಕ್ರಿಕೆಟಿಗ ಮುಷ್ಫಿಕುರ್ ರಹೀಂ ತಾಳ್ಮೆ ಕಳೆದುಕೊಂಡು ಸಹ ಆಟಗಾರನ ಮೇಲೆ ಹಲ್ಲೆಗೆ ಮುಂದಾದ ಘಟನೆ ಸೋಮವಾರ ನಡೆದಿದೆ.
ಪ್ಲೇ ಆಫ್ ಹಂತದ ಎಲಿಮಿನೇಟರ್ ಪಂದ್ಯದಲ್ಲಿ ಮುಷ್ಫಿಕುರ್ ನೇತೃತ್ವದ ಬೆಕ್ಸಿಮೊ ಢಾಕಾ, ಫಾರ್ಚೂನ್ ಬರಿಷಲ್ ತಂಡಗಳ ನಡುವೆ ಪಂದ್ಯ ನಡೆಯುತ್ತಿತ್ತು. ಗೆಲುವಿಗಾಗಿ ಬರಿಷಲ್ 19 ಎಸೆತಗಳಲ್ಲಿ 45 ರನ್‌ಗಳಿಸ ಬೇಕಿತ್ತು. ಈ ವೇಳೆ ಕ್ಯಾಚ್ ಹಿಡಿಯುವಾಗ ಗೊಂದಲ ಉಂಟಾಗಿದೆ. ಮುಷ್ಫಿಕುರ್ ಕ್ಯಾಚ್ ಹಿಡಿಯುವಲ್ಲಿ ಸಫಲರಾದ ಬಳಿಕ ನಸಮ್ ಮೇಲೆ ಹಲ್ಲೆಗೆ ಮುಂದಾದರು.
ವಿರಾಟ್ ಕೊಹ್ಲಿಯನ್ನು ಕೆಣಕಬೇಡಿ ಎಚ್ಚರವೆಂದ ಆ್ಯರೋನ್ ಫಿಂಚ್
ಮೇಲ್ನೋಟಕ್ಕೆ ಶಾರ್ಟ್ ಫೈನ್‌ಲೆಗ್‌ನಲ್ಲಿ ನಿಂತಿದ್ದ ನಸಮ್ ಅವರ ಕ್ಯಾಚ್ ಆಗಿತ್ತು. ಆದರೆ ವಿಕೆಟ್ ಕೀಪರ್ ರಹೀಂ ಮಾರು ದೂರ ಓಡಿ ಕ್ಯಾಚ್ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು. ರಹೀಂ ಹಲ್ಲೆಗೆ ಯತ್ನಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಕ್ಸಿಮೊ ಢಾಕಾ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಬರಿಷಲ್ ತಂಡದ ವಿರುದ್ದ 9 ರನ್‌ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದೆ. ಇದರ ಹೊರತಾಗಿಯೂ ಬೆಕ್ಸಿಮೊ ಢಾಕಾ ನಾಯಕ ರಹೀಂ ವರ್ತನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.