ಭೀಕರ ರಸ್ತೆ ಅಪಘಾತ; ಟೀಂ ಇಂಡಿಯಾ ಮಾಜಿ ನಾಯಕ ಜಸ್ಟ್ ಎಸ್ಕೇಪ್

Suvarna News   | Asianet News
Published : Dec 31, 2020, 04:32 PM IST
ಭೀಕರ ರಸ್ತೆ ಅಪಘಾತ; ಟೀಂ ಇಂಡಿಯಾ ಮಾಜಿ ನಾಯಕ ಜಸ್ಟ್ ಎಸ್ಕೇಪ್

ಸಾರಾಂಶ

ಟೀಂ ಇಂಡಿಯಾ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರಿದ್ದ ಕಾರು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಜೈಪುರ(ಡಿ.31): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್‌ ಪ್ರಯಾಣಿಸುತ್ತಿದ್ದ SUV ಕಾರು ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿದ್ದು, ಅದೃಷ್ಟವಶಾತ್ ಅಜರುದ್ದೀನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜೈಪುರ ಸಮೀಪದ ಸವಾಯಿ ಮಾಧವಪುರ ಜಿಲ್ಲೆಯ ಬಳಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಮೊಹಮ್ಮದ್ ಅಜರುದ್ದೀನ್ ಇದ್ದ ಕಾರು ನುಜ್ಜುಗುಜ್ಜಾಗಿದ್ದು, ಅದೃಷ್ಟವಶಾತ್ ಯಾವುದೇ ದುರ್ಘಟನೆ ಸಂಭವಿಸಿಲ್ಲ. ಅಜರುದ್ದೀನ್ ಜತೆ ಮತ್ತೆ ಮೂವರು ಪ್ರಯಾಣ ನಡೆಸುತ್ತಿದ್ದರು. ಇವರಲ್ಲಿ ಕೆಲವರಿಗೆ ಲಘು ಗಾಯವಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಪ್ರಯಾಣ ಮುಂದುವರೆಸಿದರು ಎನ್ನಲಾಗಿದೆ.

ಹನಿಮೂನ್ ಸ್ಟ್ಪಾಟ್ ರಿವೀಲ್ ಮಾಡದ ಚಾಹಲ್ ಫೋಟೋಸ್ ಶೇರ್ ಮಾಡಿಕೊಂಡಿದ್ದಾರೆ!

ಕ್ರಿಕೆಟ್‌ ವಿದಾಯ ಹೇಳಿರುವ ಮೊಹಮ್ಮದ್ ಅಜರುದ್ದೀನ್ ಇದೀಗ ರಾಜಕೀಯದಲ್ಲಿ ಕಮಾಲ್‌ ಮಾಡುತ್ತಿದ್ದು, ಮೊರಾದಬಾದ್‌ನ ಕಾಂಗ್ರೆಸ್ ಪಕ್ಷದ ಸಂಸದರಾಗಿದ್ದಾರೆ. 57 ವರ್ಷದ ಮೊಹಮ್ಮದ್ ಅಜರುದ್ದೀನ್ 99 ಟೆಸ್ಟ್, 334 ಏಕದಿನ ಪಂದ್ಯಗಳನ್ನಾಡಿದ್ದು ಕ್ರಮವಾಗಿ 6215 ಹಾಗೂ 9378 ರನ್ ಬಾರಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!
ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್