RCB ಮಾಜಿ ಸ್ಟಾರ್‍‌ಗೆ ಸರಿಯಾದ ನೆಲೆಯೇ ಸಿಕ್ಕಿಲ್ಲ, ಈಗ SRH ತಂಡದಿಂದ ಗುಜರಾತ್‌ಗೆ ₹4 ಕೋಟಿಗೆ ಮಾರಾಟ

Published : Nov 14, 2026, 11:10 PM IST
Harshal patel

ಸಾರಾಂಶ

ಐಪಿಎಲ್ 2027ರ ಹರಾಜಿಗೆ ಮುನ್ನ ಸನ್‌ರೈಸರ್ಸ್ ಹೈದರಾಬಾದ್ ಹರ್ಷಲ್ ಪಟೇಲ್ ಅವರನ್ನು ಗುಜರಾತ್ ಟೈಟನ್ಸ್‌ಗೆ ಕಳುಹಿಸುವ ಸಾಧ್ಯತೆ ಇದೆ. 4 ಕೋಟಿ ರೂ.ಗೆ ಈ ನಗದು ಒಪ್ಪಂದ ನಡೆಯಲಿದೆ ಎಂದು ವರದಿಯಾಗಿದೆ.

ಮುಂಬೈ: ಮುಂದಿನ ತಿಂಗಳು ಇಂಡಿಯನ್ ಪ್ರೀಮಿಯರ್ ಲೀಗ್ 2027ರ ಹರಾಜು ನಡೆಯಲಿದೆ. ಅದಕ್ಕೂ ಮುಂಚಿತವಾಗಿ ನವೆಂಬರ್ 17 ರೊಳಗೆ ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳಲಿರುವ ಆಟಗಾರರ ಪಟ್ಟಿಯನ್ನ ಸಲ್ಲಿಸಬೇಕು. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಕೆಲವು ಆಟಗಾರರನ್ನು ವಿನಿಮಯ ಮಾಡಿಕೊಳ್ಳುತ್ತಿವೆ. ಹರ್ಷಲ್ ಪಟೇಲ್ ಮತ್ತೆ ತಂಡವನ್ನು ಬದಲಾಯಿಸೋದು ಗ್ಯಾರಂಟಿ ಎನ್ನಲಾಗುತ್ತಿದೆ. ಕ್ರಿಕ್‌ಇನ್ಫೋ ಪ್ರಕಾರ.. SRH ಫ್ರಾಂಚೈಸಿಯು ಗುಜರಾತ್ ಟೈಟನ್ಸ್‌ಗೆ ಪರ್ಪಲ್ ಪಟೇಲ್ ಖ್ಯಾತಿಯ ಹರ್ಷಲ್ ಪಟೇಲ್‌ರನ್ನು ಕಳುಹಿಸಿಕೊಡಲಿದೆ.

ಸನ್‌ರೈಸರ್ಸ್ ಹೈದರಾಬಾದ್ ಸಂಪೂರ್ಣ ನಗದು ಒಪ್ಪಂದಕ್ಕೆ ಒಪ್ಪಿಕೊಂಡಿದೆ. ಗುಜರಾತ್ ಟೈಟಾನ್ಸ್ ತಂಡವು ಹರ್ಷಲ್ ಪಟೇಲ್ ಅವರನ್ನು ₹4 ಕೋಟಿಗೆ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲಿದೆ. ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಎಸ್‌ಆರ್‌ಎಚ್ ಅವರನ್ನು ₹8 ಕೋಟಿಗೆ ಖರೀದಿಸಿತ್ತು. ಇದರರ್ಥ ಅವರ ಐಪಿಎಲ್ ಬೆಲೆ ಈಗ ಅರ್ಧಕ್ಕೆ ಇಳಿಯಲಿದೆ.

ಹರ್ಷಲ್ ಪಟೇಲ್ 2012ರಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇಲ್ಲಿಯವರೆಗೆ ಅವರು ನಾಲ್ಕು ತಂಡಗಳಿಗೆ ಆಡಿದ್ದಾರೆ. ಈ ಒಪ್ಪಂದ ಅಂತಿಮವಾದರೆ.. ಗುಜರಾತ್ ಟೈಟಾನ್ಸ್ ಅವರಿಗೆ ಐದನೇ ತಂಡ ಆಗಲಿದೆ. ಈ ಹಿಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ), ದೆಹಲಿ ಕ್ಯಾಪಿಟಲ್ಸ್ (ಡಿಸಿ), ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಎಸ್‌ಆರ್‌ಹೆಚ್) ಪರ ಆಡಿದ್ದಾರೆ.

ಹರ್ಷಲ್ ಪಟೇಲ್ ಐಪಿಎಲ್‌ನಲ್ಲಿ ಎರಡು ಬಾರಿ ಪರ್ಪಲ್ ಕ್ಯಾಪ್ ಪ್ರಶಸ್ತಿ ಗೆದ್ದಿದ್ದಾರೆ. ಅವರು 2021ರಲ್ಲಿ ತಮ್ಮ ಮೊದಲ ಪರ್ಪಲ್ ಕ್ಯಾಪ್ ಗೆದ್ದರು. ಆರ್‌ಸಿಬಿ ಪರ ಆಡುವಾಗ 32 ವಿಕೆಟ್‌ಗಳನ್ನು ಕಬಳಿಸಿದ್ದರು. 2024ರಲ್ಲಿ ಪಂಜಾಬ್ ಕಿಂಗ್ಸ್‌ನೊಂದಿಗೆ ಇದ್ದಾಗ ಅವರು ಎರಡನೇ ಬಾರಿಗೆ ಪ್ರಶಸ್ತಿ ಗೆದ್ದರು. ಆ ಆವೃತ್ತಿಯಲ್ಲಿ ಅವರು 24 ವಿಕೆಟ್‌ ಕಬಳಿಸಿದ್ದರು.

ಹೇಗಿದೆ ಹರ್ಷಲ್ ಪಟೇಲ್ ಪ್ರದರ್ಶನ?

ಐಪಿಎಲ್‌ನಲ್ಲಿ ಹರ್ಷಲ್ ಪಟೇಲ್ ಉತ್ತಮ ಅನುಭವ ಹೊಂದಿದ್ದಾರೆ. ಒಟ್ಟು 124 ಮ್ಯಾಚ್‌ಗಳನ್ನ ಆಡಿ, 151 ವಿಕೆಟ್ ಪಡೆದುಕೊಂಡಿದ್ದಾರೆ. ಒಮ್ಮೆ 27 ರನ್‌ ನೀಡಿ ಐದು ವಿಕೆಟ್ ಪಡೆದುಕೊಂಡಿರೋದು ಅವರ ಅತ್ಯುತ್ತಮ ಸ್ಪೆಲ್ ಆಗಿದೆ. ಇನ್ನು ಬೌಲಿಂಗ್ ಎಕನಾಮಿ 8.92 ಇದೆ. ಇನ್ನು 280 ರನ್‌ಗಳನ್ನ ಬಾರಿಸಿದ್ದಾರೆ. 2011 ರಲ್ಲಿ ಮುಂಬೈ ಇಂಡಿಯನ್ಸ್‌ನಲ್ಲಿ ಇದ್ದರು. 2012 ರಿಂದ 17ವರೆಗೆ ಆರ್‍‌ಸಿಬಿ ಮತ್ತು 2021 ರಿಂದ 2023 ವರೆಗೆ ಮತ್ತೆ ಆರ್‌‌ಸಿಬಿ ಸೇರಿಕೊಂಡಿದ್ದರು. 2018 ಮತ್ತು 2020 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್, 2024ರಲ್ಲಿ ಪಂಜಾಬ್ ಕಿಂಗ್ಸ್ ಹಾಗೂ 2025 ರಿಂದ ಹೈದರಾಬಾದ್ ತಂಡದ ಪರ ಆಡುತ್ತಿದ್ದರು. ಒಟ್ಟಾರೆ, ಆರ್‍‌ಸಿಬಿಯ ಮಾಜಿ ಸ್ಟಾರ್‍‌ಗೆ ಸರಿಯಾದ ನೆಲೆ ಇನ್ನೂ ಸಿಕ್ಕಿಲ್ಲ. ಗುಜರಾತ್ ಟೈಟನ್ಸ್ ತಂಡದಲ್ಲಿ ಭರ್ಜರಿ ಪ್ರದರ್ಶ ನೀಡಿ ಮತ್ತೆ ಅವರು ಖ್ಯಾತಿ ಗಳಿಸಲಿ ಎಂದು ಫ್ಯಾನ್ಸ್ ಹಾರೈಸುತ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಮರೆತುಬಿಟ್ಟೆ ಅನ್ಸುತ್ತೆ ಸರ್' ರೋಹಿತ್ ಶರ್ಮಾನ ಕಾಪಿ ಮಾಡಿದ ವೈಭವ್ ಸೂರ್ಯವಂಶಿ
ಪಾಕಿಸ್ತಾನ ಬೌಲರ್‍‌ಗಳಿಗೆ ಅಟ್ಟಾಡಿಸಿ ಹೊಡೆದ ಸೆಹ್ವಾಗ್ ಪುತ್ರ, ಫೈನಲ್ ಮ್ಯಾಚ್‌ನಲ್ಲಿ ಆರ್ಯವೀರ್ ಗಳಿಸಿದ ಸ್ಕೋರ್ ಎಷ್ಟು?