ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಬೊಬ್ಬೆ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ!

Published : Apr 25, 2025, 05:30 PM ISTUpdated : Apr 25, 2025, 05:33 PM IST
ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆಯುತ್ತಿದೆ ಎಂದು ಬೊಬ್ಬೆ ಹಾಕಿದ ಪಾಕ್ ಮಾಜಿ ಕ್ರಿಕೆಟಿಗ!

ಸಾರಾಂಶ

ಇಶಾನ್ ಕಿಶನ್ ಅವರ ವಿವಾದಾತ್ಮಕ ತೀರ್ಪನ್ನು ಉಲ್ಲೇಖಿಸಿ, 18ನೇ ಆವೃತ್ತಿಯ ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಪಾಕಿಸ್ತಾನದ ಮಾಜಿ ವೇಗಿ ಜುನೈದ್ ಖಾನ್ ಆರೋಪಿಸಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧವೂ ಈ ಹಿಂದೆ ಇದೇ ರೀತಿಯ ಆರೋಪ ಕೇಳಿಬಂದಿತ್ತು, ಆದರೆ ಫ್ರಾಂಚೈಸಿ ಇದನ್ನು ನಿರಾಕರಿಸಿದೆ.

ಕರಾಚಿ: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ ಎಂದು ಪಾಕಿಸ್ತಾನ ಮೂಲದ ಮಾಜಿ ವೇಗಿ ಜುನೈದ್ ಖಾನ್ ಗಂಭೀರ ಆರೋಪ ಮಾಡಿದ್ದಾರೆ. ಕಳೆದ ಬುಧವಾರ ನಡೆದ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಆರೆಂಜ್ ಆರ್ಮಿಯ ಬ್ಯಾಟರ್ ಇಶಾನ್ ಕಿಶನ್ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದನ್ನು ಉಲ್ಲೇಖಿಸಿ ಈ ಆರೋಪ ಮಾಡಿದ್ದಾರೆ.

ಅಷ್ಟಕ್ಕೂ ಇಶಾನ್ ಕಿಶನ್ ವಿಕೆಟ್ ಒಪ್ಪಿಸಿದ್ದು ಹೇಗೆ?: ಮುಂಬೈ ಇಂಡಿಯನ್ಸ್ ಎದುರು ಮೊದಲು ಬ್ಯಾಟ್ ಮಾಡಲಿಳಿದ ಸನ್‌ರೈಸರ್ಸ್ ಹೈದರಾಬಾದ್‌ ಆರಂಭಿಕ ಆಘಾತಕ್ಕೆ ಒಳಗಾಯಿತು. ಇನ್ನಿಂಗ್ಸ್‌ನ ಮೂರನೇ ಓವರ್‌ನಲ್ಲಿ ದೀಪಕ್ ಚಹರ್ ಎಸೆದ ಚೆಂಡನ್ನು ಇಶಾನ್ ಕಿಶನ್ ಲೆಗ್‌ಸೈಡ್ ಕಡೆಗೆ ಬಾರಿಸಲು ಹೋದರು. ಆದರೆ ಚೆಂಡು ಇಶಾನ್ ಕಿಶನ್‌ ಬ್ಯಾಟ್‌ಗೆ ತಗುಲದೇ ವಿಕೆಟ್ ಕೀಪರ್ ರಿಯಾನ್ ರಿಕೆಲ್ಟನ್ ಕೈಸೇರಿತು. ಬೌಲರ್‌ಗಳು ಔಟ್‌ಗೆ ಮನವಿ ಮಾಡದಿದ್ದರೂ ಇಶಾನ್ ಕಿಶನ್ ಚೆಂಡು ಬ್ಯಾಟ್‌ಗೆ ತಗುಲಿದೆ ಎಂದು ಭಾವಿಸಿ ಡಗೌಟ್‌ನತ್ತ ನಡೆಯಲಾರಂಭಿಸಿದರು. ಆಗ ಅಂಪೈರ್ ವಿನೋದ್ ಶೇಶನ್ ವೈಡ್ ನೀಡಲು ಮುಂದಾದವರು, ಇಶಾನ್ ವಾಪಾಸ್ಸಾಗುತ್ತಿರುವುದನ್ನು ಗಮನಿಸಿ ಔಟ್ ಎನ್ನುವ ತೀರ್ಪು ನೀಡಿದರು. ಆದರೆ ಇದಾದ ಬಳಿಕ ರಿಪ್ಲೇ ನೋಡಿದಾಗ ಚೆಂಡು ಬ್ಯಾಟ್‌ಗೆ ತಾಗಿಲ್ಲ ಎನ್ನುವುದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. 

ಇದನ್ನೂ ಓದಿ: ರಾಜಸ್ಥಾನ ರಾಯಲ್ಸ್ ಎದುರು 3 ಅಪರೂಪದ ದಾಖಲೆ ಬರೆದ ಕೊಹ್ಲಿ; ಗೇಲ್ ರೆಕಾರ್ಡ್‌ ನುಚ್ಚುನೂರು

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜುನೈದ್ ಖಾನ್, ಇದು ಯಾಕೋ ಅನುಮಾನ ಮೂಡಿಸುವಂತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದಾದ ಬಳಿಕ ಇನ್ನೊಂದು ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಎಂದು ಬಾಯಿ ಬಡಿದುಕೊಂಡಿದ್ದಾರೆ.

ಅಂದಹಾಗೆ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿ ಬಂದಿರುವುದು ಇದೇ ಮೊದಲೇನಲ್ಲ. ಈ ಮೊದಲು ರಾಜಸ್ಥಾನ ರಾಯಲ್ಸ್ ತಂಡದ ವಿರುದ್ದ ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಎಡ್‌ ಹಾಕ್ ಬಿಹಾನಿ ಕೂಡಾ ರಾಯಲ್ಸ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರು. 

ಫಿಕ್ಸಿಂಗ್‌ ಪ್ರಕರಣದಲ್ಲಿ 2016, 2017ರ ಐಪಿಎಲ್ ಆವೃತ್ತಿಯಿಂದಲೇ ನಿಷೇಧಕ್ಕೊಳಗಾಗಿದ್ದ ರಾಜಸ್ಥಾನ ರಾಯಲ್ಸ್‌ ವಿರುದ್ಧ ಮತ್ತೆ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿಬಂದಿದೆ. ರಾಜಸ್ಥಾನ ಕ್ರಿಕೆಟ್‌ ಸಂಸ್ಥೆಯ ಆಡಳಿತ ನೋಡಿಕೊಳ್ಳುತ್ತಿರುವ ಸ್ವತಂತ್ರ ಸಮಿತಿ ಸಂಚಾಲಕ ಜೈದೀಪ್ ಬಿಹಾನಿ ಈ ಆಪಾದನೆ ಹೊರಿಸಿದ್ದಾರೆ.

ಇದನ್ನೂ ಓದಿ: ಪಾಕ್ ಜೊತೆ ಕ್ರಿಕೆಟ್ ಬೇಡವೇ ಬೇಡ: ಐಸಿಸಿಗೆ ಬಿಸಿಸಿಐ ಖಡಕ್ ಪತ್ರ!

ಇತ್ತೀಚೆಗೆ ರಾಜಸ್ಥಾನ ತಂಡ ಲಖನೌ ವಿರುದ್ಧ 2 ರನ್‌ಗಳಿಂದ ಸೋತಿತ್ತು. ಕೊನೆ ಓವರ್‌ಗೆ 9 ರನ್ ಗಳಿಸಲಾಗದೆ ಪರಾಭವಗೊಂಡಿತ್ತು. ಈ ಬಗ್ಗೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಹಾನಿ, ರಾಯಲ್ಸ್‌ನ ಸೋಲಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ತವರಿನಲ್ಲಿ ಕೊನೆ ಓವರಲ್ಲಿ ಇಷ್ಟು ಕಡಿಮೆ ರನ್‌ ಬೇಕಿದ್ದಾಗ ಸೋಲಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ರಾಜಸ್ಥಾನದ 2013ರ ಮ್ಯಾಚ್‌ ಫಿಕ್ಸಿಂಗ್‌ ಪ್ರಕರಣವನ್ನೂ ಉಲ್ಲೇಖಿಸಿದ್ದಾರೆ. ಪಂದ್ಯದಲ್ಲಿ ವಂಚನೆ ನಡೆದಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಫಿಕ್ಸಿಂಗ್‌ ಆರೋಪ ಸುಳ್ಳು: ರಾಯಲ್ಸ್‌

ಬಿಹಾನಿ ಆರೋಪವನ್ನು ರಾಜಸ್ಥಾನ ರಾಯಲ್ಸ್‌ ಫ್ರಾಂಚೈಸಿ ಅಲ್ಲಗಳೆದಿದ್ದು, ಈ ಆರೋಪ ಸುಳ್ಳು, ನಿರಾಧಾರ ಎಂದಿದೆ. ಅಲ್ಲದೆ, ಇದಕ್ಕೆ ಯಾವು ಸಾಕ್ಷ್ಯವಿಲ್ಲ ಎಂದು ಆಕ್ರೋಶಪಡಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟನೆ ನೀಡಿರುವ ಫ್ರಾಂಚೈಸಿ, ‘ಬಿಹಾನಿಯ ಎಲ್ಲಾ ಆರೋಪ ಸುಳ್ಳು. ಇಂತಹ ಆರೋಪಗಳು ತಂಡ, ಫ್ರಾಂಚೈಸಿ, ರಾಜಸ್ಥಾನ ಸ್ಪೋರ್ಟ್ಸ್‌ ಕೌನ್ಸಿಲ್‌ ಹಾಗೂ ಬಿಸಿಸಿಐನ ಖ್ಯಾತಿ ಕುಗ್ಗಿಸುತ್ತದೆ ಮತ್ತು ವಿಶ್ವಾಸ ಕಳೆದುಕೊಳ್ಳುವಂತೆ ಮಾಡುತ್ತದೆ’ ಎಂದಿದೆ. ಅಲ್ಲದೆ ಬಿಹಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಈ ಒಂದು ತಂಡ ಬಿಟ್ಟು ಆರ್‌ಸಿಬಿ, ಚೆನ್ನೈ ಸೇರಿ ಐಪಿಎಲ್‌ ತಂಡಗಳ ಬ್ರ್ಯಾಂಡ್ ಮೌಲ್ಯ ಭಾರೀ ಕುಸಿತ!
ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!