ಬುಮ್ರಾ ಪಾಕ್ ಬೌಲರ್‌ಗಳಂತೆ ಬೌಲಿಂಗ್ ಮಾಡ್ತಾರೆ: ಶೋಯೆಬ್ ಅಖ್ತರ್

Suvarna News   | Asianet News
Published : Jan 02, 2021, 12:26 PM IST
ಬುಮ್ರಾ ಪಾಕ್ ಬೌಲರ್‌ಗಳಂತೆ ಬೌಲಿಂಗ್ ಮಾಡ್ತಾರೆ: ಶೋಯೆಬ್ ಅಖ್ತರ್

ಸಾರಾಂಶ

ಟೀಂ ಇಂಡಿಯಾ ವೇಗಿ ಜಸ್ಪ್ರಿತ್ ಬುಮ್ರಾ ಯಾಕಿಷ್ಟು ಪರಿಣಾಮಕಾರಿಯಾಗಿ ಬೌಲಿಂಗ್ ಮಾಡ್ತಾರೆ ಎನ್ನುವ ಸೀಕ್ರೇಟ್‌ನ್ನು ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ವಿವರಿಸಿದ್ದಾರೆ. ಅಖ್ತರ್ ಏನಂದ್ರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

ರಾವಲ್ಪಿಂಡಿ(ಜ.02): ಭಾರತದ ತಾರಾ ವೇಗದ ಬೌಲರ್‌ ಜಸ್‌ ಪ್ರೀತ್‌ ಬುಮ್ರಾ, ಪಾಕಿಸ್ತಾನಿ ವೇಗಿಗಳಂತೆ ಬೌಲ್‌ ಮಾಡುತ್ತಾರೆ. ಪಾಕಿಸ್ತಾನಿ ಬೌಲರ್‌ಗಳಿಗೆ ಗೊತ್ತಿರುವ ಕೆಲ ಪ್ರಮುಖ ತಾಂತ್ರಿಕ ಅಂಶಗಳು ಬುಮ್ರಾಗೆ ಗೊತ್ತಿದೆ ಎಂದು ಮಾಜಿ ವೇಗದ ಬೌಲರ್‌ ಶೋಯಿಬ್‌ ಅಖ್ತರ್‌ ಹೇಳಿದ್ದಾರೆ. 

‘ನಾವು ಆಡುತ್ತಿದ್ದ ವೇಳೆ ನಾನು, ವಾಸಿಂ ಅಕ್ರಂ, ವಖಾರ್‌ ಯೂನಿಸ್‌ ಗಾಳಿಯ ವೇಗ, ಗಾಳಿ ಬೀಸುತ್ತಿರುವ ದಿಕ್ಕು ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬೌಲ್‌ ಮಾಡುತ್ತಿದ್ದವು. ಹೀಗಾಗಿ ನಾವು ಹೆಚ್ಚು ಪರಿಣಾಮಕಾರಿಯಾಗುತ್ತಿದ್ದೆವು. ಈಗಿನ ಬೌಲರ್‌ಗಳು, ಅದರಲ್ಲೂ ಪ್ರಮುಖವಾಗಿ ಭಾರತೀಯರ ಪೈಕಿ ಬುಮ್ರಾ ಮಾತ್ರ ಗಾಳಿಯ ವೇಗಿ, ಗಾಳಿ ಬೀಸುತ್ತಿರುವ ದಿಕ್ಕು ಪರಿಗಣಿಸಿ ಬೌಲ್‌ ಮಾಡುತ್ತಾರೆ’ ಎಂದು ಅಖ್ತರ್‌ ಹೇಳಿದ್ದಾರೆ.

ಕೇವಲ ಐದು ಸೆಕೆಂಡ್‌ಗಳಲ್ಲಿ ಕಣ್ಮಿಟುಕಿಸಿ ಬಿಡುವಷ್ಟರಲ್ಲಿ ಬುಮ್ರಾ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ತಬ್ಬಿಬ್ಬು ಮಾಡಿ ಬಿಡುತ್ತಾರೆ. ಒಂದು ಒಂದು ವೇಳೆಯ ಒಳ್ಳೆಯ ಫಿಟ್ನೆಸ್ ಕಾಪಾಡಿಕೊಂಡು ದೀರ್ಘಕಾಲ ಕ್ರಿಕೆಟ್ ಆಡಿದರೆ ಜಗತ್ತಿನ ಶ್ರೇಷ್ಠ ಬೌಲರ್ ಆಗಿ ಹೊರಹೊಮ್ಮಲಿದ್ದಾರೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.

ಮೊದಲಿಗೆ ಕಾಶ್ಮೀರ, ಬಳಿಕ ಇಡೀ ಭಾರತದ ಮೇಲೆ ಇಸ್ಲಾಂ ಪಡೆಯಿಂದ ದಾಳಿ; ಅಖ್ತರ್ ಹೇಳಿಕೆ ವೈರಲ್
 
ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿರುವ ಬುಮ್ರಾ 2018ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಎಂಟ್ರಿ ಕೊಟ್ಟಿದ್ದರು. ಇದಾದ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲೂ ಬುಮ್ರಾ ತನ್ನ ಮೊನಚಾದ ದಾಳಿಯನ್ನು ಸಂಘಟಿಸುವ ಮೂಲಕ ತಂಡಕ್ಕೆ ಆಸರೆಯಾಗಿದ್ದಾರೆ. ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲೂ ಬುಮ್ರಾ ಟೀಂ ಇಂಡಿಯಾ ವೇಗದ ಬೌಲಿಂಗ್ ಸಾರಥ್ಯ ವಹಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!
ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?