
ಇಸ್ಲಾಮಾಬಾದ್(ಏ.13): ತಮ್ಮ ಚುರುಕಿನ ವಾಕ್ಚಾತುರ್ಯದ ಮೂಲಕ ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿರುವ ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಸೈಮನ್ ಡುಲ್, ಇದೀಗ ಪಾಕಿಸ್ತಾನದ ಮೇಲೆ ಮತ್ತೊಮ್ಮೆ ಟೀಕಾ ಪ್ರಹಾರವನ್ನು ನಡೆಸಿದ್ದಾರೆ.
ಸೈಮನ್ ಡುಲ್, ಇತ್ತೀಚೆಗಷ್ಟೇ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ ಬಗ್ಗೆ ತುಟಿಬಿಚ್ಚಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಆನ್ ಏರ್‌ನಲ್ಲಿಯೇ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಮೀರ್ ಸೋಹೆಲ್ ವಾಗ್ವಾದ ನಡೆಸಿದ್ದರು. ಇದಾದ ಬಳಿಕ ಅಲ್ಲಿದ ಹೊರಹೋಗುವುದಕ್ಕೂ ಬಾಬರ್ ಅಜಂ ಬೆಂಬಲಿಗರು ಬೆದರಿಕೆಯೊಡ್ಡುತ್ತಿದ್ದರು. ಕೆಲ ಸಮಯ ಕನಿಷ್ಠ ಊಟಕ್ಕೂ ಪರದಾಡುವಂತಾಗಿತ್ತು. ಹೇಗೋ ಅಲ್ಲಿಂದ ಪಾರಾಗಿ ಬಂದೆ ಎಂದು ಸೈಮನ್ ಡುಲ್ ಹೇಳಿದ್ದಾರೆ.
"ಪಾಕಿಸ್ತಾನದಲ್ಲಿರುವುದು ಜೈಲಿನಲ್ಲಿ ವಾಸಿಸುವಂತೆ ಎಂದು ಸೈಮನ್ ಡುಲ್, ಆ ಕರಾಳ ದಿನಗಳನ್ನು ಮೆಲುಕು ಹಾಕಿದ್ದಾರೆ. ತಾವು ಹೊರಹೋಗುವುದಕ್ಕೆ ಬಾಬರ್ ಅಜಂ ಫ್ಯಾನ್ಸ್ ಅವಕಾಶವನ್ನೇ ನೀಡಲಿಲ್ಲ. ಅವರು ಹೊರಗೆ ಕಾಯುತ್ತಲೇ ಇದ್ದರು. ನಾನು ಕೆಲವು ದಿನ ಸರಿಯಾಗಿ ಆಹಾರವೂ ಇಲ್ಲದೇ ಉಳಿದುಕೊಳ್ಳುವ ಪರಿಸ್ಥಿತಿ ಎದುರಾಗಿತ್ತು. ಈ ಸಂದರ್ಭದಲ್ಲಿ ಮಾನಸಿಕ ಕಿರಿಕಿರಿಗೂ ಒಳಗಾಗಿದ್ದೆ. ಆದರೆ ದೇವರ ದಯೆಯಿಂದ ಹೇಗೋ ಪಾಕಿಸ್ತಾನದಿಂದ ಪಲಾಯನ ಮಾಡಿದೆ" ಎಂದು ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.
ಕೆಲವರು NCA ಕಾಯಂ ನಿವಾಸಿಗಳಾಗಿದ್ದಾರೆ: ಟೀಂ ಇಂಡಿಯಾ ಆಟಗಾರರ ವಿರುದ್ದ ರವಿಶಾಸ್ತ್ರಿ ಕಿಡಿ
ಕಳೆದ ತಿಂಗಳಷ್ಟೇ ಸೈಮನ್ ಡುಲ್ ಅವರು ಪಾಕಿಸ್ತಾನ ಸೂಪರ್ ಲೀಗ್ (Pakistan Super League) ಟೂರ್ನಿಯಲ್ಲಿ ಬಾಬರ್ ಅಜಂ ಅವರ ಸ್ವಾರ್ಥದ ಇನಿಂಗ್ಸ್ ಬಗ್ಗೆ ವೀಕ್ಷಕ ವಿವರಣೆ ನೀಡುವಾಗ ಮಾತನಾಡಿದ್ದರು. ಪಿಎಸ್‌ಎಲ್ 2023 ಟೂರ್ನಿಯ ಕ್ವೆಟ್ಟಾ ಗ್ಲಾಡೀಯೇಟರ್ಸ್ ಎದುರಿನ ಪಂದ್ಯದಲ್ಲಿ ಪೇಶಾವರ್ ಝಲ್ಮಿ ತಂಡದ ನಾಯಕ ಬಾಬರ್ ಅಜಂ, 46 ಎಸೆತಗಳನ್ನು ಎದುರಿಸಿ 83 ರನ್ ಸಿಡಿಸಿದ್ದರು. ಇದಾದ ಬಳಿಕ ಬರೋಬ್ಬರಿ 14 ಎಸೆತಗಳನ್ನು ಎದುರಿಸಿ ಚೊಚ್ಚಲ ಪಿಎಸ್‌ಎಲ್ ಶತಕ ಪೂರೈಸಿದ್ದರು.
ಈ ಸಂದರ್ಭದಲ್ಲಿ ಕಾಮೆಂಟ್ರಿ ಮಾಡುತ್ತಿದ್ದ ಸೈಮನ್ ಡುಲ್, ವೈಯುಕ್ತಿಕ ದಾಖಲೆಗಳಿಗಿಂತ ತಂಡದ ಹಿತಾಸಕ್ತಿ ಮುಖ್ಯವಾಗಬೇಕು. ಸಾಕಷ್ಟು ಬಲಾಢ್ಯ ಬ್ಯಾಟರ್‌ಗಳು ಇನ್ನೂ ತಂಡದಲ್ಲಿ ಇರುವುದರಿಂದ ಬೌಂಡರಿ ಬಾರಿಸುವತ್ತ ಗಮನ ಕೊಡಬೇಕು. ಶತಕಗಳು ಅದ್ಭುತವೆನಿಸುತ್ತವೆ. ಆದರೆ ತಂಡದ ಹಿತಾಸಕ್ತಿ ಮೊದಲ ಆದ್ಯತೆ ಎಂದು ಡುಲ್ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.