ಹೃದಯ ಶಸ್ತ್ರಚಿಕಿತ್ಸೆ ಬಳಿಕ ಕ್ರಿಸ್ ಕೇರ್ನ್ಸ್‌ಗೆ ಪಾರ್ಶ್ವವಾಯು..!

By Suvarna NewsFirst Published Aug 28, 2021, 12:55 PM IST
Highlights

* ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಕ್ರಿಸ್‌ ಕೇರ್ನ್ಸ್‌ ಪಾರ್ಶ್ವವಾಯು

* ಕಾಲಿನ ಸ್ವಾದೀನ ಕಳೆದುಕೊಂಡ ಕಿವೀಸ್‌ ಮಾಜಿ ಆಲ್ರೌಂಡರ್

* ಆದಷ್ಟು ಬೇಗ ಕೇರ್ನ್ಸ್‌ ಗುಣಮುಖರಾಗಲಿ ಎಂದು ಶುಭ ಹಾರೈಸಿದ ತೆಂಡುಲ್ಕರ್

ಮೆಲ್ಬರ್ನ್‌(ಆ.28): ಹೃದಯ ಶಸ್ತ್ರಚಿಕಿತ್ಸೆ ವೇಳೆ ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಕ್ರಿಸ್‌ ಕೇರ್ನ್ಸ್‌ ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಹೃದಯದ ಶಸ್ತ್ರಚಿಕಿತ್ಸೆ ವೇಲೆ ಕ್ರಿಸ್‌ ಅವರ ಬೆನ್ನುಮೂಳೆಗೆ ಪಾರ್ಶ್ವವಾಯು ತಗುಲಿತ್ತು. ಇದರಿಂದಾಗಿ ಅವರ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಆಸ್ಪ್ರೇಲಿಯಾದಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಯಲಿದೆ ಎಂದು ವರದಿಗಳು ತಿಳಿಸಿವೆ.

ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಕ್ರಿಸ್‌ 1989ರಿಂದ 2006ರ ತನಕ ನ್ಯೂಜಿಲೆಂಡ್ ಪರ 62 ಟೆಸ್ಟ್ 215 ಏಕದಿನ ಹಾಗೂ 2 ಟಿ20 ಪಂದ್ಯಗಳನ್ನಾಡಿದ್ದು, ಕ್ರಮವಾಗಿ 3,320 ಹಾಗೂ 4,950 ರನ್‌ ಬಾರಿಸಿದ್ದಾರೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ಸೇರಿ ಒಟ್ಟು 9 ಶತಕ ಹಾಗೂ 48 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇನ್ನು ಬೌಲಿಂಗ್‌ನಲ್ಲಿ 218 ಟೆಸ್ಟ್‌ ವಿಕೆಟ್‌ ಹಾಗೂ 201 ಏಕದಿನ ವಿಕೆಟ್ ಕಬಳಿಸಿ ಮಿಂಚಿದ್ದಾರೆ.  

Former New Zealand all-rounder Chris Cairns has been left paralysed after suffering a stroke during a heart operation, his family has confirmed.

— BBC Sport (@BBCSport)

ಶಸ್ತ್ರಚಿಕಿತ್ಸೆ ಬಳಿಕ ಚೇತರಿಸಿಕೊಳ್ಳುತ್ತಿರುವ ನ್ಯೂಜಿಲೆಂಡ್ ಕ್ರಿಕೆಟ್ ಸವ್ಯಸಾಚಿ ಕ್ರಿಸ್‌ ಕ್ರೇನ್ಸ್‌

2008ರಲ್ಲಿ ಐಪಿಎಲ್‌ನಲ್ಲಿ ಆಡಿದ್ದ ಕ್ರಿಸ್‌ ವಿರುದ್ಧ ಮ್ಯಾಚ್‌ ಫಿಕ್ಸಿಂಗ್‌ ಆರೋಪ ಕೇಳಿಬಂದಿತ್ತು. ತಾನು ನಿರಪರಾಧಿ ಎಂದು ಸಾಬೀತು ಪಡಿಸಲು ಸಾಕಷ್ಟು ಕಾನೂನು ಹೋರಾಟ ನಡೆಸಿದ್ದ ಕ್ರಿಸ್‌, 2012ರಲ್ಲಿ ಐಪಿಎಲ್‌ ಸ್ಥಾಪಕ ಲಲಿತ್‌ ಮೋದಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

Concerned to know about Chris Cairns. Hoping & praying. 🙏🏻

Get well soon mate, the entire cricketing fraternity wishes for your wellbeing.

— Sachin Tendulkar (@sachin_rt)

ಕ್ರಿಸ್‌ ಕೇನ್ಸ್‌ ಆದಷ್ಟು ಬೇಗ ಚೇತರಿಸಿಕೊಂಡು ಗುಣಮುಖರಾಗಲಿ ಎಂದು ಟ್ವೀಟ್‌ ಮೂಲಕ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಶುಭಹಾರೈಸಿದ್ದಾರೆ. 

click me!