ಇರಾನಿ ಕಪ್: ಶೇಷ ಭಾರತ ವಿರುದ್ದ ಮುಂಬೈಗೆ ಮುನ್ನಡೆ; ರೋಚಕಘಟ್ಟದತ್ತ ಕೊನೆಯ ದಿನದಾಟ

Published : Oct 05, 2024, 08:20 AM IST
ಇರಾನಿ ಕಪ್: ಶೇಷ ಭಾರತ ವಿರುದ್ದ ಮುಂಬೈಗೆ ಮುನ್ನಡೆ; ರೋಚಕಘಟ್ಟದತ್ತ ಕೊನೆಯ ದಿನದಾಟ

ಸಾರಾಂಶ

ಶೇಷ ಭಾರತ ಎದುರು ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯುವಲ್ಲಿ ಮುಂಬೈ ಕ್ರಿಕೆಟ್ ತಂಡವು ಯಶಸ್ವಿಯಾಗಿದೆ. ಇದೀಗ ಕೊನೆಯ ದಿನದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಲಖನೌ: ಅಭಿಮನ್ಯು ಈಶ್ವರನ್ ಹಾಗೂ ಧ್ರುವ್ ಜುರೆಲ್ ಹೋರಾಟದ ಹೊರತಾಗಿಯೂ ಶೇಷ ಭಾರತ ವಿರುದ್ಧ ಮುಂಬೈ ತಂಡ ಇರಾನಿ ಕಪ್ ಪಂದ್ಯದಲ್ಲಿ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ. ಮುಂಬೈ ಒಟ್ಟಾರೆ 274 ರನ್ ಮುನ್ನಡೆಯಲ್ಲಿದ್ದು, ಕೊನೆ ದಿನವಾದ ಶನಿವಾರವೂ ಉತ್ತಮ ಪ್ರದರ್ಶನ ನೀಡಿ ಪಂದ್ಯ ಗೆಲ್ಲುವ ಕಾತರದಲ್ಲಿದೆ.

ಮುಂಬೈನ 537 ರನ್‌ಗೆ ಉತ್ತರವಾಗಿ ಶೇಷ ಭಾರತ ಶುಕ್ರವಾರ 416 ರನ್‌ಗೆ ಆಲೌಟಾಯಿತು. 5ನೇ ವಿಕೆಟ್‌ಗೆ ಅಭಿಮನ್ಯು ಹಾಗೂ ಜುರೆಲ್ 165 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 393 ರನ್ ಆಗಿದ್ದಾಗ ಜುರೆಲ್ (93) ಔಟಾದರು. ಆ ಬಳಿಕ ತಂಡ ದಿಢೀರ್ ಪತನ ಕಂಡಿತು. ಈಶ್ವರನ್ ದ್ವಿಶತಕದ ಅಂಚಿನಲ್ಲಿ ಎಡವಿದರು. ಅವರು 191 ರನ್ ಗಳಿಸಿದರು. ತಂಡ ಕೊನೆ 23 ರನ್ ಗಳಿಸುವಷ್ಟರಲ್ಲಿ 6 ವಿಕೆಟ್ ಕಳೆದುಕೊಂಡಿತು. ಇದರೊಂದಿಗೆ ಮೊದಲ ಇನ್ನಿಂಗ್ಸ್‌ನಲ್ಲಿ ಮುಂಬೈ 121 ರನ್ ಮುನ್ನಡೆ ಪಡೆಯಿತು.

ಬಳಿಕ 2ನೇ ಇನ್ನಿಂಗ್ಸ್ ಆರಂಭಿಸಿದ ಮುಂಬೈ 4ನೇ ದಿನದಂತ್ಯಕ್ಕೆ 6 ವಿಕೆಟ್‌ಗೆ 153 ರನ್ ಗಳಿಸಿದ್ದು, ಒಟ್ಟು 274 ರನ್ ಲೀಡ್ ಪಡೆದಿದೆ. ಪೃಥ್ವಿ ಶಾ 76 ರನ್ ಗಳಿಸಿದರು. ಶರನ್ಸ್ ಜೈನ್ 4 ವಿಕೆಟ್ ಕಿತ್ತರು.

ಮಗಳ ಭೇಟಿ ಮಾಡಿ ಭಾವುಕನಾದ ಮೊಹಮ್ಮದ್ ಶಮಿ: ಇದೆಲ್ಲಾ ಶೋಆಫ್ ಎಂದ ವಿಚ್ಛೇದಿತ ಪತ್ನಿ

ಸ್ಕೋರ್: ಮುಂಬೈ 537/10 ಮತ್ತು 153/6 (4ನೇ ದಿನದಂತ್ಯಕ್ಕೆ) (ಪೃಥ್ವಿಶಾ 76, ಜೈನ್ 4-67), ಶೇಷ ಭಾರತ 416/10 (ಈಶ್ವರನ್ 191, ಜುರೆಲ್ 93, ತನುಶ್ 3-101, ಶಮ್ಸ್ ಮುಲಾನಿ 3-122)

ಡ್ರಾ ಆದರೆ ಮುಂಬೈ ಚಾಂಪಿಯನ್

ಶನಿವಾರ ಪಂದ್ಯದ ಕೊನೆವಾಗಿದ್ದು, ಗೆಲುವಿಗಾಗಿ ಇತ್ತಂಡಗಳು ಹೋರಾಟ ನಡೆಸಲಿವೆ. ಆದರೆ ಪಂದ್ಯ ಡ್ರಾಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಡ್ರಾ ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಮುಂಬೈ ತಂಡ ಚಾಂಪಿಯನ್ ಎನಿಸಿಕೊಳ್ಳಲಿದೆ.

ಸಿಂಪಲ್ ಮ್ಯಾನ್, ಯಶಸ್ವಿ ಕೋಚ್ ರಾಹುಲ್ ದ್ರಾವಿಡ್ ಒಟ್ಟು ಸಂಪತ್ತು ಎಷ್ಟು? ಇರುವ ಕಾರುಗಳು ಯಾವ್ಯಾವು?

ವೆಸ್ಟ್‌ಇಂಡೀಸ್‌ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ 10 ವಿಕೆಟ್‌ ಗೆಲುವು

ದುಬೈ: ಈ ಬಾರಿ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಭರ್ಜರಿ ಶುಭಾರಂಭ ಮಾಡಿದೆ. ಶುಕ್ರವಾರ ವೆಸ್ಟ್‌ಇಂಡೀಸ್‌ ವಿರುದ್ಧ ಪಂದ್ಯದಲ್ಲಿ ಹರಿಣ ಪಡೆ 10 ವಿಕೆಟ್‌ ಗೆಲುವು ಸಾಧಿಸಿತು.

ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 6 ವಿಕೆಟ್‌ ಕಳೆದುಕೊಂಡು 118 ರನ್‌ ಕಲೆಹಾಕಿತು. ಸ್ಟಫಾನೀ ಟೇಲರ್‌(41 ಎಸೆತಗಳಲ್ಲಿ 44 ರನ್‌) ಹೊರತುಪಡಿಸಿ ಇತರರು ವಿಫಲರಾದರು. ನಾಯಕಿ ಹೇಲಿ ಮ್ಯಾಥ್ಯೂಸ್‌ 10, ಡಾಟಿನ್‌ 13, ಜೈದಾ ಜೇಮ್ಸ್‌ 15 ರನ್‌ ಗಳಿಸಿದರು. ದ.ಆಫ್ರಿಕಾ ಪರ ನೊನ್‌ಕುಲುಲೆಕೊ 29 ರನ್‌ಗೆ 4 ವಿಕೆಟ್‌ ಕಿತ್ತರು.

ಸುಲಭ ಗುರಿಯನ್ನು ದ.ಆಫ್ರಿಕಾ 17.5 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ ಬೆನ್ನತ್ತಿ ಗೆಲುವು ತನ್ನದಾಗಿಸಿಕೊಂಡಿತು. ನಾಯಕಿ ಲಾರಾ ವೊಲ್ವಾರ್ಟ್‌ 55 ಎಸೆತಗಳಲ್ಲಿ ಔಟಾಗದೆ 59, ತಜ್ಮೀನ್‌ ಬ್ರಿಟ್ಸ್‌ 52 ಎಸೆತಗಳಲ್ಲಿ ಔಟಾಗದೆ 57 ರನ್‌ ಸಿಡಿಸಿದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ