ಟೀಂ ಇಂಡಿಯಾ ಮಾಜಿ ಕ್ರಿಕೆಟಿಗನ ವಿರುದ್ಧ ವಂಚನೆ ಕೇಸ್..!

By Kannadaprabha NewsFirst Published Oct 18, 2019, 4:39 PM IST
Highlights

ಟೀಂ ಇಂಡಿಯಾದ ಮಾಜಿ ಆಲ್ರೌಂಡರ್ ಮನೋಜ್ ಪ್ರಭಾಕರ್ ವಿರುದ್ಧ ವಂಚನೆ ಪ್ರಕರಣ ಕೇಳಿ ಬಂದಿದೆ. ಅಷ್ಟಕ್ಕೂ ಏನಿದು ಪ್ರಕರಣ ಎನ್ನುವುದರ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಅ.18]: ನಕಲಿ ದಾಖಲೆ ಸೃಷ್ಟಿಸಿ ಫ್ಲ್ಯಾಟ್ ಒಂದನ್ನು ಕಬಳಿಸಿದ ಆರೋಪದ ಮೇರೆಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಮನೋಜ್  ಪ್ರಭಾಕರ್ ಹಾಗೂ ಕುಟುಂಬದ ವಿರುದ್ಧ ಇಲ್ಲಿನ ಪೊಲೀಸರು ಗುರುವಾರ ಪ್ರಕರಣ ದಾಖಲಿಸಿದ್ದಾರೆ.

ಬ್ರೆಟ್ ಲೀ ಗೆ ಸಿಕ್ಸರ್ ಬಾರಿಸಲು ಸಚಿನ್-ಸೆಹ್ವಾಗ್ ರೆಡಿ..!

ಲಂಡನ್ ನಿವಾಸಿ ಸಂಧ್ಯಾ ಶರ್ಮಾ ಪಂಡಿತ್ ದೂರು ನೀಡಿದ್ದಾರೆ. ದಕ್ಷಿಣ ದೆಹಲಿಯ ಸರ್ವಪ್ರಿಯ ವಿಹಾರ್’ನಲ್ಲಿ ಸಂಧ್ಯಾ ಫ್ಲ್ಯಾಟ್ ಹೊಂದಿದ್ದಾರೆ. 1995ರಲ್ಲಿ ಫ್ಲ್ಯಾಟನ್ನು ಸಂಧ್ಯಾ ಪತಿ ಖರೀಧಿಸಿದ್ದರು. 2006ರಲ್ಲಿ ಲಂಡನ್ ತೆರಳಿದ್ದ ದಂಪತಿ ಸಂಬಂಧಿಕರಿಗೆ ಫ್ಲ್ಯಾಟ್ ಬಳಸಲು ಅವಕಾಶ ನೀಡಿದ್ದರು. 2018ರಲ್ಲಿ ಸಂಬಂಧಿಗಳೂ ಫ್ಲ್ಯಾಟ್ ಖಾಲಿ ಮಾಡಿದ್ದರು. ಇದೀಗ ಪ್ರಭಾಕರ್ ಈ ಖಾಲಿ ಫ್ಲ್ಯಾಟನ್ನು ನಕಲಿ ದಾಖಲೆ ಸೃಷ್ಟಿಸಿ ಕಬಳಿಸಿದ್ದಾರೆ ಎನ್ನುವ ಆರೋಪ ಎದುರಿಸುತ್ತಿದ್ದಾರೆ. ಅವರನ್ನು ಶೀಘ್ರವೇ ವಿಚಾರಣೆಗೆ ಕರೆಸುವುದಾಗಿ ತಿಳಿಸಿದ್ದಾರೆ. 

ಇಂಡೋ-ಪಾಕ್ ಸರಣಿ ಬಗ್ಗೆ ಮೋದಿ, ಇಮ್ರಾನ್ ಕೇಳಿ; ದಾದಾ ಖಡಕ್ ಮಾತು

ಮನೋಜ್ ಪ್ರಭಾಕರ್ ಭಾರತ ಪರ 39 ಟೆಸ್ಟ್ ಪಂದ್ಯಗಳನ್ನಾಡಿ 3581 ರನ್ ಹಾಗೂ 96 ವಿಕೆಟ್ ಪಡೆದಿದ್ದಾರೆ. ಇನ್ನು 130 ಪಂದ್ಯಗಳಲ್ಲಿ 4534 ರನ್ ಹಾಗೂ 157 ವಿಕೆಟ್ ಕಬಳಿಸಿದ್ದಾರೆ. 
 

click me!