ವಿಧಾನ ಸಭಾ ಚುನಾವಣೆಗಳು ಒಂದರ ಮೇಲೊಂದರಂತೆ ಹತ್ತಿರಬರುತ್ತಿದೆ. ಇದರ ಬೆನ್ನಲ್ಲೇ ಎಲ್ಲಾ ಪಕ್ಷಗಳು ಸೆಲೆಬ್ರೆಟಿಗಳನ್ನು, ಪ್ರಮುಖ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಾಡುತ್ತಿದೆ. ಆದರೆ ಕಳೆದ ಕೆಲ ತಿಂಗಳುಗಳಿಂದ ಇತರ ಪಕ್ಷಗಳಿಂದ ಬಿಜೆಗೆ ಸೇರುವ ಮುಖಂಡರ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಟೀಂ ಇಂಡಿಯಾ ಮಾಜಿ ಕ್ರಿಟಿಗ, ಐಸಿಸಿ ಸಮಿತಿಯ ಸದಸ್ಯ, ವೀಕ್ಷಕ ವಿರಣೆಗಾರ ಬಿಜೆಪಿ ಸೇರಿಕೊಂಡಿದ್ದಾರೆ.
ಚೆನ್ನೈ(ಡಿ.30) ತಮಿಳುನಾಡು ರಾಜಕೀಯಲ್ಲಿ ಭಾರಿ ಬದಲಾವಣೆ ಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿದೆ. ಐಪಿಎಎಸ್ ಅಧಿಕಾರಿ ಅಣ್ಣಾಮಲೈ ಬಿಜೆಪಿ ಸೇರಿದ ಬಳಿಕ ತಮಿಳುನಾಡಿಲ್ಲಿ ಬಿಜೆಪಿ ಬಲಗೊಳ್ಳುತ್ತಿದೆ. ಇತ್ತ ಕರ್ನಾಟಕ ನಾಯಕ ಸಿಟಿ ರವಿ ತಮಿಳುನಾಡು ಬಿಜೆಪಿ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಇವರಿಬ್ಬರ ಜೊತೆಯಾಟದಲ್ಲಿ ಹಲವು ನಾಯಕರು ಬಿಜೆಪಿಯತ್ತ ಮುಖ ಮಾಡಿದ್ದಾರೆ. ಇದೀಗ ಟೀಂ ಇಂಡಿಯಾ ಮಾಜಿ ಸ್ಪಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಬಿಜೆಪಿ ಸೇರಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಕ್ಷಿಪ್ರ ಬೆಳವಣಿಗೆ; ರಾಜ್ಯಪಾಲರ ಭೇಟಿ ಮಾಡಿದ ಸೌರವ್ ಗಂಗೂಲಿ!
undefined
ಮುಂದಿನ ವರ್ಷ ತಮಿಳುನಾಡು ವಿಧಾನಸಭಾ ಚುನಾವಣೆ ನಡೆಯಲಿದೆ. ಇದರ ಬೆನ್ನಲ್ಲೇ ಬಿಜೆಪಿ ಹಲವು ರಾಜಕೀಯ ಚಟುವಟಿಕೆ ಮೂಲಕ ಪಕ್ಷ ಬಲಗೊಳಿಸುತ್ತಿದೆ. ಈಗಾಗಲೇ ನಟಿ ಖುಷ್ಬೂ ಹಾಗೂ ವಿಜಯಶಾಂತಿ ಬಿಜೆಪಿ ಸೇರಿಕೊಂಡಿದ್ದಾರೆ. ಇದೀಗ ತಮಿಳುನಾಡಿನ ದಿಗ್ಗಜ ಸ್ಪಿನ್ನರ್ ಎಂದೇ ಗುರುತಿಸಿಕೊಂಡಿರುವ ಲಕ್ಷ್ಮಣ್ ಶಿವರಾಮಕೃಷ್ಣನ್ ಕೂಡ ಬಿಜೆಪಿ ಸೇರಿಕೊಂಡಿದ್ದಾರೆ.
ದಾದಾ ಬಿಜೆಪಿ ಸೇರ್ತಾರಾ? ಸೌರವ್ ಗಂಗೂಲಿ ಹೇಳಿದ್ದೇನು?.
ಸಿಟಿ ರವಿ ಸಮ್ಮುಖದಲ್ಲಿ ಶಿವರಾಮಕೃಷ್ಣನ್ ಬಿಜೆಪಿ ಸೇರಿಕೊಂಡಿದ್ದಾರೆ. ಬಿಜೆಪಿ ಆಡಳಿ, ಬಿಜೆಪಿ ಪಕ್ಷದಲ್ಲಿನ ಶಿಸ್ತು ಸೇರಿದಂತೆ ಹಲವು ಕಾರಣಗಳಿಂದ ಮುಖಂಡರು ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ. ಇದೀಗ ದಿಗ್ಗಜ ಕ್ರಿಟಿಗ ಶಿವರಾಮಕೃಷ್ಣನ್ ಪಕ್ಷ ಸೇರಿಕೊಂಡಿರುವುದು ಸಂತಸ ತಂದಿದೆ ಎಂದು ಸಿಟಿ ರವಿ ಹೇಳಿದ್ದಾರೆ.
17ನೇ ವಯಸ್ಸಿಗೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಶಿವರಾಮಕೃಷ್ಣನ್, 9 ಟೆಸ್ಟ್ ಪಂದ್ಯದಲ್ಲಿ 26 ವಿಕೆಟ್ ಹಾಗೂ ಎಕದಿನದಲ್ಲಿ 15 ವಿಕೆಟ್ ಕಬಳಿಸಿದ್ದಾರೆ. ಇನ್ನು 1987ರಲ್ಲಿ ನಿವೃತ್ತಿ ಘೋಷಿಸಿದ ಶಿವರಾಮಕೃಷ್ಣನ್ ವೀಕ್ಷಕ ವಿವರಣೆಗಾರರಾಗಿ ಮುಂದುವರಿದಿದ್ದಾರೆ.
ಶಿವರಾಮಕೃಷ್ಣನ್ ರಾಜಕೀಯ ಸೇರ್ಪಡೆ ಬಳಿಕ ಮಾತನಾಡಿದ ಸಿಟಿ ರವಿ, ರಜನಿಕಾಂತ್ ರಾಜಕೀಯದಿಂದ ಹಿಂದೆ ಸರಿದಿರುವ ಕುರಿತು ಮಾತನಾಡಿದ್ದಾರೆ. ರಜನಿಕಾಂತ್ ಅವರ ನಿರ್ಧಾರವನ್ನು ನಾವೆಲ್ಲ ಗೌರವಿಸಬೇಕು. ಭಾಷೆ ಹಾಗೂ ಕಲೆಗೆ ನೀಡಿರುವ ಕೊಡುಗೆ ಅಪಾರ, ತಮಿಳು, ತಮಿಳಿಗರು ಹಾಗೂ ತಮಿಳುನಾಡಿನ ಮೇಲಿರುವ ಅವರ ಬದ್ಧತೆ ಹಾಗೂ ತುಡಿತ ನಮಗೆಲ್ಲ ಮಾದರಿಯಾಗಿದೆ. ಅವರ ಶಕ್ತಿ ಸಮಾರ್ಥ್ಯದ ಕುರಿತು ಅರಿವಿದೆ. ಅತೀ ದೊಡ್ಡ ನಾಯಕ ರಜನಿ ಎಂದು ಸಿಟಿ ರವಿ ಹೇಳಿದ್ದಾರೆ.