ಹೊಸ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್; 'ಮೈ ಲವ್' ಪೋಸ್ಟ್ ಹಾಕಿ ಗಾಳಿ ಸುದ್ದಿಗೆ ತೆರೆ ಎಳೆದ ಗಬ್ಬರ್‌ ಸಿಂಗ್

Published : May 02, 2025, 10:35 AM ISTUpdated : May 02, 2025, 11:01 AM IST
ಹೊಸ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್; 'ಮೈ ಲವ್' ಪೋಸ್ಟ್ ಹಾಕಿ ಗಾಳಿ ಸುದ್ದಿಗೆ ತೆರೆ ಎಳೆದ ಗಬ್ಬರ್‌ ಸಿಂಗ್

ಸಾರಾಂಶ

ಭಾರತದ ಕ್ರಿಕೆಟಿಗ ಶಿಖರ್ ಧವನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಗೆಳತಿ ಸೋಫಿ ಶೈನ್ ಅವರೊಂದಿಗಿನ ಸಂಬಂಧವನ್ನು ದೃಢಪಡಿಸಿದ್ದಾರೆ. ಧವನ್ ಅವರು 2023 ರಲ್ಲಿ ತಮ್ಮ ಮಾಜಿ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದಿದ್ದರು.

ನವದೆಹಲಿ: ಮಾಜಿ ಪತ್ನಿ ಆಯೇಷಾ ಮುಖರ್ಜಿಯಿಂದ ವಿಚ್ಛೇದನ ಪಡೆದ ಎರಡು ವರ್ಷಗಳ ನಂತರ, ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಶಿಖರ್ ಧವನ್ ಐರ್ಲೆಂಡ್‌ನ ಸೋಫಿ ಶೈನ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಗುರುವಾರ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಶಿಖರ್ ಧವನ್ ಸೋಫಿ ಶೈನ್ ಜೊತೆಗಿನ ತಮ್ಮ ಸಂಬಂಧವನ್ನು ಖಚಿತಪಡಿಸಿದ್ದಾರೆ.

ಇದರೊಂದಿಗೆ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಿದೆ. ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಮತ್ತು ಶೈನ್ ಬಹಳ ಸಮಯದಿಂದ ಒಬ್ಬರನ್ನೊಬ್ಬರು ಡೇಟಿಂಗ್ ಮಾಡುತ್ತಿದ್ದಾರೆ. ಈಗ ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ 'ಮೈ ಲವ್' ಎಂದು ಎಮೋಜಿ ಚಿಹ್ನೆಯೊಂದಿಗೆ ಶಿಖರ್ ಧವನ್ ಇಬ್ಬರೂ ಒಟ್ಟಿಗೆ ಇರುವ ಫೋಟೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಸೋಫಿ ಜೊತೆಗೆ ಯುಜುವೇಂದ್ರ ಚಹಲ್ ಕೂಡ ಲೈಕ್ ಮಾಡಿದ್ದಾರೆ. ಇದರಿಂದ ಈ ಜೋಡಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

ಸೋಫಿ ಶೈನ್ ಯಾರು?

ಸೋಫಿ ಶೈನ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ 134K ಫಾಲೋವರ್‌ಗಳಿದ್ದಾರೆ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು 2018 ರಿಂದ ನಾರ್ದರ್ನ್ ಟ್ರಸ್ಟ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಉತ್ಪನ್ನ ಸಮಾಲೋಚನೆಯಲ್ಲಿ ಹಿರಿಯ ಉಪಾಧ್ಯಕ್ಷರಾಗಿದ್ದಾರೆ. ಅವರು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಅಬುಧಾಬಿಯಲ್ಲಿರುವ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಐರ್ಲೆಂಡ್‌ನ ಲಿಮೆರಿಕ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾರ್ಕೆಟಿಂಗ್ ಮತ್ತು ಮ್ಯಾನೇಜ್‌ಮೆಂಟ್‌ನಲ್ಲಿ ಪದವಿ ಪಡೆದಿದ್ದಾರೆ. ಕ್ಯಾಸಲ್‌ರಾಯ್ ಕಾಲೇಜಿನಲ್ಲಿಯೂ ಅಧ್ಯಯನ ಮಾಡಿದ್ದಾರೆ. 2025 ಚಾಂಪಿಯನ್ಸ್ ಟ್ರೋಫಿಯ ಸಂದರ್ಭದಲ್ಲಿ ಧವನ್ ಮತ್ತು ಶೈನ್ ಸ್ಟ್ಯಾಂಡ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಇದರಿಂದ ಆಗಿನಿಂದಲೂ ಇವರು ವೈರಲ್ ಆಗಿದ್ದಾರೆ.

ಶಿಖರ್ ಧವನ್ 2012 ರಲ್ಲಿ ಆಸ್ಟ್ರೇಲಿಯಾ ನಿವಾಸಿ ಆಯೇಷಾಳನ್ನು ವಿವಾಹವಾದರು. 2023 ರ ಅಕ್ಟೋಬರ್‌ನಲ್ಲಿ, ದೆಹಲಿ ಹೈಕೋರ್ಟ್  ಈ ಸ್ಟಾರ್ ಭಾರತೀಯ ಕ್ರಿಕೆಟಿಗ ಧವನ್-ಆಯೇಷಾಗೆ ವಿಚ್ಛೇದನವನ್ನು ಮಂಜೂರು ಮಾಡಿತು. ಈ ದಂಪತಿಗೆ 2024 ರಲ್ಲಿ ಝೋರಾವರ್‌ ಎಂಬ ಮಗನಿದ್ದಾನೆ.

ಪತ್ನಿ ಕ್ರೂರಿ ಎಂದು ದಾವೆ ಹೂಡಿದ್ದ ಧವನ್‌: ಧವನ್‌-ಪತ್ನಿಗೆ ವಿಚ್ಛೇದನ ಮಂಜೂರು

ಪತ್ನಿ ಐಶಾ ಅವರು ನನ್ನ ಮಗನನ್ನು ನನ್ನಿಂದ ದೂರ ಮಾಡುತ್ತಿದ್ದಾರೆ. ಈ ಮೂಲಕ ಕ್ರೂರತೆ ಮೆರೆಯುತ್ತಿದ್ದಾರೆ ಎಂದು ಆರೋಪಿಸಿ ದೆಹಲಿ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದ ಭಾರತೀಯ ಕ್ರಿಕೆಟಿಗ ಶಿಖರ್‌ ಧವನ್‌ ಅವರಿಗೆ ನ್ಯಾಯಾಲಯವು ವಿಚ್ಛೇದನ ನೀಡಿತ್ತು.

‘ಮಗ ಝೋರಾವರ್‌ನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಪತ್ನಿ ಐಶಾ, ಹಲವು ವರ್ಷಗಳಿಂದ ನನ್ನ ಮಗನನ್ನು ನನ್ನಿಂದ ದೂರ ಮಾಡಿ ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಅಲ್ಲದೇ ಆಸ್ಟ್ರೇಲಿಯಾದಲ್ಲಿ ತನಗೆ 3 ಆಸ್ತಿಗಳನ್ನು ಖರೀದಿಸಿ ಕೊಡುವಂತೆ ಆಕೆ ಒತ್ತಾಯಿಸಿದ್ದಾಳೆ. ಈಗಾಗಲೇ ತನ್ನ ಮೊದಲ ವಿಚ್ಛೇದಿತ ಪತಿಯಿಂದ ತನ್ನ 2 ಹೆಣ್ಣುಮಕ್ಕಳಿಗಾಗಿ ಐಶಾ ಬೆಂಬಲ ಪಡೆಯುತ್ತಿದ್ದಾಳೆ’ ಎಂದು ಧವನ್‌ ಆರೋಪಿಸಿದ್ದರು.

ನ್ಯಾಯಾಲಯದಲ್ಲಿ ಈ ಎಲ್ಲ ಆರೋಪಗಳು ಸುಳ್ಳು ಎಂಬುದನ್ನು ಸಾಬೀತುಪಡಿಸಲು ಐಶಾ ವಿಫಲರಾಗಿದ್ದರು. ಬಳಿಕ ಧವನ್‌ ಆರೋಪವನ್ನು ಸ್ವೀಕರಿಸಿದ ನ್ಯಾಯಾಲಯ ವಿಚ್ಚೇದನ ನೀಡಿದೆ, ಅಲ್ಲದೇ ಮಗನಿಗೆ ರಜೆ ಇದ್ದಾಗ ಧವನ್‌ ಬಳಿ ಭಾರತಕ್ಕೆ ಕಳುಹಿಸಬೇಕು. ತಂದೆ ಮಗ ಪೋನ್‌ ಕರೆ ಮತ್ತು ಸಂದೇಶ ರವಾನಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಧವನ್‌ ಪರ ಆದೇಶ ನೀಡಿತ್ತು.

ಧವನ್ ಆಗಸ್ಟ್ 2024 ರಲ್ಲಿ ಎಲ್ಲಾ ರೀತಿಯ ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು. ಅವರು ಕೊನೆಯದಾಗಿ 2024 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದರು. ಭಾರತದ ಪರವಾಗಿ ಕೊನೆಯದಾಗಿ ಡಿಸೆಂಬರ್ 2022 ರಲ್ಲಿ ಬಾಂಗ್ಲಾದೇಶದ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡಿದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕ್ರೈಸ್ಟ್‌ಚರ್ಚ್ ಪವಾಡ: ಕಿವೀಸ್ ಎದುರು ಐತಿಹಾಸಿಕ ಡ್ರಾ ಸಾಧಿಸಿದ ವೆಸ್ಟ್ ಇಂಡೀಸ್!
20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!