IPL 2025: ಪ್ಲೇ ಆಫ್‌ ಸಮೀಪಿಸುತ್ತಿದ್ದಂತೇ ಟೂರ್ನಿಯಿಂದ ಹೊರಬಿದ್ದ ಆಸೀಸ್ ಸ್ಟಾರ್ ಕ್ರಿಕೆಟಿಗ!

Published : May 02, 2025, 07:41 AM ISTUpdated : May 02, 2025, 07:43 AM IST
IPL 2025: ಪ್ಲೇ ಆಫ್‌ ಸಮೀಪಿಸುತ್ತಿದ್ದಂತೇ ಟೂರ್ನಿಯಿಂದ ಹೊರಬಿದ್ದ ಆಸೀಸ್ ಸ್ಟಾರ್ ಕ್ರಿಕೆಟಿಗ!

ಸಾರಾಂಶ

ಗಾಯದ ಸಮಸ್ಯೆಯಿಂದಾಗಿ ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್ 2025ರಿಂದ ಹೊರಬಿದ್ದಿದ್ದಾರೆ. ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಿಂದ ಪಂಜಾಬ್ ತಂಡಕ್ಕೆ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಹಿನ್ನಡೆಯಾಗಲಿದೆ. ಪಂಜಾಬ್ ತಂಡಕ್ಕೆ ಮ್ಯಾಕ್ಸ್‌ವೆಲ್‌ರಂತಹ ಆಟಗಾರನನ್ನು ಬದಲಿಸುವುದು ಕಷ್ಟ.

ಬೆಂಗಳೂರು: ಶ್ರೇಯಸ್ ಅಯ್ಯರ್ ನಾಯಕತ್ವ ಮತ್ತು ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಪಂಜಾಬ್ ಕಿಂಗ್ಸ್ ಈ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದೆ. ತಂಡ ಈಗ 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು ಉಳಿದ 4 ಪಂದ್ಯಗಳಲ್ಲಿ 2ರಲ್ಲಿ ಗೆಲ್ಲುವುದು ಅಗತ್ಯ. ಆದರೆ, ಅದಕ್ಕೂ ಮೊದಲು ಪಂಜಾಬ್‌ಗೆ ದೊಡ್ಡ ಶಾಕ್ ಎದುರಾಗಿದೆ, ಆಸ್ಟ್ರೇಲಿಯಾ ಮೂಲದ ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್, ಇದೀಗ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಾವಳಿಗಳಿಂದ ಅಧಿಕೃತವಾಗಿ ಹೊರಬಿದ್ದಿದ್ದಾರೆ. ಮ್ಯಾಕ್ಸಿ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ಪಂಜಾಬ್ ಫ್ರಾಂಚೈಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಗ್ಲೆನ್‌ ಮ್ಯಾಕ್ಸ್‌ವೆಲ್‌ಗೆ ಬೆರಳಿಗೆ ಮುರಿತವಾಗಿದ್ದು, ಇದರಿಂದಾಗಿ ಅವರು ಸೀಸನ್‌ನಿಂದ ಹೊರಬಿದ್ದಿದ್ದಾರೆ. ತಂಡದಲ್ಲಿ ಅವರ ಸ್ಥಾನಕ್ಕೆ ಬೇರೊಬ್ಬರು ಬರುತ್ತಾರೆ. ಆದರೆ, ಅವರಂತ ಆಟ ಬದಲಿಸುವ ಆಟಗಾರ ಬರುತ್ತಾರಾ ಎಂಬುದು ದೊಡ್ಡ ಪ್ರಶ್ನೆ. ಮ್ಯಾಕ್ಸ್‌ವೆಲ್ ಈ ಸೀಸನ್‌ನಲ್ಲಿ ಹೆಚ್ಚು ರನ್ ಗಳಿಸಿಲ್ಲ, ಹೆಚ್ಚು ವಿಕೆಟ್ ಪಡೆದಿಲ್ಲ. ಆದರೆ, ಅವರು ಯಾವಾಗ ಬೇಕಾದರೂ ಫಾರ್ಮ್‌ಗೆ ಬಂದು ಎದುರಾಳಿಗಳನ್ನು ಧೂಳೀಪಟ ಮಾಡಬಲ್ಲರು. ಪ್ರೀತಿ ಜಿಂಟಾ ಅವರನ್ನು ಮೆಗಾ ಹರಾಜಿನಲ್ಲಿ 4.20 ಕೋಟಿ ರೂ.ಗೆ ಖರೀದಿಸಿದ್ದರು. ಅವರ ಅನುಪಸ್ಥಿತಿಯಿಂದ ತಂಡಕ್ಕೆ ದೊಡ್ಡ ಹಿನ್ನಡೆಯಾಗುವ ಸಾಧ್ಯತೆಯಿದೆ.

ಕಳೆದ ಮೂರು ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಿದ್ದ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಈ ಬಾರಿಯ ಮೆಗಾ ಹರಾಜಿಗೂ ಮುನ್ನ ತಂಡದಿಂದ ರಿಲೀಸ್ ಮಾಡಿತ್ತು. ಬಳಿಕ ಪಂಜಾಬ್ ಫ್ರಾಂಚೈಸಿ ಮ್ಯಾಕ್ಸ್‌ವೆಲ್ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು. ಆದರೆ ಪಂಜಾಬ್ ಪರ ಮ್ಯಾಕ್ಸಿ 6 ಇನ್ನಿಂಗ್ಸ್‌ಗಳನ್ನಾಡಿ ಕೇವಲ 48 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ಇನ್ನು ಟೂರ್ನಿ ಆರಂಭಕ್ಕೂ ಕಿವೀಸ್ ಅನುಭವಿ ವೇಗಿ ಲಾಕಿ ಫರ್ಗ್ಯೂಸನ್ ಫಿಟ್‌ನೆಸ್ ಸಮಸ್ಯೆಯಿಂದ ಐಪಿಎಲ್‌ ಟೂರ್ನಿಯಿಂದ ಹೊರಬಿದ್ದಿದ್ದರು. ಇದು ಪಂಜಾಬ್ ತಂಡಕ್ಕೆ ದೊಡ್ಡ ನಷ್ಟವಾಗಿ ಪರಿಣಮಿಸಿತ್ತು.

ಇನ್ನು ಗ್ಲೆನ್ ಮ್ಯಾಕ್ಸ್‌ವೆಲ್ ಅನುಪಸ್ಥಿತಿಯಿಂದ ಪಂಜಾಬ್‌ಗೆ ಈ ಮೂರು  ವಿಚಾರದಲ್ಲಿ ನಷ್ಟವಾಗುವ ಸಾಧ್ಯತೆಯಿದೆ: 

1. ಮ್ಯಾಕ್ಸ್‌ವೆಲ್‌ರಂತಹ ಫಿನಿಷರ್ ಸಿಗುವುದು ಕಷ್ಟ
ಐಪಿಎಲ್ 2025ರಲ್ಲಿ ಮ್ಯಾಕ್ಸ್‌ವೆಲ್ 6 ಪಂದ್ಯಗಳಲ್ಲಿ ಕೇವಲ 48 ರನ್ ಗಳಿಸಿದ್ದಾರೆ. ಅವರು ತಂಡದಿಂದ ಹೊರಬಿದ್ದಿದ್ದು ಒಳ್ಳೆಯದೇ ಎಂದು ನಿಮಗೆ ಅನಿಸಬಹುದು. ಆದರೆ, ಹಾಗಲ್ಲ. ಮ್ಯಾಕ್ಸ್‌ವೆಲ್ ಆಟ ಬದಲಿಸುವ ಆಟಗಾರ. ಅವರು ಯಾವಾಗ ಬೇಕಾದರೂ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ ಎದುರಾಳಿ ಬೌಲರ್‌ಗಳನ್ನು ಚೆಲ್ಲಾಪಿಲ್ಲಿ ಮಾಡಬಲ್ಲರು. ಅವರ ಅನುಪಸ್ಥಿತಿ ಪಂಜಾಬ್‌ಗೆ ದೊಡ್ಡ ನಷ್ಟ. ಮುಂಬರುವ ಪ್ಲೇಆಫ್ ಪಂದ್ಯಗಳಲ್ಲಿ ಅವರು ಮ್ಯಾಚ್ ವಿನ್ನರ್ ಆಗಬಲ್ಲರು.

2. ಬೌಲಿಂಗ್‌ನಲ್ಲಿ ದೊಡ್ಡ ಬ್ಯಾಟ್ಸ್‌ಮನ್‌ಗಳ ವಿಕೆಟ್
ಮ್ಯಾಕ್ಸ್‌ವೆಲ್ ಬ್ಯಾಟಿಂಗ್ ಮಾತ್ರವಲ್ಲ, ಬೌಲಿಂಗ್‌ನಲ್ಲೂ ವಿಕೆಟ್ ಪಡೆಯಬಲ್ಲರು. ಅವರು ಪವರ್‌ಪ್ಲೇಯಲ್ಲಿ ಬೌಲಿಂಗ್ ಮಾಡಬಲ್ಲ ಸ್ಪಿನ್ ಬೌಲರ್. ಅವರಂತಹ ದಿಟ್ಟ ಆಟಗಾರ ಯಾವಾಗ ಬೇಕಾದರೂ ಪಂದ್ಯದ ತಿರುವು ಬದಲಿಸಬಲ್ಲರು. ಮ್ಯಾಕ್ಸ್‌ವೆಲ್ ಇದ್ದಿದ್ದರೆ ಶ್ರೇಯಸ್‌ಗೆ ಹೆಚ್ಚುವರಿ ಬೌಲಿಂಗ್ ಆಯ್ಕೆ ಇರುತ್ತಿತ್ತು.

3. ಫೀಲ್ಡಿಂಗ್‌ನಲ್ಲಿ ಪ್ರಭಾವ ಬೀರುತ್ತಾರೆ
ಬ್ಯಾಟಿಂಗ್ ಮತ್ತು ಬೌಲಿಂಗ್ ಜೊತೆಗೆ ಮ್ಯಾಕ್ಸ್‌ವೆಲ್ ಫೀಲ್ಡಿಂಗ್‌ನಲ್ಲೂ ಅದ್ಭುತ. ಮೈದಾನದಲ್ಲಿ ಚಿರತೆಯಂತೆ ಚುರುಕಾಗಿರುವ ಮ್ಯಾಕ್ಸ್‌ವೆಲ್ ಯಾವುದೇ ಅದ್ಭುತ ಕ್ಯಾಚ್ ಅಥವಾ ರನ್ ಔಟ್ ಮಾಡಬಲ್ಲರು. ಟಿ20ಯಲ್ಲಿ ಒಂದು ಉತ್ತಮ ಕ್ಯಾಚ್ ಅಥವಾ ರನ್ ಔಟ್ ಪಂದ್ಯದ ಫಲಿತಾಂಶವನ್ನೇ ಬದಲಿಸಬಲ್ಲದು. ಮ್ಯಾಕ್ಸ್‌ವೆಲ್ ಅತ್ಯುತ್ತಮ ಫೀಲ್ಡರ್. ಅವರನ್ನು ಬದಲಿಸುವುದು ಪಂಜಾಬ್‌ಗೆ ಸುಲಭವಲ್ಲ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!