
ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಎಸ್.ಶ್ರೀಶಾಂತ್ ಅವರ ತಂದೆ ವಿ.ಶಾಂತಕುಮಾರನ್ ನಾಯರ್ ನಿಧನರಾಗಿದ್ದಾರೆ. ಅವರಿಗೆ 89 ವರ್ಷವಾಗಿತ್ತು. ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಎರ್ನಾಕುಲಂನ ಲಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಶುಕ್ರವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ ಎಂದು ವಾರದಿಯಾಗಿದೆ.
ವಿ.ಶಾಂತಕುಮಾರನ್ ನಾಯರ್ ಅವರು ಪತ್ನಿ ಟಿ.ಎನ್.ಸಾವಿತ್ರಿ ದೇವಿ, ಮಕ್ಕಳಾದ ದೀಪು, ನಿವೇದಿತಾ, ದಿವ್ಯಾ ಹಾಗೂ ಶ್ರೀಶಾಂತ್ ಅವರನ್ನು ಅಗಲಿದ್ದಾರೆ. ತಂದೆಯನ್ನು ಕಳೆದುಕೊಂಡ ಶ್ರೀಶಾಂತ್‌ಗೆ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇನ್ನು ವಿ.ಶಾಂತಕುಮಾರನ್ ಅವರ ಪಾರ್ಥಿವ ಶರೀರವನ್ನು ಕೊಟ್ಟಮಂಗಲಂನಲ್ಲಿರುವ ಅವರ ಪೂರ್ವಜನರ ನಿವಾಸಕ್ಕೆ ಕೊಂಡೊಯ್ಯಲು ನಿರ್ಧರಿಸಲಾಗಿದೆ.
ಕೆಲವು ವರದಿಗಳ ಪ್ರಕಾರ, ಶ್ರೀಶಾಂತ್ ಕುಟುಂಬದ ಕೆಲವು ಸದಸ್ಯರು ವಿದೇಶದಲ್ಲಿದ್ದಾರೆ. ಅವರು ಕೇರಳಕ್ಕೆ ಹಿಂದಿರುಗಿದ ನಂತರ ಕೊಟ್ಟಮಂಗಲಂನಲ್ಲಿರುವ ಪೂರ್ವಜರ ಮನೆಗೆ ಮೃತದೇಹ ಕೊಂಡೊಯ್ಯಲಿದ್ದಾರೆ ಎಂದು ಹೇಳಲಾಗಿದೆ. ಇಂದು ಸಂಜೆ ವೇಳೆಗೆ ಅಂತ್ಯಕ್ರಿಯೆ ನೆರವೇರಲಿದೆ. ವಿ.ಶಾಂತಕುಮಾರನ್ ನಾಯರ್ ಅವರು ಭಾರತೀಯ ಜೀವ ವಿಮಾ ನಿಗಮದಲ್ಲಿ ಪ್ರಾದೇಶಿಕ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದರು.
ತಂದೆಯನ್ನು ಕಳೆದುಕೊಂಡ ಶ್ರೀಶಾಂತ್ ಅವರಿಗೆ ಕ್ರಿಕೆಟ್ ದಿಗ್ಗಜರು ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 43 ವರ್ಷದ ಶ್ರೀಶಾಂತ್ 2022 ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದಾರೆ. ಅವರು ಭಾರತ ಪರ 27 ಟೆಸ್ಟ್, 53 ಏಕದಿನ ಮತ್ತು 10 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಕ್ರಮವಾಗಿ 87, 75 ಮತ್ತು 7 ವಿಕೆಟ್‌ಗಳನ್ನು ಕಬಳಿಸಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಎಸ್. ಶ್ರೀಶಾಂತ್ ಐಪಿಎಲ್ ಸಮಯದಲ್ಲಿ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದರು. 2015 ರಲ್ಲಿ ಕೆಳ ನ್ಯಾಯಾಲಯವು ಅವರನ್ನು ಖುಲಾಸೆಗೊಳಿಸಿದರೂ ಅಂತರರಾಷ್ಟ್ರೀಯ ಕ್ರಿಕೆಟ್ ಅಥವಾ ಐಪಿಎಲ್‌ಗೆ ಮರಳಲು ಸಾಧ್ಯವಾಗಲಿಲ್ಲ.
STORY | Former Indian cricketer Sreesanth’s father dies at 89
V Santhakumaran Nair, father of former Indian cricketer S Sreesanth, died at a private hospital here, family sources said on Saturday. He was 89.
He was undergoing treatment at Lisie Hospital here and died at 9.45 pm on Friday, family sources said.
READ: https://t.co/jfDMoUpnkL
— Press Trust of India (@PTI_News) September 12, 2026
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.