ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!

Published : Apr 09, 2021, 10:15 PM IST
ಇಂದಿರಾನಗರದ ಗೂಂಡಾ ನಾನು; ಹೊಡೆದಾಕ್ಬಿಡ್ತೀನಿ; ದ್ರಾವಿಡ್ ಜಾಹೀರಾತು ವಿಡಿಯೋ ವೈರಲ್!

ಸಾರಾಂಶ

ಯಾರೇ ಸ್ಲೆಡ್ಜ್ ಮಾಡಿದರೂ, ಮಾತಿನಲ್ಲಿ, ನೋಟದಲ್ಲಿ ತಿರುಗೇಟು ನೀಡುವ ಸ್ವಭಾವ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್‌ ಸ್ವಭಾವ ಅಲ್ಲ. ಶಾಂತಸ್ವರೂಪಿಯಾಗಿರುವ ರಾಹುಲ್ ದ್ರಾವಿಡ್ ಕೋಪದಿಂದ ಎಗರಾಡಿದ, ಬೈಗಳು ಶಬ್ದ ಪ್ರಯೋಗ ಮಾಡಿದ ಉದಾಹರಣೆ ಇಲ್ಲ. ಆದರೆ ಇದೆಲ್ಲಕ್ಕಿಂತ ಭಿನ್ನ ರಾಹುಲ್ ದ್ರಾವಿಡ್ ವಿಡಿಯೋ ಇದೀಗ ವೈರಲ್ ಆಗಿದೆ.

ಬೆಂಗಳೂರು(ಏ.09): ಇದುವರೆಗೂ ನೋಡಿದರ, ಕೇಳಿದರದ ರಾಹುಲ್ ದಾವಿಡ್ ಇದೀಗ ಪ್ರತ್ಯಕ್ಷರಾಗಿದ್ದಾರೆ.  ಕ್ರಿಕೆಟ್‌ನಲ್ಲಿ ಸಕ್ರಿಯವಾಗಿರುವಾಗ, ವಿದಾಯ ಹೇಳಿದ ಬಳಿಕ, ಕೋಚ್ ಆಗಿ ಸೇವೆ ಸಲ್ಲಿಸುವಾಗ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಯಾವತ್ತೂ ತಾಳ್ಮೆ ಕಳೆದುಕೊಂಡವರಲ್ಲ. ಆದರೆ ಈ ವಿಡಿಯೋದಲ್ಲಿ ರಾಹುಲ್ ದ್ರಾವಿಡ್ ಎಗರಾಡಿದ,  ಕನ್ನಡದಲ್ಲಿ ಹೊಡೆದಾಕ್ಬೀಡ್ತೀನಿ ಎಂದ, ಇಂದಿರಾನಗರದ ಗೂಂಡಾ ನಾನು ಎಂದು ಪದ ಪ್ರಯೋಗಳು, ಕೋಪಗೊಂಡ ಕ್ರಿಕೆಟಿಗನ ಕಾಣಬಹುದು.

ಪೋಷಕರು ನೋಡಿದ ಹುಡುಗಿಯನ್ನು ಮದ್ವೆಯಾದ ಕ್ರಿಕೆಟಿಗರು ಇವರು.

ಇದು ಜಾಹೀರಾತು ವಿಡಿಯೋ. ಕ್ರಿಕೆಟ್ ಕಾರ್ಡ್ ಜಾಹೀರಾತು ಇದಾಗಿದೆ. ಆದರೆ ರಾಹುಲ್ ದ್ರಾವಿಡ್ ಅವರ ವ್ಯಕ್ತಿತ್ವಕ್ಕೂ ಇಲ್ಲಿ ಚಿತ್ರಿಸಲಾಗಿರುವ ಸಹನೆ ಕಳೆದುಕೊಂಡ ವ್ಯಕ್ತಿತ್ವಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಇದೇ ಕಾರಣಕ್ಕೆ ಈ ಜಾಹೀರಾತು ಹಾಗೂ ರಾಹುಲ್ ದ್ರಾವಿಡ್ ಅಭಿಯನಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಬೆಂಗಳೂರಿನ ಟ್ರಾಫಿಕ್‌ನಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಿರುವ ರಾಹುಲ್ ದ್ರಾವಿಡ್, ಸುಖಾಸುಮ್ಮನೆ ಹಾರ್ನ್ ಹೊಡೆಯುವರ ವಿರುದ್ಧ ತಾಳ್ಮೆ ಕಳೆದುಕೊಂಡಿದ್ದಾರೆ. ಹೊಡೆದಾಕ್ಬಿಡ್ತೀನಿ, ಇಂದಿರಾ ನಗರದ ಗೂಂಡಾ ನಾನು ಎಂದು ಕಿರುಚಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಸ್ವತ ವಿರಾಟ್ ಕೊಹ್ಲಿ ಈ ಕುರಿತು ಟ್ವೀಟ್ ಮಾಡಿದ್ದು, ದ್ರಾವಿದ್ ಅವರ ಈ ಮುಖ ನೋಡೇ ಇಲ್ಲ ಎಂದಿದ್ದಾರೆ.

 

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕರ್ನಾಟಕದ ದೊಡ್ಡ ಗಣೇಶ ಕೂಡ ದ್ರಾವಿಡ್ ಹಳೆ ಘಟನೆಯೊಂದನ್ನು ನೆನಪಿಸಿದ್ದಾರೆ. ದ್ರಾವಿಡ್ ರೀತಿಯ ಕೋಪ ನಾನು ಕರ್ನಾಟಕ ರಣಜಿ ತಂಡದ ಡ್ರೆಸ್ಸಿಂ ರೂಮ್‌ನಲ್ಲಿ ನೋಡಿದ್ದೇನೆ. ಆ ಬಾರಿ ದ್ರಾವಿಡ್ ಕೋಪಕ್ಕೆ ನಾನು ಗುರಿಯಾಗಿದ್ದೆ. ಇನ್ನು ಒಂದು ರನ್ ಇದೆ ಕಣೋ ಎಂದು ದೊಡ್ಡ ಗಣೇಶ ಟ್ವೀಟ್ ಮಾಡಿದ್ದಾರೆ.

 

ಕ್ರಿಕೆಟಿಗರು, ಅಭಿಮಾನಿಗಳು ದ್ರಾವಿಡ್ ಈ ರೀತಿ ಕಿರುಚಾಡುತ್ತಿರುವುದುನ್ನು ಇದೇ ಮೊದಲ ಬಾರಿಗೆ ನೋಡದ್ದೇವೆ. ದ್ರಾವಿಡ್ ಹೊಸ ಮುಖಕ್ಕೆ ಸಲಾಂ ಹೇಳಿದ್ದಾರೆ.


 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಿ20 ವಿಶ್ವಕಪ್ ಟೂರ್ನಿಗೂ ಮೊದಲೇ ಭಾರತ ತಂಡದಲ್ಲಿ ದೊಡ್ಡ ಪ್ರಯೋಗದ ಸುಳಿವು ಬಿಚ್ಚಿಟ್ಟ ಸೂರ್ಯಕುಮಾರ್ ಯಾದವ್!
WPL 2026: ಹೊಸದಾಗಿ ಕ್ಯೂಟ್ ಫೋಟ್ ಶೇರ್ ಮಾಡಿದ RCB ಬ್ಯೂಟಿ ಲಾರೆನ್ ಬೆಲ್!