ಬೈಲಿ ಈಗ ಆಸ್ಪ್ರೇ​ಲಿಯಾ ಕ್ರಿಕೆಟ್‌ ಟೀಂನ ಆಯ್ಕೆಗಾರ!

By Web Desk  |  First Published Nov 28, 2019, 1:46 PM IST

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಯ್ಕೆಗಾರರಾಗಿ ಮಾಜಿ ಕ್ರಿಕೆಟಿಗ ಜಾರ್ಜ್ ಬೈಲಿ ನೇಮಕವಾಗಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...


ಸಿಡ್ನಿ(ನ.28): ಮಾಜಿ ನಾಯಕ ಜಾರ್ಜ್ ಬೈಲಿ, ಆಸ್ಟೇಲಿಯಾ ಕ್ರಿಕೆಟ್‌ ತಂಡದ ಆಯ್ಕೆಗಾರನಾಗಿ ಬುಧವಾರ ನೇಮಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಗ್ರೇಗ್‌ ಚಾಪೆಲ್‌ ನಿವೃತ್ತಿಯಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಬೈಲಿ ನೇಮಕವಾಗಿದ್ದಾರೆ. 

George Bailey will be joining the National Selection Panel for the Australian Men’s Cricket Team at the conclusion of the KFC Big Bash League.

MORE I https://t.co/52hv3wvu9u pic.twitter.com/3POQAe6TQv

— Cricket Australia (@CricketAus)

ಸಂಜು ಸ್ಯಾಮ್ಸನ್‌ಗೆ ಸ್ಥಾನ: ಕೊನೆಗೂ ಖುಷಿಯಾದ ಫ್ಯಾನ್ಸ್..!

Latest Videos

undefined

ಬೈಲಿ ಅವರನ್ನು ಆಯ್ಕೆ ಸಮಿತಿಗೆ ಸೇರಿಸಲು ಆಸ್ಪ್ರೇಲಿಯಾ ಕ್ರಿಕೆಟ್‌ ಮುಖ್ಯಸ್ಥ ಟ್ರೆವರ್‌ ಹಾನ್ಸ್‌ ಮತ್ತು ಕೋಚ್‌ ಜಸ್ಟಿನ್‌ ಲ್ಯಾಂಗರ್‌ ಹೆಚ್ಚಿನ ಆಸಕ್ತಿ ಹೊಂದಿದ್ದರು. 37 ವರ್ಷ ವಯಸ್ಸಿನ ಬೈಲಿ, ಆಸ್ಪ್ರೇಲಿಯಾ ಪರ 5 ಟೆಸ್ಟ್‌, 90 ಏಕದಿನ ಹಾಗೂ 30 ಟಿ20 ಪಂದ್ಯಗಳನ್ನಾಡಿದ್ದಾರೆ. ಕಳೆದ ತಿಂಗ​ಳು ಸಹ ಅವರು ಪ್ರಥಮ ದರ್ಜೆ ಟೂರ್ನಿ​ಯಲ್ಲಿ ಆಡಿ​ದ್ದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗಂಭೀರ್ ಸ್ಟ್ಯಾಂಡ್ ಅನಾವರಣ!

ಜಾರ್ಜ್ ಬೈಲಿ ಒಬ್ಬ ಪ್ರತಿಭಾನ್ವಿತ ನಾಯಕನಾಗಿದ್ದು, ಎಲ್ಲರಿಗೂ ಅವರ ಮೇಲೆ ಗೌರವವಿದೆ. ಹೊಸ ಪ್ರತಿಭೆಗಳನ್ನು ಹುಡುಕಿಕೊಡುವ ವಿಶ್ವಾಸವಿದೆ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮುಖ್ಯಸ್ಥ ಬೆನ್ ಓಲಿವರ್ ತಿಳಿಸಿದ್ದಾರೆ.
 

click me!