ಯಾರಾದ್ರೂ ನಾಯಿಗಳನ್ನು, ಬಾವುಲಿಗಳನ್ನು ತಿನ್ತಾರಾ..? ಚೀನಿಯರ ಮೇಲೆ ಕಿಡಿಕಾರಿದ ಅಖ್ತರ್.!

Suvarna News   | Asianet News
Published : Mar 15, 2020, 08:40 PM IST
ಯಾರಾದ್ರೂ ನಾಯಿಗಳನ್ನು, ಬಾವುಲಿಗಳನ್ನು ತಿನ್ತಾರಾ..? ಚೀನಿಯರ ಮೇಲೆ ಕಿಡಿಕಾರಿದ ಅಖ್ತರ್.!

ಸಾರಾಂಶ

ಕೊರೋನಾ ವೈರಸ್ ಮೂಲಸ್ಥಾನ ಎನಿಸಿರುವ ಚೀನಾದ ಮೇಲೆ ಪಾಕ್ ಮಾಜಿ ವೇಗಿ ಶೊಯೆಬ್ ಅಖ್ತರ್ ಕಿಡಿಕಾರಿದ್ದಾರೆ. ಇದರ ಜತೆಗೆ ಚೀನಿಯರ ಆಹಾರ ಪದ್ದತಿಯನ್ನು ವ್ಯಂಗ್ಯ ಮಾಡಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಲಾಹೋರ್(ಮಾ.15): ಕೊರೋನಾ ವೈರಸ್ ಈಗಾಗಲೇ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಒಟ್ಟಾರೆ ಐದುವರೆ ಸಾವಿರಕ್ಕೂ ಅಧಿಕ ಮಂದಿಯ ಬಲಿ ಪಡೆದಿದೆ. ಮಾನವ ಕುಲಕ್ಕೆ ಕಂಠಕವಾದ ಕೊರೋನಾ ವೈರಸ್‌ಗೆ ಕಾರಣವಾದ ಚೀನಾದ ಮೇಲೆ ಪಾಕಿಸ್ತಾನ ಮಾಜಿ ವೇಗಿ ಶೊಯೆಬ್ ಅಖ್ತರ್ ಕಿಡಿಕಾರಿದ್ದಾರೆ.

ಯಾಕೆ ಅವರು ಬಾವುಲಿಗಳನ್ನು, ನಾಯಿಗಳನ್ನು ತಿನ್ನುತ್ತಾರೆ ಎಂದು ನನಗಂತೂ ಅರ್ಥವಾಗುತ್ತಿಲ್ಲ. ಬಾವುಲಿಗಳ ರಕ್ತ ಹಾಗೂ ಮೂತ್ರವನ್ನು ಸೇವಿಸುವ ಮೂಲಕ ನೀವ್ಯಾಕೆ ವೈರಸ್ ಹರಡುತಿದ್ದೀರಿ ಎಂದು ಚೀನಿಯರ ಮೇಲೆ ಅಖ್ತರ್ ಬೌನ್ಸರ್ ಎಸೆದಿದ್ದಾರೆ.

ಕಳಂಕಿತ ಆಟ​ಗಾ​ರರ ಜತೆ ಆಡಿದ್ದೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮತ್ತೊಬ್ಬ ಪಾಕ್ ಕ್ರಿಕೆಟಿಗ..!

ತಮ್ಮದೇ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಖ್ತರ್, ಇಡೀ ಜಗತ್ತೇ ಸಂಕಷ್ಟದಲ್ಲಿದೆ. ಪ್ರವಾಸೋದ್ಯಮ ಹಾಗೂ ಆರ್ಥಿಕತೆಯ ಮೇಲೆ ಕೊರೋನಾ ವೈರಸ್ ಬಲವಾದ ಪೆಟ್ಟು ನೀಡಿದೆ. ನಾನು ಚೀನಿಯರ ವಿರುದ್ಧವಿಲ್ಲ. ಆದರೆ ಅವರು ಪ್ರಾಣಿಗಳನ್ನು ಬಳಸಿಕೊಳ್ಳುವುದನ್ನು ನಾನು ವಿರೋಧಿಸುತ್ತೇನೆ ಎಂದಿದ್ದಾರೆ.

ಕೊರೋನಾ ವೈರಸ್ ಚೀನಾದ ವುಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡಿತ್ತು. ಇದೀಗ ಸುಮಾರು ಕೋವಿಡ್ 19 ವೈರಸ್ ನೂರಕ್ಕೂ ಹೆಚ್ಚು ದೇಶಗಳಲ್ಲಿ ಹಬ್ಬಿದೆ. ಇದುವರೆಗೂ 1,30,000 ಸಾವಿರಕ್ಕೂ ಅಧಿಕ ಮಂದಿಗೆ ತಗುಲಿದ್ದು, ಪಾಕಿಸ್ತಾನದಲ್ಲಿ 28 ಮಂದಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

Breaking: ಕರ್ನಾಟಕದಲ್ಲಿ ಮತ್ತೊಂದು ಕೊರೋನಾ ಕೇಸ್ ಪತ್ತೆ

ಅಖ್ತರ್ ಇದೇ ವೇಳೆ ಪಿಎಸ್‌ಎಲ್ ಹಾಗೂ ಐಪಿಎಲ್‌ ಬಗ್ಗೆಯೂ ಮಾತನಾಡಿದ್ದಾರೆ. ಅಖ್ತರ್ ಏನಂದ್ರು ಅನ್ನೋದನ್ನು ನೀವೇ ನೋಡಿ..

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? 3 ವರ್ಷ ಹಿಂದೆ ಹೇಳಿದ್ದ ಟಿಪ್ಸ್
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯಕ್ಕೂ ಮೊದಲು ಗೊಂದಲಕ್ಕೆ ಸಿಲುಕಿದ ಗೌತಮ್ ಗಂಭೀರ್!