ಮಾಜಿ ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ಔಟ್!

By Suvarna News  |  First Published Jul 1, 2023, 8:55 PM IST

ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ರಂಗು ಕೊಂಚ ಕಡಿಮೆಯಾದರೂ ಅಚ್ಚರಿ ಇಲ್ಲ. ಕಾರಣ ಮಹತ್ವದ ಟೂರ್ನಿಗೆ ಅರ್ಹತೆ ಪಡೆಯಲು ವೆಸ್ಟ್ ಇಂಡೀಸ್ ವಿಫಲವಾಗಿದೆ.
 


ದುಬೈ(ಜು.01) ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ಎರಡು ಬಾರಿ ಚಾಂಪಿಯನ್. ಮೈದಾನದಲ್ಲಿ ರೋಚಕ ಹೋರಾಟ ಮಾತ್ರವಲ್ಲ, ಸ್ಲೆಡ್ಜಿಂಗ್, ತಮಾಷೆ, ಡ್ಯಾನ್ಸ್, ಸಂಭ್ರಮ, ಪಾರ್ಟಿಯಲ್ಲೂ ವೆಸ್ಟ್ ಇಂಡೀಸ್ ಎಲ್ಲರಿಗಿಂತ ಒಂದು ಕೈ ಮಂದು. ಆದರೆ ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ ತಂಡ ಹೊರಬಿದ್ದಿದೆ. ಅರ್ಹತಾ ಸುತ್ತಿನಲ್ಲಿ ಕಳಪೆ ಪ್ರದರ್ಶನ ನೀಡಿರುವ ವೆಸ್ಟ್ ಇಂಡೀಸ್ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ಹರಾರೆಯಲ್ಲಿ ನಡೆದ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್  ಹಂತದ ಪಂದ್ಯದಲ್ಲಿ ಸ್ಕಾಟ್‌ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಹೀನಾಯ ಸೋಲು ಕಂಡಿದೆ. ಈ ಮೂಲಕ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಿಂದ ವೆಸ್ಟ್ ಇಂಡೀಸ್ ಹೊರಬಿದ್ದಿದೆ. ಸ್ಕಾಟ್‌ಲೆಂಡ್ ವಿರದ್ದ ಪಂದ್ಯ ವೆಸ್ಟ್ ಇಂಡೀಸ್ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದಲ್ಲಿ ಗೆಲುವು ವಿಂಡೀಸ್ ತಂಡದ ಏಕದಿನ ವಿಶ್ವಕಪ್ ಕನಸನ್ನು ಜೀವಂತವಾಗಿರಿಸುತ್ತಿತ್ತು. ಆದರೆ ಎರಡು ಬಾರಿ ಚಾಂಪಿಯನ್ ವೆಸ್ಟ್ ಇಂಡೀಸ್ ಇದೀಗ ಏಕದಿನ ಟೂರ್ನಿಯಿಂದ ಹೊರಗುಳಿಯಲಿದೆ.

Latest Videos

undefined

 

ಮೊದಲ ಓವರ್‌ನಲ್ಲೇ 4 ವಿಕೆಟ್‌..! ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಶಾಹೀನ್ ಅಫ್ರಿದಿ ಸೈಲೆಂಟ್ ವಾರ್ನಿಂಗ್‌..!

1975 ಹಾಗೂ 1979ರಲ್ಲಿ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಚಾಂಪಿಯನ್ ಆಗಿ ಹೊರಹೊಮ್ಮಿರುವ ವೆಸ್ಟ್ ಇಂಡೀಸ್ ಬಳಿಕ ಅಧಿಪತ್ಯ ಸಾಧಿಸುವಲ್ಲಿ ವಿಫಲವಾಗಿದೆ. ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸ್ಕಾಟ್‌ಲೆಂಡ್ ಏಕದಿನ ಮಾದರಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿದೆ. ಅರ್ಹತಾ ಸುತ್ತಿನಲ್ಲಿ ತಲಾ 6 ಅಂಕ ಪಡೆದಿರುವ ಶ್ರೀಲಂಕಾ ಹಾಗೂ ಜಿಂಬಾಬ್ವೆ ತಂಡ ಬಹುತೇಕ ಅರ್ಹತೆ ಪಡೆದಿದೆ. ಆದರೆ ವೆಸ್ಟ್ ಇಂಡೀಸ್, ನೆದರ್ಲೆಂಡ್, ಒಮನ್ ತಂಡಗಳು ಟೂರ್ನಿಯಿಂದ ಹೊರಬಿದ್ದಿದೆ. 

ಅರ್ಹತಾ ಸುತ್ತಿನಲ್ಲಿ ವೆಸ್ಟ್ ಇಂಡೀಸ್ ಕಳಪೆ ಪ್ರದರ್ಶನ ನೀಡಿದೆ. ಸ್ಕಾಟ್‌ಲೆಂಡ್ ವಿರುದ್ಧ 7 ವಿಕೆಟ್ ಸೋಲು ಅನುಭಿವಿಸಿದ ವೆಸ್ಟ್ ಇಂಡೀಸ್, ನೆದರ್ಲೆಂಡ್ ವಿರುದ್ಧ ಸೂಪರ್ ಓವರ್ ಹೋರಾಟದಲ್ಲಿ ಸೋಲು ಕಂಡಿತು. ಇನ್ನು ಜಿಂಬಾಬ್ವೆ ವಿರುದ್ದ 35 ರನ್ ಸೋಲು ಅನುಭಿಸಿತ್ತು. ಅರ್ಹತಾ ಸುತ್ತಿನಲ್ಲಿನ ಕಳಪೆ ಪ್ರದರ್ಶನ ವಿಂಡೀಸ್ ಏಕದಿನ ವಿಶ್ವಕಪ್ ಟೂರ್ನಿಗೆ ಅರ್ಹತೆ ಪಡೆಯಲು ವಿಫಲವಾಗಿದೆ.

ICC ODI World Cup 2023: ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂಗೆ ಹೊಸ ಸ್ಪರ್ಶ.

ಸ್ಕಾಟ್‌ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ 181 ರನ್ ಸಿಡಿಸಿತ್ತು. ಆದರೆ ಸ್ಕಾಟ್‍‌ಲೆಂಡ್ 43.3 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. 

ಭಾರತ, ನ್ಯೂಜಿ​ಲೆಂಡ್‌, ಇಂಗ್ಲೆಂಡ್‌, ಬಾಂಗ್ಲಾ​ದೇಶ, ಪಾಕಿ​ಸ್ತಾನ, ಆಸ್ಪ್ರೇಲಿ​ಯಾ, ಅಷ್ಘಾ​ನಿ​ಸ್ತಾನ ಹಾಗೂ ದ.ಆ​ಫ್ರಿಕಾ ತಂಡಗಳು ನೇರ​ವಾಗಿ ವಿಶ್ವ​ಕಪ್‌ ಪ್ರಧಾನ ಸುತ್ತಿಗೇರಿದೆ.

click me!