
ಸಿಡ್ನಿ(ಮಾ.14): ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಕೊರೋನಾ ವೈರಸ್ ಪರಿಣಾಮ ಅಭಿಮಾನಿಗಳಿಗೆ ನಿರ್ಬಂದ ವಿದಿಸಲಾಗಿತ್ತು. ಅಭಿಮಾನಿಗಳಿಲ್ಲದೆ ಖಾಲಿ ಕ್ರೀಡಾಂಗಣದಲ್ಲಿ ಪಂದ್ಯ ನಡದಿದೆ. ಈ ಪಂದ್ಯಕ್ಕೆ ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿರಲಿಲ್ಲ.
ಇದನ್ನೂ ಓದಿ: ಭಾರತ-ಸೌತ್ ಆಫ್ರಿಕಾ ಏಕದಿನ ಸರಣಿ ರದ್ದು, ಕೊರೋನಾಗೆ ಬಲಿಯಾಯ್ತು ಕ್ರಿಕೆಟ್!
ಖಾಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಪ್ರತಿ ಬಾರಿ ಚೆಂಡು ಪ್ರೇಕ್ಷಕರ ಗ್ಯಾಲರಿಗೆ ಹೋದಾಗ, ಫೀಲ್ಡರ್‌ಗಳು ಚೆಂಡನ್ನು ಹುಡುಕಲು ಪರದಾಡಿದರು. ಆ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಫೀಲ್ಡರ‌್‌ಗಳೇ ಬ್ಯಾರಿಕೇಡ್ ಜಿಗಿದು ಪ್ರೇಕ್ಷಕರ ಗ್ಯಾಲರಿ ಸೀಟಿನ ಅಡಿಯಲ್ಲಿ ಬಿದ್ದ ಚೆಂಡನ್ನು ಹುಡುಕಿ ತೆಗೆಯುವ ಸಾಹಸ ಮಾಡಬೇಕಾಯ್ತು.
ಇದನ್ನೂ ಓದಿ: ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ
ಕಿವೀಸ್ ವಿರುದ್ಧ ಆಸೀಸ್‌ಗೆ 71 ರನ್ ಜಯ
ವೇಗಿ ಪ್ಯಾಟ್ ಕಮಿನ್ಸ್ (3-25), ಮಿಚೆಲ್ ಮಾಷ್‌ರ್ (3-29) ಮಾರಕ ದಾಳಿ ನೆರವಿನಿಂದ ಆಸ್ಪ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 71 ರನ್‌ಗಳ ಗೆಲುವು ಸಾಧಿಸಿದೆ. ಈ ಜಯದೊಂದಿಗೆ 3 ಪಂದ್ಯಗಳ ಸರಣಿಯಲ್ಲಿ ಆಸ್ಪ್ರೇಲಿಯಾ 1-0 ಮುನ್ನಡೆ ಪಡೆದಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆಸ್ಪ್ರೇಲಿಯಾ ನೀಡಿದ 259 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 41 ಓವರಲ್ಲಿ 187 ರನ್‌ಗಳಿಗೆ ಆಲೌಟ್ ಆಯಿತು. ಆಸ್ಪ್ರೇಲಿಯಾ ವಾರ್ನರ್ (67), ಫಿಂಚ್ (60)ರ ಭರ್ಜರಿ ಬ್ಯಾಟಿಂಗ್‌ನಿಂದ 7 ವಿಕೆಟ್‌ಗೆ 258 ರನ್ ಗಳಿಸಿತ್ತು.
ಸ್ಕೋರ್: ಆಸ್ಪ್ರೇಲಿಯಾ 258/7, ನ್ಯೂಜಿಲೆಂಡ್ 187/10
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.