ಕೊರೋನಾ ವೈರಸ್ ಆತಂಕದಿಂದ ಭಾರತದ ಪ್ರತಿಷ್ಠಿತ ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ರದ್ದು ಮಾಡಿದ ಬಿಸಿಸಿಐ ಇದೀಗ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನೂ ಕ್ಯಾನ್ಸಲ್ ಮಾಡಿದೆ.
ಮುಂಬೈ(ಮಾ.13): ಭಾರತೀಯ ಕ್ರಿಕೆಟ್ ಮೇಲೆ ಕೊರೋನಾ ವೈರಸ್ ಹಾವಳಿ ವಿಪರೀತವಾಗಿದೆ. ಐಪಿಎಲ್ ಟೂರ್ನಿ ರದ್ದು ಮಾಡಿದ ಬೆನ್ನಲ್ಲೇ ಇದೀಗ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ತವರಿನ ಏಕದಿನ ಸರಣಿಯನ್ನೂ ರದ್ದು ಮಾಡಿದೆ. ಬಿಸಿಸಿಐ ಸೆಕ್ರೆಟರಿ ಜಯ್ ಶಾ ಸರಣಿ ರದ್ದು ಮಾಡಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕೊರೋನಾ ವೈರಸ್; IPL 2020 ಟೂರ್ನಿ ರದ್ದು ಮಾಡಿದ ಬಿಸಿಸಿಐ
undefined
ಐಪಿಎಲ್ ಟೂರ್ನಿಯನ್ನು ಎಪ್ರಿಲ್ 15ರ ವರೆಗೆ ರದ್ದು ಮಾಡಿದ ಬಿಸಿಸಿಐ, ಇಂಡೋ-ಆಫ್ರಿಕಾ ಏಕದಿನ ಸರಣಿಯನ್ನ ಆಯೋಜಿಸಲು ತೀರ್ಮಾನಿಸಿತ್ತು. ಅಭಿಮಾನಿಗಳ ಕ್ರೀಡಾಂಗಣ ಪ್ರವೇಶ ನಿರ್ಬಂಧ ವಿದಿಸಿ ಪಂದ್ಯ ಆಡಿಸಲು ನಿರ್ಧರಿಸಲಾಗಿತ್ತು. ಆದರೆ ಕ್ರಿಕೆಟ್ ಸೌತ್ ಆಫ್ರಿಕಾ ಜೊತೆ ಮಾತುಕತೆ ನಡೆಸಿದ ಬಿಸಿಸಿಐ ಸಂಪೂರ್ಣ ಟೂರ್ನಿ ರದ್ದು ಮಾಡಿತು.
ಇದನ್ನೂ ಓದಿ: ಕ್ರಿಕೆಟ್‌ಗೆ ಕೊರೋನಾ ವೈರಸ್ ಬಿಸಿ; KSCA ಪ್ರಶಸ್ತಿ ಸಮಾರಂಭ ಮುಂದೂಡಿಕೆ!...
ಭಾರತ -ಸೌತ್ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದ ರದ್ದಾಗಿತ್ತು. ಮಾರ್ಚ್ 15 ಹಾಗೂ 18 ರಂದು 2 ಮತ್ತು 3ನೇ ಏಕದಿನ ಪಂದ್ಯ ಆಯೋಜನೆಗೊಂಡಿತ್ತು. ಇದೀಗ ಸಂಪೂರ್ಣ ಟೂರ್ನಿ ರದ್ದಾಗಿದೆ. ಸರಣಿ ಆಯೋಜನೆ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.