ರೋಹಿತ್ ಶರ್ಮಾ ಕಟ್ಟಿದ್ದ 3.25 ಕೋಟಿ ರೂ ವಾಚ್ ಕದಿಯಲು ಯತ್ನಿಸಿದ್ರಾ ಫ್ಯಾನ್ಸ್, ದೃಶ್ಯ ಸೆರೆ

Published : May 09, 2026, 04:14 PM IST
Rohit Sharma Watch

ಸಾರಾಂಶ

ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಅಭಿಮಾನಿಗಳಿಗೆ ಕೈಕುಲುತ್ತಾ ಸಾಗುವ ವೇಳೆ ಕಟ್ಟಿದ್ದ 3.25 ಕೋಟಿ ಮೌಲ್ಯದ ವಾಚ್ ಕದಿಯಲು ಯತ್ನಿಸಿದ ಘಟನೆಯೊಂದು ನಡೆದಿದೆ. ಈ ದೃಶ್ಯ ಸೆರೆಯಾಗಿದ್ದು, ಭಾರಿ ಚರ್ಚೆಯಾಗುತ್ತಿದೆ.

ಮುಂಬೈ (ಮೇ.09) ಐಪಿಎಲ್ ಟೂರ್ನಿ ನಡುವೆ ಕ್ರಿಕೆಟಿಗರು ಫ್ಯಾನ್ಸ್ ಜೊತೆ ಮಾತುಕತೆ, ಸಂವಾದ ಸಹಜ. ಸಾರ್ವಜನಿಕ ಕಾರ್ಯಕ್ರಮಗಳಲ್ಲೂ ಪಾಲ್ಗೊಳ್ಳುತ್ತಾರೆ. ಜೊತೆಗೆ ಬ್ರ್ಯಾಂಡ್ ಪ್ರಮೋಶನ್ ಸೇರಿದಂತೆ ಹಲವು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೀಗೆ ಮುಂಬೈ ಇಂಡಿಯನ್ಸ್ ಕ್ರಿಕೆಟಿಗ ರೋಹಿತ್ ಶರ್ಮಾ ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಾರಿನಲ್ಲಿ ಆಗಮಿಸಿದ ರೋಹಿತ್ ಶರ್ಮಾ, ಹೊರಗಿದ್ದ ಪುಟಾಣಿ ಅಭಿಮಾನಿಳಿಗೆ ಕೈಕುಲುಕಿ ಸಂಬ್ರಮಪಡಿಸಲು ಮುಂದಾಗಿದ್ದಾರೆ. ಆದರೆ ಈ ಪುಟಾಣಿ ಅಭಿಮಾನಿಗಳು ರೋಹಿತ್ ಶರ್ಮಾ ಕೈ ಹಿಡಿದು ಎಳೆದು ವಾಚ್ ಕಳವು ಮಾಡುವ ಪ್ರಯತ್ನ ನಡೆದಿದೆ ಎಂದು ವರದಿಯಾಗಿದೆ. ಈ ಕುರಿತ ವಿಡಿಯೋಗಳು ಸೆರೆಯಾಗಿದೆ.

ದೃಶ್ಯದಲ್ಲಿ ಸೆರೆಯಾದ ಪ್ರಯತ್ನ

ದೃಶ್ಯದಲ್ಲಿ ರೋಹಿತ್ ಶರ್ಮಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದಾರೆ. ಅಭಿಮಾನಿಗಳು ಫೋಟೋ ತೆಗೆಯಲು, ಶುಭಕೋರಲು ಕಾದು ಕುಳಿತಿದ್ದರು. ಕಾರು ನಿಧಾನವಾಗಿ ಚಲಿಸುತ್ತಿತ್ತು. ಈ ವೇಳೆ ರೋಹಿತ್ ಶರ್ಮಾ ಕಾರಿನ ಹಿಂಬದಿಯ ವಿಂಡೋ ತೆರೆದು ಕೈ ಹೊರಗೆ ಹಾಕಿದ್ದಾರೆ. ಬಳಿಕ ಕಾರಿನ ಪಕ್ಕಕ್ಕೆ ಆಗಮಿಸಿದ ಅಭಿಮಾನಿಗಳಿಗೆ ಕೈಕುಲುಕಲು ಮುಂದಾಗಿದ್ದಾರೆ. ಆರಂಭದಲ್ಲಿ ಎಲ್ಲವೂ ಒಕೆ ಆಗಿತ್ತು. ಕೆಲ ಅಭಿಮಾನಿಗಳು, ಪುಟಾಣಿಗಳು ರೋಹಿತ್ ಶರ್ಮಾ ಕೈ ಕುಲುಕಿ ಸಂಭ್ರಮಿಸಿದರು.

3.25 ಕೋಟಿ ರೂಪಾಯಿ ಮೌಲ್ಯದ ವಾಚ್

ಆದರೆ ಓರ್ವ ಪುಟಾಣಿ ಅಭಿಮಾನಿ ನೇರವಾಗಿ ರೋಹಿತ್ ಶರ್ಮಾ ಕೈಗೆ ಕಟ್ಟಿದ ವಾಚ್ ಬಳಿ ಹಿಡಿದು ಎಳೆಯುವ ಪ್ರಯತ್ನ ಮಾಡಿದ್ದಾನೆ. ರೋಹಿತ್ ಶರ್ಮಾ ಕೈಗಳನ್ನು ತಳ್ಳಿದರೂ ಅಭಿಮಾನಿ ಮಾತ್ರ ತನ್ನ ಎರಡು ಕೈಗಳಿಂದ ರೋಹಿತ್ ಶರ್ಮಾ ಕೈಯಲ್ಲಿದ್ದ ಬರೋಬ್ಬರಿ 3.25 ಕೋಟಿ ರೂಪಾಯಿ ಮೌಲ್ಯದ ವಾಚ್ ಎಳೆಯುವ ಪ್ರಯತ್ನ ಮಾಡಿದ್ದಾನೆ.

ಪರಿಸ್ಥಿತಿ ಅರಿತ ರೋಹಿತ್ ಶರ್ಮಾ ತಕ್ಷಣವೇ ತಮ್ಮ ಕೈಗಳನ್ನು ಎಳೆದುಕೊಂಡಿದ್ದಾರೆ. ಬಳಿಕ ಕಾರಿನ ಒಳಗಿನಿಂದಲೇ ಅಭಿಮಾನಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಇಷ್ಟೇ ಅಲ್ಲ ಅಷ್ಟೇ ವೇಗದಲ್ಲಿ ಕಾರಿನ ವಿಂಡೋ ಕ್ಲೋಸ್ ಮಾಡಿ ಸ್ಥಳದಿಂದ ತೆರಳಿದ್ದಾರೆ. ಈ ಸಂಪೂರ್ಣ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ.

 

 

ಐಪಿಎಲ್‌ನಲ್ಲಿ ರೋಹಿತ್ ಅಬ್ಬರ

ಐಪಿಎಲ್ 2026 ಟೂರ್ನಿಯಲ್ಲಿ ರೋಹಿತ್ ಶರ್ಮಾ ಅಬ್ಬರಿಸುತ್ತಿದ್ದಾರೆ. ಲಖನೌ ಸೂಪರ್‌ಜೈಂಟ್ಸ್ ವಿರುದ್ಧ ರೋಹಿತ್ ಶರ್ಮಾ 44 ಎಸೆತದಲ್ಲಿ 84 ರನ್ ಸಿಡಿಸಿದ್ದರು. ಈ ಮೂಲಕ ಮುಂಬೈ ಇಂಡಿಯನ್ಸ್ 229 ರನ್ ಟಾರ್ಗೆಟ್ ಚೇಸ್ ಮಾಡಿ ಗೆಲುವಿನ ಸಂಭ್ರಮ ಆಚರಿಸಿತ್ತು. ಆದರೆ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ವಿಫಲವಾಗಿದೆ. 10 ಪಂದ್ಯದಲ್ಲಿ 7 ಪಂದ್ಯಗಳನ್ನು ಸೋತರೆ, ಕೇವಲ 3 ಗೆಲುವು ಕಂಡಿದೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ 2026 ವೀಕ್ಷಕರ ಸಂಖ್ಯೆಯಲ್ಲಿ ಭಾರಿ ಇಳಿಮುಖ: ಟಿವಿ ರೇಟಿಂಗ್ ಮಹಾ ಕುಸಿತ!
ಸತತ 2 ಸೋಲಿನ ಬಳಿಕ ಆರ್‌ಸಿಬಿ, ಸತತ 4 ಗೆಲುವಿನಿಂದ ಕೆಕೆಆರ್ ಪ್ಲೇ ಆಫ್ ಚಾನ್ಸ್ ಬದಲಾಗಿದ್ದು ಹೇಗೆ?