ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

Published : Dec 29, 2019, 06:11 PM IST
ರಜಾ ದಿನ ಕೆಲಸ ಇಷ್ಟವಿಲ್ಲ; ಗಂಗೂಲಿಗೆ ಫ್ಯಾನ್ಸ್ ಭರ್ಜರಿ ಪ್ರತಿಕ್ರಿಯೆ!

ಸಾರಾಂಶ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಟ್ವೀಟ್ ಮತ್ತೆ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಪುತ್ರಿಗೆ ಪ್ರತಿಕ್ರಿಯೆ ನೀಡಿ ವೈರಲ್ ಆಗಿದ್ದ ಗಂಗೂಲಿ ಇದೀಗ ರಜಾ ದಿನದಲ್ಲಿ ಕೆಲಸ ಇಷ್ಟವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಅಭಿಮಾನಿಗಳು ಹಲವು ಸಲಹೆ ನೀಡಿದ್ದಾರೆ.

ಮುಂಬೈ(ಡಿ.29): ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಧಿಕಾರವದಿ ವಿಸ್ತರಿಸುವಂತೆ ಈಗಾಗಲೇ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗಿದೆ. ಅಲ್ಪ ಅವಧಿಯಲ್ಲಿ ಗಂಗೂಲಿ ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ರಜಾ ದಿನದಲ್ಲೂ ಗಂಗೂಲಿ ತಮ್ಮ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕುರಿತು ಗಂಗೂಲಿ ಟ್ವೀಟ್ ಮೂಲಕ ಭಾನುವಾರ ಕೆಲಸ ಮಾಡುವುದು ಇಷ್ಟವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

 

ಇದನ್ನೂ ಓದಿ: ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಪಾರ್ಕ್‌ನಲ್ಲಿ ನಿಂತಿರುವ ಫೋಟೋ ಪೋಸ್ಟ್ ಮಾಡಿದ ಗಂಗೂಲಿ ಭಾನುವರಾ ಕೆಲಸ ಇಷ್ಟವಿಲ್ಲ ಎಂದಿದ್ದಾರೆ. ಗಂಗೂಲಿ ಟ್ವೀಟ್‌ಗೆ ಅಭಿಮಾನಿಗಳು ಪ್ರತಿಕ್ರಿಯೆ ನೀಡಿದ್ದಾರೆ. ಪಾರ್ಕ್‌ನಲ್ಲಿ ನಿಂತು ಕೆಲಸ ಎಂದರೆ ಹೇಗೆ? ಬಿಸಿಸಿಐ ಬಾಸ್ ಆಗಿರುವಾಗ ರಜಾ ದಿನ ಕೆಲಸ ಮಾಡಿ ಎಂದವರ್ಯಾರು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಪುತ್ರಿ ಸನಾ ವಿರುದ್ದ ಸೋಲೋಪ್ಪಿಕೊಂಡ ಸೌರವ್ ಗಂಗೂಲಿ!

ರಜಾ ದಿನವೂ ಕೆಲಸ, ಹೀಗಾಗಿ ದಾದಿ ಎಂದು ಕೆಲವರು ಕರೆದಿದ್ದಾರೆ. ರಜಾ ದಿನದಲ್ಲಿ ಕೆಲಸ ಇಷ್ಟವಿಲ್ಲ ಎಂದಾದರೆ ಸೋಮವಾರ ಮಾಡಿ ಎಂದು ಸಲಹೆ ನೀಡಿದ್ದಾರೆ. 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್