ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಗಂಗೂಲಿ ಖಡಕ್ ಮಾತು!

Published : Dec 29, 2019, 03:34 PM IST
ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಗಂಗೂಲಿ ಖಡಕ್ ಮಾತು!

ಸಾರಾಂಶ

ಕ್ರೀಡಾಪಟುಗಳಿಗೆ ಫಿಟ್ನೆಸ್ ಅತ್ಯತ್ಯ. ಇದೀಗ ಕ್ರಿಕೆಟ್‌ನಲ್ಲಿ ಫಿಟ್ನೆಸ್‌ಗೆ ಹೆಚ್ಚಿನ ಆದ್ಯತೆ. ಟೀಂ ಇಂಡಿಯಾ ಈಗಾಗಲೇ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ನಾಯಕ ವಿರಾಟ್ ಕೊಹ್ಲಿ ಭಾರತ ತಂಡದಲ್ಲಿ ಫಿಟ್ನೆಸ್‍‌ಗೆ ಹೆಚ್ಚಿನ ಒತ್ತು ನೀಡಿದರು. ಯೋ-ಯೋ ಟೆಸ್ಟ್ ಕಡ್ಡಾಯ ಕುರಿತು ಪರ ವಿರೋಧಗಳಿವೆ. ಇದೀಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋ-ಯೋ ಟೆಸ್ಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಮುಂಬೈ(ಡಿ.29): ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ಭರಾತದ ಕ್ರಿಕೆಟ್ ತ್ವರಿತಗತಿಯಲ್ಲಿ ಬದಲಾವಣೆ ಕಾಣುತ್ತಿದೆ. ಈಗಾಗಲೇ ಟೀಂ ಇಂಡಿಯಾದಲ್ಲಿ ಯೋ-ಯೋ ಫಿಟ್ನೆಸ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಇದಕ್ಕೆ ಹಲವು ಹಿರಿಯ ಕ್ರಿಕೆಟಿಗರು ವಿರೋಧ ವ್ಯಕ್ತಪಡಸಿದ್ದರು. ಈ ಕುರಿತು ಸೌರವ್ ಗಂಗೂಲಿ ಸ್ಪಷ್ಟ ಉತ್ತರ ನೀಡೋ ಮೂಲಕ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಇದನ್ನೂ ಓದಿ: ಧೋನಿ ಭವಿಷ್ಯ; ಗಂಗೂಲಿ ಹೇಳಿಕೆಯಿಂದ ಹೆಚ್ಚಿದ ಆತಂಕ!

ಯೋ-ಯೋ ಟೆಸ್ಟ್ ಕಡ್ಡಾಯ ಮಾಡಬೇಕೇ ಬೇಡವೇ ಕುರಿತು ಹಲವು ದಿನಗಳಿಂದ ಚರ್ಚೆಯಾಗುತ್ತಿದೆ. ಇದೀಗ ಸೌರವ್ ಗಂಗೂಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಯಕ ವಿರಾಟ್ ಕೊಹ್ಲಿ, ಕೋಚ್ ರವಿ ಶಾಸ್ತ್ರಿ ಹಾಗೂ ಟೀಂ ಮ್ಯಾನೇಜ್ಮೆಂಟ್ ಯೋ-ಯೋ ಟೆಸ್ಟ್ ಕಡ್ಡಾಯ ಮಾಡಿದೆ. ಇದರಲ್ಲಿ ಬಿಸಿಸಿಐ ಮಧ್ಯ ಪ್ರವೇಶಿಸುವುದಿಲ್ಲ ಎಂದು ಗಂಗೂಲಿ ಹೇಳಿದ್ದಾರೆ. ಈ ಮೂಲಕ ಫಿಟ್ನೆಸ್ ಟೆಸ್ಟ್ ಕಡ್ಡಾಯ ಅನ್ನೋದನ್ನು ಬಹಿರಂಗವಾಗಿ ಸೂಚಿಸಿದ್ದಾರೆ.

ಇದನ್ನೂ ಓದಿ: ಡೇ & ನೈಟ್ ಟೆಸ್ಟ್‌ಗೆ ಕ್ರೀಡಾಂಗಣ ನಿಗದಿ; ಬೆಂಗಳೂರಿಗೆ ದಾದಾ ಕೊಡುಗೆ!.

ತಂಡ ಯೋ ಯೋ ಟೆಸ್ಟ್ ಅಳವಡಿಸಿಕೊಂಡಿದೆ. ಇದರಲ್ಲಿ ಬಿಸಿಸಿಐ ಯಾವುದೇ ಬದಲಾವಣೆ ತರುವುದಿಲ್ಲ. ಇದು ಟೀಂ ಮ್ಯಾನೇಜ್ಮೆಂಟ್ ನಿರ್ಧಾರ ಎಂದು ಗಂಗೂಲಿ ಹೇಳಿದ್ದಾರೆ. ಯುವರಾಜ್ ಸಿಂಗ್, ಅಂಬಾಟಿ ರಾಯುಡು, ಮೊಹಮ್ಮದ್ ಶಮಿ ಸೇರದಂತೆ ಕೆಲ ಕ್ರಿಕೆಟಿಗರು ಫಿಟ್ನೆಸ್ ಟೆಸ್ಟ್ ಪಾಸಾಗದೇ ಟೀಕೆಗೆ ಗುರಿಯಾಗಿದ್ದರು. ಈ ವೇಳೆ ಯೋ-ಯೋ ಟೆಸ್ಟ್ ಅವಶ್ಯತೆ ಕುರಿತು ಪ್ರಶ್ನೆ ಎದ್ದಿತ್ತು. 
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಿವೀಸ್ ಸರಣಿ: ಶ್ರೇಯಸ್ ಅಯ್ಯರ್ ಕಮ್‌ಬ್ಯಾಕ್ ಮತ್ತಷ್ಟು ತಡ; ಈ ಆಟಗಾರನಿಗೆ ಚಾನ್ಸ್?
2025ರಲ್ಲಿ ಅತೀ ಹೆಚ್ಚು ಗೂಗಲ್‌ ಹುಡುಕಾಟದಲ್ಲಿ ಇವರೇ ಟಾಪ್! ಕ್ರಿಕೆಟ್ ಲೋಕದ ಅಚ್ಚರಿಯ ಮುಖಗಳಿವು