
ಬೆಂಗಳೂರು(ಮೇ.30) ಐಪಿಎಲ್ 2025ರ ಫೈನಲ್‌ಗೆ ಆರ್‌ಸಿಬಿ ಮೊದಲ ತಂಡವಾಗಿ ಪ್ರವೇಶ ಪಡೆದಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿತ್ತು. ಈ ಮೂಲಕ ನೇರವಾಗಿ ಫೈನಲ್ ಪ್ರವೇಶಿಸಿದೆ. ಪಂಜಾಬ್ ವಿರುದ್ಧ ಆರ್‌ಸಿಬಿ ಗೆಲುವು ದಾಖಲಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಜೋರಾಗಿದೆ. ಈ ಸಂಭ್ರಮದ ನಡುವೆ ಆರ್‌ಸಿಬಿ ಅಭಿಮಾನಿಯೊಬ್ಬ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾನೆ. ಆರ್‌ಸಿಬಿ ಜೂನ್ 3ರಂದು ಫೈನಲ್ ಪಂದ್ಯದಲ್ಲಿ ಗೆದ್ದು ಟ್ರೋಫಿ ಕೈವಶ ಮಾಡಿದರೆ ಆ ದಿನವನ್ನು ಸಾರ್ವತ್ರಿಕ ರಜೆ ಎಂದು ಘೋಷಿಸಲು ಪತ್ರ ಬರೆದಿದ್ದಾನೆ.
ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ
ಆರ್‌ಸಿಬಿ ಅಭಿಮಾನಿ ಶಿವನಂದ ಮಲ್ಲನ್ನವರ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಗೋಗಾಕ್ ಮೂಲದ ಶಿವನಾಂದ ಆರ್‌ಸಿಬಿ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಪತ್ರ ಬರೆದಿದ್ದಾರೆ. ಈ ಪತ್ರ ಇದೀಗ ವೈರಲ್ ಆಗಿದೆ.ರಾಜ್ಯದ ಪ್ರತಿ ಜಿಲ್ಲೆಯ ವತಿಯಿಂದ ಆರ್‌ಸಿಬಿ ಪರವಾಗಿ ಪತ್ರ ಬರೆದಿರುವುದಾಗಿ ಶಿವಾನಂದ ಹೇಳಿದ್ದಾರೆ. ಪ್ರಮುಖವಾಗಿ ಈ ಅಭಿಮಾನಿ, ಜೂನ್ 3ರ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ, ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಮನವಿ ಮಾಡಿದ್ದಾನೆ. ಈ ದಿನವನ್ನು ಕರ್ನಾಟಕ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ ಎಂದು ನಾಮಕರಣ ಮಾಡಬೇಕು ಎಂದು ಆಗ್ರಹಿಸಿದ್ದಾನೆ.
ಮುಂಬರುವ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಆ ದಿನವನ್ನು ಕರ್ನಾಟ ರಾಜ್ಯ ಆರ್‌ಸಿಬಿ ಫ್ಯಾನ್ಸ್ ಹಬ್ಬ ಎಂದು ಘೋಷಿಸಬೇಕು. ಜೊತೆಗೆ ಈ ದಿನವನ್ನು ಸರ್ಕಾರಿ ರಜೆ ಎಂದು ಘೋಷಿಸಲು ಅಭಿಮಾನಿ, ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾನೆ. ಅಭಿಮಾನಿಗಳ ಬಹು ದಿನಗಳ ಬೇಡಿಕೆಯನ್ನು ಆರ್‌ಸಿಬಿ ಈಡೇರಿಸಿದರೆ ಸರ್ಕಾರಿ ರಜೆ ಘೋಷಿಸಲು ಪತ್ರದಲ್ಲಿ ಮನವಿ ಮಾಡಲಾಗಿದೆ. ಕರ್ನಾಟಕ ರಾಜ್ಯೋತ್ಸವವನ್ನು ಪ್ರತಿ ಜಿಲ್ಲೆಯಲ್ಲಿ ಯಾವ ರೀತಿ ಆಚರಿಸಲಾಗುತ್ತದೋ, ಅದೇ ರೀತಿ ಆರ್‌ಸಿಬಿ ಫ್ಯಾನ್ಸ್ ಹಬ್ಬ ಆಚರಿಸಲು ಸರ್ಕಾರ ಅನುವು ಮಾಡಿಕೊಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮನವಿಯನ್ನು ಗಂಭೀರವಾಗಿ ಪರಿಗಣಿಸಿ
ಈ ಮನವಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರಿ ರಜೆ ಹಾಗೂ ಆರ್‌ಸಿಬಿ ಫ್ಯಾನ್ಸ್ ಹಬ್ಬ ಆಚರಿಸಲು ಅವಕಾಶ ನೀಡಬೇಕು ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇನೆ ಎಂದು ಪತ್ರದಲ್ಲಿ ಅಭಿಮಾನಿ ಶಿವಾನಂದ ಮನವಿ ಮಾಡಿಕೊಂಡಿದ್ದಾನೆ. ಇದು ಆರ್‌ಸಿಬಿ ಫ್ಯಾನ್ಸ್ ಪರವಾಗಿ ಕಳಕಳಿಯಿಂದ ವಿನಂತಿಸುವುದಾಗಿ ಮನವಿ ಮಾಡಿಕೊಂಡಿದ್ದಾನೆ. ವಿಶೇಷ ಅಂದರೆ ಆರ್‌ಸಿಬಿ ಅಭಿಮಾನಿ ಮೇ.28 ರಂದು ಈ ಪತ್ರ ಬರೆದಿದ್ದಾನೆ. ಆರ್‌ಸಿಬಿ ಫೈನಲ್ ಪ್ರವೇಶಕ್ಕೂ ಮುನ್ನವೇ ಈ ಪತ್ರ ಬರೆದು ಗಮನಸೆಳೆದಿದ್ದಾನೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.