ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ಗೆ ಆಘಾತ, ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಔಟ್..!

By Suvarna NewsFirst Published Feb 4, 2021, 5:07 PM IST
Highlights

ಇಂಗ್ಲೆಂಡ್ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ ಜಾಕ್‌ ಕ್ರಾವ್ಲಿ ಗಾಯದ ಸಮಸ್ಯೆಯಿಂದಾಗಿ ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ(ಫೆ.04): ಭಾರತ-ಇಂಗ್ಲೆಂಡ್ ತಂಡಗಳು 4 ಪಂದ್ಯಗಳ ಟೆಸ್ಟ್ ಸರಣಿಯಾಡಲು ಸಜ್ಜಾಗಿವೆ. ಫೆಬ್ರವರಿ 05ರಿಂದ ಚೆನ್ನೈನ ಎಂ ಎ ಚಿದಂಬರಂ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮೊದಲ ಟೆಸ್ಟ್‌ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್‌ ಯುವ ಪ್ರತಿಭಾನ್ವಿತ ಬ್ಯಾಟ್ಸ್‌ಮನ್‌ ಜಾಕ್ ಕ್ರಾವ್ಲಿ ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಬಿದ್ದಿದ್ದಾರೆ.

ಇಂಗ್ಲೆಂಡ್ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ ಜಾಕ್‌ ಕ್ರಾವ್ಲಿ ಡ್ರೆಸ್ಸಿಂಗ್‌ ರೂಂನಿಂದ ಮೈದಾನಕ್ಕೆ ತೆರಳುವ ವೇಳೆ ಮಾರ್ಬಲ್ಸ್ ಪ್ಲೋರ್‌ನಿಂದ ಜಾರಿ ಬಿದ್ದಿದ್ದು, ಬಲಗೈ ಮಣಿಕಟ್ಟಿನ ಗಾಯಕ್ಕೆ ತುತ್ತಾಗಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಜಾಕ್‌ ಕ್ರಾವ್ಲಿಯನ್ನು ಸ್ಕ್ಯಾನ್‌ಗೆ ಒಳಪಡಿಸಿದ್ದು, ವರದಿಯಲ್ಲಿ ಗಾಯದ ಪ್ರಮಾಣ ತೀವ್ರವಾಗಿರುವುದು ತಿಳಿದುಬಂದಿದೆ.

Official Statement: Zak Crawley

— England Cricket (@englandcricket)

ಭಾರತ ಸರಣಿಗೆ ಇಂಗ್ಲೆಂಡ್‌ ತಂಡ ಕೂಡಿಕೊಂಡ ಓಲಿ ಪೋಪ್‌

ಇದೀಗ ಮೊದಲ ಟೆಸ್ಟ್ ಪಂದ್ಯದಿಂದ ಜಾಕ್‌ ಕ್ರಾವ್ಲಿ ಹೊರಬಿದ್ದಿದ್ದು, ಅವರ ಸ್ಥಾನಕ್ಕೆ ಇತ್ತೀಚೆಗಷ್ಟೇ ಗಾಯದಿಂದ ಭುಜದ ನೋವಿನಿಂದ ಗುಣಮುಖರಾಗಿರುವ ಓಲಿ ಪೋಪ್‌ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ತಂಡದ ಪರ ರೋರಿ ಬರ್ನ್ಸ್ ಹಾಗೂ ಡಾಮ್ ಸಿಬ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆಯಿದೆ.
 

click me!