ಶತಕದ ತವಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ

Kannadaprabha News   | Asianet News
Published : Feb 04, 2021, 12:14 PM IST
ಶತಕದ ತವಕದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ

ಸಾರಾಂಶ

ಕಳೆದ 14 ತಿಂಗಳಿನಿಂದ ಶತಕದ ಬರ ಅನುಭವಿಸುತ್ತಿರುವ ವಿರಾಟ್ ಕೊಹ್ಲಿ ಇಂಗ್ಲೆಂಡ್‌ ವಿರುದ್ದ ಸರಣಿಯಲ್ಲಿ ಶತಕ ಸಿಡಿಸಲು ಕಾತರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ(ಫೆ.04): ರನ್‌ ಮಷಿನ್‌ ಎಂದೇ ಕರೆಸಿಕೊಳ್ಳುವ ವಿರಾಟ್‌ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ 14 ತಿಂಗಳುಗಳೇ ಕಳೆದಿವೆ. 2020ರಲ್ಲಿ ಒಂದೂ ಶತಕ ಬಾರಿಸದ ಕೊಹ್ಲಿ, ಇಂಗ್ಲೆಂಡ್‌ ವಿರುದ್ಧದ ಸರಣಿಗಳಲ್ಲಿ ಸೆಂಚುರಿ ಸಂಭ್ರಮ ಆಚರಿಸಲು ಕಾತರಿಸುತ್ತಿದ್ದಾರೆ.

ಕೊಹ್ಲಿ ಕೊನೆ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿದ್ದು 2019ರ ನ.22ರಂದು. ಬಾಂಗ್ಲಾದೇಶ ವಿರುದ್ದ ಕೋಲ್ಕತಾದಲ್ಲಿ ನಡೆದಿದ್ದ ಹಗಲು-ರಾತ್ರಿ ಟೆಸ್ಟ್‌ನಲ್ಲಿ ವಿರಾಟ್‌ 136 ರನ್‌ ಗಳಿಸಿದ್ದರು. ಇನ್ನು ಏಕದಿನದಲ್ಲಿ ಕೊನೆ ಶತಕ ಬಾರಿಸಿದ್ದು 2019ರ ಆಗಸ್ಟ್‌ನಲ್ಲಿ. ವಿಂಡೀಸ್‌ ವಿರುದ್ಧ ಪೋರ್ಟ್‌ ಆಫ್‌ ಸ್ಪೇನ್‌ನಲ್ಲಿ ಅಜೇಯ 114 ರನ್‌ ಗಳಿಸಿದ್ದರು. ಫೆ.5ರಿಂದ ಆರಂಭಗೊಳ್ಳಲಿರುವ ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌, ಕೊಹ್ಲಿ ಈ ವರ್ಷ ಆಡಲಿರುವ ಮೊದಲ ಪಂದ್ಯ. ಭರ್ಜರಿ ಶತಕದೊಂದಿಗೆ ವರ್ಷವನ್ನು ಆರಂಭಿಸಲು ಭಾರತ ತಂಡದ ನಾಯಕ ಎದುರು ನೋಡುತ್ತಿದ್ದಾರೆ.

ತವರಿನಲ್ಲಿ ಮತ್ತೊಂದು ಜಯಕ್ಕೆ ಟೀಂ ಇಂಡಿಯಾ ಕಾತರ..!

2ನೇ ಸ್ಥಾನಕ್ಕೆ ವಿರಾಟ್‌?

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿ ಒಟ್ಟು 70 ಶತಕ ಬಾರಿಸಿ ಗರಿಷ್ಠ ಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ. 100 ಶತಕ ಬಾರಿಸಿರುವ ಸಚಿನ್‌ ತೆಂಡುಲ್ಕರ್‌ ಮೊದಲ ಸ್ಥಾನದಲ್ಲಿದ್ದರೆ, 71 ಶತಕ ಬಾರಿಸಿರುವ ರಿಕಿ ಪಾಂಟಿಂಗ್‌ 2ನೇ ಸ್ಥಾನದಲ್ಲಿದ್ದಾರೆ. ಪಾಂಟಿಂಗ್‌ರನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲು ಕೊಹ್ಲಿಗೆ 2 ಶತಕಗಳ ಅವಶ್ಯಕತೆ ಇದೆ. ಇಂಗ್ಲೆಂಡ್‌ ವಿರುದ್ಧ ಭಾರತ 4 ಟೆಸ್ಟ್‌, 5 ಟಿ20, 3 ಏಕದಿನ ಪಂದ್ಯಗಳನ್ನಾಡಲಿದ್ದು, ಕೊಹ್ಲಿ ಮೇಲೆ ನಿರೀಕ್ಷೆ ಹೆಚ್ಚಾಗಿದೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಸಿಸಿಗೆ ಬಿಗ್ ಶಾಕ್ ಕೊಟ್ಟ ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್!
ಇಂದಿನಿಂದ ಭಾರತ-ದಕ್ಷಿಣ ಆಫ್ರಿಕಾ ಟಿ20 ಕದನ; ಭಾರತಕ್ಕಿದೆ ಬಿಗ್ ಚಾಲೆಂಜ್!