ಆತಿಥೇಯರು ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ಮಸಾಲೆಯುಕ್ತ ಆಹಾರದ ಬದಲಿಗೆ ಆರೋಗ್ಯಕರ ಆಹಾರ ನೀಡಲು ಬಯಸುತ್ತೇವೆ. ಕೋಚ್ ಬ್ರೆಂಡನ್ ಮೆಕ್ಕಲಂ ಸಹ ಈ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಮಂಡಳಿಯೇ ಬಾಣಸಿಗರಿಗೆ ಸಂಬಳ ನೀಡಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಟೆಲಿಗ್ರಾಫ್ ಉಲ್ಲೇಖಿಸಿದೆ.
ಬೆಂಗಳೂರು(ಜ.07) ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ಆರಂಭಕ್ಕೆ ಇನ್ನೂ 15 ದಿನ ಬಾಕಿ ಇದೆ. ಆಗ್ಲೇ ಈ ಟೆಸ್ಟ್ ಸಿರೀಸ್ ಕುತೂಹಲ ಕೆರಳಿಸುತ್ತಿದೆ. ಇಂಗ್ಲೆಂಡ್ ತಂಡ ತನ್ನ ಜೊತೆ ಇನ್ನೊಬ್ಬನ್ನ ಕರೆ ತರುತ್ತಿದೆ. ಆ ಸ್ಪೆಷಲ್ ವ್ಯಕ್ತಿಯಿಂದ ಭಾರತದಲ್ಲಿ ಚಮಾತ್ಕಾರ ಮಾಡಲು ಪ್ಲಾನ್ ಮಾಡಿದೆ. ಯಾರು ಆ ವ್ಯಕ್ತಿ ಅನ್ನೋದನ್ನ ನೀವೇ ನೋಡಿ.
ಟೆಸ್ಟ್ ಸರಣಿ ಗೆಲ್ಲೋದೇ ಇಂಗ್ಲೆಂಡ್ ಟಾರ್ಗೆಟ್..!
undefined
ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಪಾಯಿಂಟ್ ಟೇಬಲ್ನಲ್ಲಿ ಭಾರತ ತಂಡ 2ನೇ ಸ್ಥಾನಕ್ಕೆ ಜಾರಿದೆ. ಸೌತ್ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದಿದ್ದರೆ, ಟಾಪ್ನಲ್ಲಿ ಇರುತ್ತಿತ್ತು. ಆದ್ರೆ ಟೆಸ್ಟ್ ಸರಣಿ ಡ್ರಾ ಮಾಡಿಕೊಂಡು ನಿರಾಸೆ ಅನುಭವಿಸ್ತು. ಈಗ ಪಾಯಿಂಟ್ ಟೇಬಲ್ನಲ್ಲಿ ಟಾಪ್ಗೆ ಏರಬೇಕಾದ್ರೆ, ಭಾರತೀಯರು ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲಲೇ ಬೇಕು. ಜನವರಿ 25ರಿಂದ ಭಾರತದಲ್ಲಿ ಭಾರತ-ಇಂಗ್ಲೆಂಡ್ ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭವಾಗಲಿದೆ.
ಕಪಿಲ್ ದಾಖಲೆ ಮುರಿಯುವ ಹೊಸ್ತಿಲಲ್ಲಿ ಬುಮ್ರಾ..! ಸರ್ವಶ್ರೇಷ್ಠ ಫಾಸ್ಟ್ ಬೌಲರ್ ಆಗ್ತಾರಾ ಜಸ್ಪ್ರೀತ್..?
2ನೇ ಸ್ಥಾನದಲ್ಲಿರುವ ಭಾರತಕ್ಕೆ 8ನೇ ಸ್ಥಾನದಲ್ಲಿರುವ ಇಂಗ್ಲೆಂಡ್ ಬಿಗ್ ಫೈಟ್ ನೀಡುವ ನಿರೀಕ್ಷೆ ಇದೆ. ಮೂರು ವರ್ಷಗಳ ಬಳಿಕ ಭಾರತಕ್ಕೆ ಬರುತ್ತಿರುವ ಆಂಗ್ಲರು, ಭಾರತದಲ್ಲಿ ಭಾರತವನ್ನ ಸೋಲಿಸಲು ಎಲ್ಲಾ ತಯಾರಿ ಮಾಡಿಕೊಂಡೇ ಬರುತ್ತಿದೆ. ಟೆಸ್ಟ್ ಸರಣಿ ಗೆಲ್ಲಬೇಕು ಅಂದ್ರೆ ಎಲ್ಲಾ ಆಟಗಾರರು ಫಿಟ್ ಆಗಿ ಇರಬೇಕು. ಅದಕ್ಕೆ ಒತ್ತು ನೀಡಿರುವ ಆಂಗ್ಲರು, ಆಟಗಾರರ ಜೊತೆ ಇನ್ನೊಬ್ಬನ್ನ ಕರೆದುಕೊಂಡು ಬರುತ್ತಿದ್ದಾರೆ. ಆತನೇ ಚೆಫ್.
ಇಂಗ್ಲೆಂಡ್ ಜೊತೆ ಭಾರತಕ್ಕೆ ಬರಲಿದ್ದಾರೆ ಅಡುಗೆ ಭಟ್ಟ..!
ಯೆಸ್, ಐದು ಟೆಸ್ಟ್ ಪಂದ್ಯಗಳನ್ನಾಡಲು ಭಾರತ ಪ್ರವಾಸಕ್ಕಾಗಿ ಬರುತ್ತಿರುವ ಇಂಗ್ಲೆಂಡ್ ತಂಡ, ತನ್ನ ಜೊತೆ ವೈಯಕ್ತಿಕ ಬಾಣಸಿಗನನ್ನು ಕರೆದುಕೊಂಡು ಬರುತ್ತಿದೆ. ತಮ್ಮ ಆಟಗಾರರು ಅನಾರೋಗ್ಯಕ್ಕೆ ಒಳಗಾಗುವುದನ್ನ ತಪ್ಪಿಸಲು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಇಂತಹ ನಿರ್ಧಾರವನ್ನ ತೆಗೆದುಕೊಂಡಿದೆ. ದಿ ಟೆಲಿಗ್ರಾಫ್ ಪ್ರಕಾರ, ಇಂಗ್ಲಂಡ್ ತಂಡದ ಜೊತೆ ಅಡುಗೆ ಬಟ್ಟನೂ ಭಾರತಕ್ಕೆ ಬರಲಿದ್ದಾನೆ.
ಆತಿಥೇಯರು ಸೌಲಭ್ಯಗಳನ್ನು ಒದಗಿಸುತ್ತಾರೆ ಎಂದು ನಾವು ನಂಬುತ್ತೇವೆ. ಆದರೆ ಮಸಾಲೆಯುಕ್ತ ಆಹಾರದ ಬದಲಿಗೆ ಆರೋಗ್ಯಕರ ಆಹಾರ ನೀಡಲು ಬಯಸುತ್ತೇವೆ. ಕೋಚ್ ಬ್ರೆಂಡನ್ ಮೆಕ್ಕಲಂ ಸಹ ಈ ನಿರ್ಧಾರಕ್ಕೆ ಸಮ್ಮತಿಸಿದ್ದಾರೆ. ಮಂಡಳಿಯೇ ಬಾಣಸಿಗರಿಗೆ ಸಂಬಳ ನೀಡಲಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಅಧಿಕಾರಿಯೊಬ್ಬರು ಹೇಳಿರುವುದಾಗಿ ದಿ ಟೆಲಿಗ್ರಾಫ್ ಉಲ್ಲೇಖಿಸಿದೆ.
ಹುಕ್ಕಾ ಸ್ಮೋಕ್ ಮಾಡಿದ ಕೂಲ್ ಕ್ಯಾಪ್ಟನ್ ಎಂ ಎಸ್ ಧೋನಿ..! ವಿಡಿಯೋ ವೈರಲ್
ಚೆಫ್ ಒಮರ್ ಮೆಜಿಯಾನ್, ಇಂಗ್ಲೆಂಡ್ ಕ್ರಿಕೆಟ್ ತಂಡದೊಂದಿಗೆ ಭಾರತಕ್ಕೆ ಬರಲು ಸಿದ್ಧರಾಗಿದ್ದಾರೆ. ಅವರು ಇಂಗ್ಲೀಷ್ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಟ್ಗಾಗಿ ಕೆಲಸ ಮಾಡುತ್ತಾರೆ. ಫುಟ್ಬಾಲ್ ಮತ್ತು ರಗ್ಬಿ ತಂಡಗಳು ವಿದೇಶಿ ಪ್ರವಾಸಗಳಲ್ಲಿ ತಮ್ಮದೇ ಬಾಣಸಿಗರನ್ನು ಕರೆದುಕೊಂಡು ಹೋಗುವುದು ಸಾಮಾನ್ಯ. ಇಂಗ್ಲೆಂಡ್, ಕ್ರಿಕೆಟ್‌ನಲ್ಲಿ ಹಾಗೆ ಮಾಡಿದ ಮೊದಲ ತಂಡವಾಗಿದೆ.
2022ರ ಡಿಸೆಂಬರ್‌ನಲ್ಲಿ ಪಾಕಿಸ್ತಾನ ಪ್ರವಾಸಕೈಗೊಂಡಿದ್ದ ಇಂಗ್ಲೆಂಡ್, ಅಲ್ಲಿಗೂ ಬಾಣಸಿಗನನ್ನು ಕರೆದುಕೊಂಡು ಹೋಗಿತ್ತು. ಆದ್ರೆ ರಾವಲ್ಪಿಂಡಿಯಲ್ಲಿ ನಡೆದ ಮೊದಲ ಟೆಸ್ಟ್‌ಗೂ ಮುನ್ನವೇ ಇಂಗ್ಲೆಂಡ್ನ ಕೆಲ ಆಟಗಾರರು ಅನಾರೋಗ್ಯಕ್ಕೆ ಒಳಗಾಗಿದ್ದರು. ಪ್ಲೇಯಿಂಗ್-11 ಆಯ್ಕೆ ಮಾಡಲು ಆಟಗಾರರು ಇರಲಿಲ್ಲ. ಒಟ್ನಲ್ಲಿ ಇಂಗ್ಲೆಂಡ್ ಯುದ್ಧಕ್ಕೆ ಸಿದ್ದವಾಗಿಯೇ ಬರ್ತಿದೆ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್